“ಹೆಜ್ಜಾರು” ಸಾಂಗ್ ರಿಲೀಸ್: ಹಿಟ್ ಲಿಸ್ಟ್‌ಗೆ ಸೇರಿದ 'ಏನೇ ಮಳ್ಳಿ ಸಿಕ್ತೂ ನಿಂಗೆ' ಬ್ರೇಕಪ್ ಹಾಡು..!

Published : Oct 13, 2023, 01:30 PM IST
“ಹೆಜ್ಜಾರು” ಸಾಂಗ್ ರಿಲೀಸ್: ಹಿಟ್ ಲಿಸ್ಟ್‌ಗೆ ಸೇರಿದ 'ಏನೇ ಮಳ್ಳಿ ಸಿಕ್ತೂ ನಿಂಗೆ' ಬ್ರೇಕಪ್ ಹಾಡು..!

ಸಾರಾಂಶ

ಪೂರ್ಣಚಂದ್ರ ತೇಜಸ್ವಿ ಅವರು ಕಥೆಯ ಇನ್ಟೆನ್ಸಿಟಿ ಬೇಡುವ ವಿಶೇಷ ರೀತಿಯ ಹಾಡುಗಳನ್ನು ಕಂಪೋಸ್ ಮಾಡಿದ್ದು ಈ ಹಾಡಿಗಾಗಿ ತಾವು ಪಟ್ಟ ಪರಿಶ್ರಮ ಈಗ ಫಲ ಕೊಟ್ಟಿರುವುದಕ್ಕೆ ಕೇಳುಗರಿಗೆ ನಿರ್ದೇಶಕ ಹರ್ಷಪ್ರಿಯ ಧನ್ಯವಾದ ತಿಳಿಸಿದ ನಿರ್ದೇಶಕ ಹರ್ಷಪ್ರಿಯ 

ಬೆಂಗಳೂರು(ಅ.13): ಕನ್ನಡದ ಮೊಟ್ಟ ಮೊದಲ ಪ್ಯಾರಲಲ್ ಸ್ಟೋರಿ ಮೂವಿ ಎಂಬ ಹೆಗ್ಗಳಿಕೆಯೊಂದಿಗೆ ತೆರೆಗೆ ಬರಲು ಸಿದ್ಧವಾಗಿರೋ “ಹೆಜ್ಜಾರು” ಚಿತ್ರ ತಂಡ ಈಗ ತನ್ನ ಸಿನಿಮಾದ ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸಿದೆ. ಅದರ ಮೊದಲ ಹಂತವಾಗಿ ಚಿತ್ರದ ಮೊದಲನೇ ಹಾಡನ್ನು ಬಿಡುಗಡೆಗೊಳಿಸಿದ್ದು, ಬಿಡುಗಡೆಗೊಂಡ ಕಡಿಮೆ ಸಮಯದಲ್ಲೇ ಅದು ಹಿಟ್ ಲಿಸ್ಟ್ ಸೇರಿರುವ ಸಂಭ್ರಮದಲ್ಲಿ ಚಿತ್ರತಂಡ ಇದೆ. 

ನೀನೇ ಸಾಕಿದಾ ಗಿಣಿ ಹಾಡಿನಿಂದ ಹಂಗೋ ಹಿಂಗೋ ಇದ್ದೇ ನಾನು ಹಾಡಿನವರೆಗೂ ಹಿಟ್ ಆಗಿರುವ ಲೆಜೆಂಡರಿ ಬ್ರೇಕಪ್ ಹಾಡುಗಳ ಸಾಲಿಗೆ "ಏನೇ ಮಳ್ಳಿ ಸಿಕ್ತೂ ನಿಂಗೆ" ಕೂಡ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ನಿರ್ದೇಶಕ ಹರ್ಷಪ್ರಿಯ ಅವರ ಅಭಿಪ್ರಾಯ.

ಚಿತ್ರರಂಗಕ್ಕೆ ಮತ್ತೊಬ್ಬ ಸಂಗೀತ ನಿರ್ದೇಶಕಿ ಸಾಧ್ವಿನಿ ಕೊಪ್ಪ!

ಪೂರ್ಣಚಂದ್ರ ತೇಜಸ್ವಿ ಅವರು ಕಥೆಯ ಇನ್ಟೆನ್ಸಿಟಿ ಬೇಡುವ ವಿಶೇಷ ರೀತಿಯ ಹಾಡುಗಳನ್ನು ಕಂಪೋಸ್ ಮಾಡಿದ್ದು ಈ ಹಾಡಿಗಾಗಿ ತಾವು ಪಟ್ಟ ಪರಿಶ್ರಮ ಈಗ ಫಲ ಕೊಟ್ಟಿರುವುದಕ್ಕೆ ಕೇಳುಗರಿಗೆ ನಿರ್ದೇಶಕ ಹರ್ಷಪ್ರಿಯ ಧನ್ಯವಾದ ತಿಳಿಸಿದ್ದಾರೆ. ಹಿಟ್ ಸಾಂಗ್‌ಗಳ ಸರದಾರ ವಿಜಯ್ ಪ್ರಕಾಶ್ ರವರ ಧ್ವನಿ ಈ  ಹಾಡಿಗಿದೆ. ಇನ್ನು ಕಿರುತೆರೆಯ ಪುಟ್ಟಗೌರಿ ಮದುವೆ, ಅಕ್ಕ, ಗೀತಾ, ನಾಗಿಣಿ 2. ರಾಣಿ, ರಾಮಾಚಾರಿ ಮೊದಲಾದ ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿರುವ ಕೆ.ಎಸ್.ರಾಮ್ ಜೀ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಭಜರಂಗಿ ಮೋಹನ್ ಕೊರಿಯಾಗ್ರಫಿಯಲ್ಲಿ ಮೂಡಿ ಬಂದಿರುವ ಹುಕ್ ಸ್ಟೆಪ್‌ಗಳು ಈಗಿನ್ ರೀಲ್ಸ್ ಪ್ರಿಯರಿಗೆ ಹಬ್ಬವಾಗಿವೆ. 

ಮೊದಲ ಬಾರಿ ಹಿರಿತೆರೆಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಭಗತ್ ಆಳ್ವಾ ತಮ್ಮ ಮೊದಲ ಚಿತ್ರದಲ್ಲೇ ಇಂತಹದ್ದೊಂದು ಮಾಸ್ ಸಾಂಗ್‌ಗೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದ ಖುಶಿಯಲ್ಲಿದ್ದು ಜನರ ಪ್ರತಿಕ್ರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಖಾಸಗಿ ಪುಟಗಳು ಚಿತ್ರದಿಂದ ಪರಿಚಿತರಾಗಿರುವ ಲಿಯೋನಿಲ್ಲ ಶ್ವೇತಾ ಡಿಸೋಜಾ ಹೆಜ್ಜಾರು ಚಿತ್ರದ ನಾಯಕ ನಟಿಯಾಗಿದ್ದು, ವಿಶಿಷ್ಟ ಪಾತ್ರಕ್ಕೆ ಜೀವತುಂಬಿದ್ದಾರೆ. 

ಹತ್ತಾರು ಹಿಟ್ ಧಾರಾವಾಹಿಗಳು ಮತ್ತು ಸಿನೆಮಾಗಳ ಗೀತ ರಚನಕಾರರಾಗಿ ಜನಪ್ರಿಯರಾಗಿದ್ದ ಹರ್ಷಪ್ರಿಯ ಅವರು ಹೆಜ್ಜಾರು ಚಿತ್ರದ ಮೂಲಕ ನಿರ್ದೇಶಕರಾಗಿದ್ದು, ಸಿನೆಮಾದ ಎಲ್ಲ ಹಾಡುಗಳನ್ನೂ ಅವರೇ ಬರೆದಿದ್ದಾರೆ. ತಮ್ಮ ಗರಡಿಯಲ್ಲಿ ಪಳಗಿದ ಹರ್ಷಪ್ರಿಯ ಅವರ ಈ ಗೀತೆಯನ್ನು ಮೆಚ್ಚಿರುವ ಪ್ರೇಮಕವಿ ಕಲ್ಯಾಣ್ ತಮ್ಮ ಶಿಶ್ಯನ ಮೊದಲ ಚಿತ್ರಕ್ಕೆ ಶುಭ ಕೋರಿದ್ದಾರೆ. ಜೊತೆಗೆ ಕನ್ನಡದ ಹಿರಿಯ ನಿರ್ದೇಶಕರಾದ ಪ್ರೇಮ್ ಮತ್ತು ಶಶಾಂಶ್‌ ರವರು ಹಾಡಿನ ಬಗ್ಗೆ ಮೆಚ್ಚುಗೆಯ ಮಾತಾಡಿದ್ದು, ಸಿನೆಮಾ ಬಗ್ಗೆ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. 

ಅಚ್ಚರಿ ಮೂಡಿಸುತ್ತೆ ಸ್ಟಾರ್ಸ್ ಸಿಕ್ರೇಟ್‌ ಡಯೆಟ್: 72ರ ರಜಿನಿಕಾಂತ್ ಹೈ ಬಿಪಿ ಬಂದಾಗ ಏನ್ಮಾಡಿದ್ರು ಗೊತ್ತಾ?

ಚಿತ್ರದ ಕಾನ್ಸೆಪ್ಟ್ ಹೊಸದಾಗಿದ್ದು, ಪೋಸ್ಟರ್, ಪ್ರೊಮೋಷನಲ್ ಪ್ರೋಮೋಗಳಲ್ಲೂ ಚಿತ್ರತಂಡ ಹೊಸ ಹೊಸ ರೀತಿಯ ಪ್ರಯೋಗ ಮಾಡುತ್ತಿದೆ. 

ಭರವಸೆಯ ಪೋಷಕ ನಟ ಗೋಪಾಲ್ ದೇಶಪಾಂಡ್‌ ಪ್ರಮುಖ ಪಾತ್ರದಲ್ಲಿದ್ದಾರೆ ಮತ್ತು ನಾಯಕ, ನಿರ್ದೇಶಕ  ನವೀನ್ ಕ್ರಷ್ಣ ಮೊದಲ ಬಾರಿಗೆ ನೆಗಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅರುಣಾ ಬಾಲರಾಜ್ ಕೂಡ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖಾಕಿ ತೊಟ್ಟು ಎಷ್ಟೊಂದು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಹೆಜ್ಜಾರು ವಿನ ಪಾತ್ರ ಹೊಸ ಬಗೆಯದು ಅಂತ ನಟ ಮುನಿ ಹೇಳಿಕೊಂಡಿದ್ದಾರೆ. ಕ್ಯಾಮೆರಾ ಹಿಂದೆಯೇ ಬಿಸಿಯಾಗಿದ್ದ ವಿನೋದ್ ಭಾರತಿ ನಿರ್ದೇಶಕರ ಕೋರಿಕೆಗೆ ಒಪ್ಪಿ ಕ್ಯಾಮೆರಾ ಮುಂದೆ ಬಂದಿದ್ದು ಇವರೊಂದಿಗೆ ಬಹಳಷ್ಟು ರಂಗಭೂಮಿಯ ಹೊಸ ಕಲಾವಿದರನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. 

ಹಾಡಿನ ಲಿಂಕಿಗಾಗಿ ಇಲ್ಲಿ ಕ್ಲಿಕ್ ಮಾಡಿ : https://www.youtube.com/watch?v=ErwZUaDF79U

ಈಗಾಗಲೇ ಚಿತ್ರ ಫೂಟೇಜ್ ನೋಡಿರುವವರು ಅಮರ್ ಗೌಡ ಅವರ ಕ್ಯಾಮೆರಾ ಕೈಚಳಕವನ್ನು ಮೆಚ್ಚಿದ್ದು ಮಲೆನಾಡಿನ ಮಳೆಯನ್ನು ಅವರು ಸೆರೆ ಹಿಡಿದಿರುವ ರೀತಿ ನೋಡುಗರಿಗೆ ಖಂಡಿತಾ ಇಷ್ಟವಾಗುತ್ತದೆ ಎನ್ನುತ್ತಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಭಟ್ ಸಂಭಾಷಣೆ ಬರೆದಿದ್ದು ನರಸಿಂಹ ಸಾಹಸ ಸಂಯೋಚನೆ ಮಾಡಿದ್ದಾರೆ. ಗಿರೀಶ್ ಕನಕಪುರ ಚಿತ್ರದ ಎಕ್ಸಿಕ್ಯುಟಿವ್ ಪ್ರೊಡ್ಯೂಸ್ ಆಗುವುದರ ಜೊತೆಗೆ ಕಲಾ ವಿಭಾಗವನ್ನೂ ನಿಭಾಯಿಸಿದ್ದಾರೆ, ಅಜಿತ್ ಡ್ರಾಕುಲಾ ಸಂಕಲನ ಮಾಡಿದ್ದು. ದಯಾನಂದ್ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Untold Love Story: ಸ್ಟಾರ್ ನಟನ ಎರಡನೇ ಪತ್ನಿಯ ಲವ್‌ನಲ್ಲಿ ಬಿದ್ದು ಒದ್ದಾಡಿದ್ದ ರಜನಿಕಾಂತ್!
Sandalwood Films: ರಿಲೀಸ್'ಗೂ ಮುನ್ನ ಭಾರಿ ನಿರೀಕ್ಷೆ ಹುಟ್ಟಿಸಿ, ಬಳಿಕ ಸೋತ ಕನ್ನಡ ಸಿನಿಮಾಗಳು