
ಪ್ರೇಮ್ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಚಿತ್ರವನ್ನು ರೂಪಿಸಿದ ತಂಡವೇ ಈ ಚಿತ್ರದ ತಯಾರಿ ಯೋಜನೆಯಲ್ಲಿ ನಿರತವಾಗಿದೆ. ಈ ಚಿತ್ರದ ಮೇಕಿಂಗ್ ಅದ್ದೂರಿಯಾಗಿ ಮಾಡುವ ಆಲೋಚನೆ ಇದೆ. ಈ ನಿಟ್ಟಿನಲ್ಲಿ ಹಾಲಿವುಡ್ ತಂತ್ರಜ್ಞರನ್ನು ಕರೆತರುವ ಪ್ಲಾನ್ ಇದೆ ಎಂಬುದು ನಿರ್ದೇಶಕ ಹಾಗೂ ನಿರ್ಮಾಪಕ ಡಾ ರಾಘವೇಂದ್ರ ಬಿಎಸ್ ಕೊಡುವ ಮಾಹಿತಿ. ಈ ಕಾರಣದಿಂದ ಇದೊಂದು ದೊಡ್ಡ ಬಜೆಟ್‌ನ ಸಿನಿಮಾವಾಗಲಿದೆ ಎನ್ನುತ್ತಾರೆ ಅವರು.
ಈಗಾಗಲೇ ಹಾಲಿವುಡ್ ತಂತ್ರಜ್ಞರ ಜತೆ ಮಾತುಕತೆ ಮಾಡಿದ್ದು, ಚಿತ್ರದ ಬಹುತೇಕ ಶೂಟಿಂಗ್ ವಿದೇಶಗಳಲ್ಲೇ ನಡೆಯಲಿದೆ. ಕಾರ್ಯಪ್ಪ ಅವರ ಬದುಕಿನ ನೈಜ ಘಟನೆಗಳನ್ನು ಆಧರಿಸಿ ಕತೆ ಮಾಡಲಾಗುತ್ತಿದೆ. ‘ಪ್ರೇಮಂ ಪೂಜ್ಯಂ’ ಚಿತ್ರ ಬಿಡುಗಡೆಯಾದ ಕೂಡಲೇ ಈ ಹೊಸ ಚಿತ್ರಕ್ಕೆ ಚಾಲನೆ ಕೊಡಲಾಗುವುದು. ಸದ್ಯದಲ್ಲೇ ಚಿತ್ರದ ಟೈಟಲ್ ಬಿಡುಗಡೆ ಮಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದಾರೆ.
‘ಕನ್ನಡ ನಾಡು ಕಂಡ ವೀರ ಯೋಧನ ಕತೆಯನ್ನು ಆಧರಿಸಿ ಈ ಸಿನಿಮಾ ಮಾಡಲಿದ್ದು, ಹಾಲಿವುಡ್ ತಾಂತ್ರಿಕತೆಯಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ರೂಪಿಸುವ ಉದ್ದೇಶ ನಮ್ಮದು. ಈ ಕಾರಣಕ್ಕೆ ಚಿತ್ರಕ್ಕೆ ಬಹು ಕೋಟಿ ವೆಚ್ಚ ಆಗಲಿದೆ’ ಎಂಬುದು ಡಾ. ರಾಘವೇಂದ್ರ ಬಿ ಎಸ್ ಮಾತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.