ಹತ್ತಿದ ಮೆಟ್ಟಿಲು ಮರೀಬಾರ್ದು, ಒದ್ದು ಹೋದರೆ ಏರಲು ಅವಕಾಶವಿಲ್ಲ: ರಶ್ಮಿಕಾಗೆ ಪ್ರಮೋದ್ ಶೆಟ್ಟಿ ಟಾಂಗ್

By Vaishnavi ChandrashekarFirst Published Dec 8, 2022, 2:32 PM IST
Highlights

 ರಶ್ಮಿಕಾ ವಿರುದ್ಧ ನಿಂತ ಅಭಿಮಾನಿಗಳು. ಮೊದಲ ಸಲ ಕಾಂಟ್ರವರ್ಸಿಗೆ ರಿಯಾಕ್ಟ್‌ ಮಾಡಿದ ನಟ ಪ್ರಮೋದ್ ಶೆಟ್ಟಿ....

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಿಂದ ಬೆಳೆದು ಇತ್ತರೆ ಭಾಷೆಗಳಲ್ಲಿ ಮಿಂಚುತ್ತಿರುವ ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ. ಸಾನ್ವಿನ ನ್ಯಾಷನಲ್ ಕ್ರಶ್ ಮಾಡಿರುವ ಜನರಿಗೆ ಗೌರವ ಸಿಗುತ್ತಿಲ್ಲ ಅವರುಗಳು ಡಿಮ್ಯಾಂಡ್‌ಗಳಿಗೆ ಪ್ರತಿಕ್ರಿಯೆ ಕೊಡದ ಕಾರಣ ಬೇಸರ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ರಶ್ಮಿಕಾ ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಮಾಡಬಾರದು ಎಂದು ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಕೆಲವು ದಿನಗಳ ರಿಷಬ್ ಶೆಟ್ಟಿ ಉತ್ತರ ಕೊಟ್ಟಿದ್ದರು ಈಗ ಪ್ರಮೋದ್ ಶೆಟ್ಟಿ ಟಾಂಗ್ ಕೊಟ್ಟಿದ್ದಾರೆ. 

ಪ್ರಮೋದ್ ಶೆಟ್ಟಿ ಹೇಳಿಕೆ:

'ರಶ್ಮಿಕಾನ ಬ್ಯಾನ್ ಮಾಡಬೇಕು ಆಕೆಯ ಸಿನಿಮಾಗಳನ್ನು ರಿಲೀಸ್ ಅಗಬಾರದು ಎಂದು ನಾವು ಹೇಳುವುದಿಲ್ಲ ಅದು ಅಭಿಮಾನಿಗಳ ಎಮೋಷನ್. ಯಾಕಂದರೆ ಅವರು ನಮ್ಮನ್ನು ಅಷ್ಟು ಪ್ರೀತಿ ಮಾಡಿರುತ್ತಾರೆ. ಅವರ ಪ್ರೀತಿಯನ್ನು ಈ ರೀತಿ ಹೊರ ಹಾಕುತ್ತಿದ್ದಾರೆ ಅಷ್ಟೆ. ಆದರೆ ಪ್ರತಿಯೊಬ್ಬರು ಹತ್ತಿದ ಮೆಟ್ಟಲು ಮರೀಬಾರ್ದು' ಎಂದು ಕನ್ನಡ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ಪ್ರತಿಯೊಬ್ಬರು ತಾವು ಹತ್ತಿದ ಮೆಟ್ಟಿಲನ್ನು ಮರೆಯಬಾರದು. ಮರೆತರೆ ಅದು ನಿಮ್ಮ ಇಷ್ಟ. ಹಲವು ವರ್ಷಗಳಿಂದ ಹತ್ತಿದ ಮೆಟ್ಟಿಲು ಮರೆಯಬೇಡ ಎಂದು ದೊಡ್ಡವರು ಹೇಳುತ್ತಾ ಬರ್ತಿದ್ದಾರೆ. ನೀವು ಹತ್ತಿದ ಮೆಟ್ಟಿಲನ್ನು ಒದ್ದು ಹೋದರೆ ಬೇರೆಯವರು ಏರಲು ಅವಕಾಶ ಇರುವುದಿಲ್ಲ. ಆ ಮೆಟ್ಟಿಲು ಹಾಗೆ ಇದ್ದರೆ ಮತ್ತೊಬ್ಬರು ಹತ್ತಿ ಮೇಲೆ ಬರುತ್ತಾರೆ. ರಕ್ಷಿತ್, ರಿಷಬ್ ಅಥವಾ ನಾನಾಗಿರಬಹುದು. ನಮ್ಮದು ದೊಡ್ಡ ತಂಡ. ಮೇಲೆ ಮೂವರು ಶೆಟ್ಟರು ಕಂಡರೂ ನಮ್ಮದು ಬಹಳ ದೊಡ್ಡ ಗ್ಯಾಂಗ್. ಸಾಕಷ್ಟು ಜನ ಅಂದ್ರೆ ಬೇರೆಯವರು ನಮ್ಮ ಬಳಗದಲ್ಲಿ ಇದ್ದಾರೆ ನಾವೆಲ್ಲಾ ಒಟ್ಟಿಗೆ ಹೋಗಬೇಕು ಎಂದು ಆಸೆ ಪಡುತ್ತೇವೆ. ಹತ್ತಿದ ಮೆಟ್ಟಿಲು ಹಾಗೇ ಇರಬೇಕು. ಇವರು ಮರೆತಿದ್ದಾರೆ ಎಂದು ನಾವೇನು ಮಾಡೋಕೆ ಆಗೋಲ್ಲ' ಎಂದು ಪ್ರಮೋದ್ ಹೇಳಿದ್ದಾರೆ.

ತೆಲುಗಿನಲ್ಲೂ ಹತ್ತಿಕೊಂಡಿದೆ ರಶ್ಮಿಕಾ ವಿರುದ್ಧ ಬೆಂಕಿ?

ತೆಲುಗಿನ ಖ್ಯಾತ ಸಿನಿಮಾ ಬರಹಗಾರ ತೋಟಾ ಪ್ರಸಾದ್ ರಶ್ಮಿಕಾ ವಿರುದ್ಧ ಸಂದರ್ಶನವೊಂದರಲ್ಲಿ ಕಿಡಿ ಕಾರಿದ್ದಾರೆ. ಆಕೆ ರಕ್ಷಿತ್ ಮಾತ್ರವಲ್ಲ, ನಟ ನಾಗ ಶೌರ್ಯ ಅವರನ್ನೂ ಕಡೆಗಣಿಸಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ತೋಟಾ ಪ್ರಸಾದ್ 'ಒಂದು ವೇಳೆ ರಶ್ಮಿಕಾ ಮಂದಣ್ಣಗೆ ಬ್ರೇಕ್ ಅಪ್ ಆದ ಕಾರಣಕ್ಕಾಗಿ ರಕ್ಷಿತ್ ಶೆಟ್ಟಿ ಹೆಸರನ್ನು ಹೇಳಲು ಇಷ್ಟವಿಲ್ಲದಿದ್ದರೆ ಬೇಡ, ಅವರ ಹೆಸರು ಹೇಳೋದು ಬೇಡ, ಆದರೆ ಆ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಹೆಸರನ್ನು ಹೇಳಬಹುದಿತ್ತು, ಇತರರ ಹೆಸರನ್ನಾದರೂ ಹೇಳಬಹುದಿತ್ತು, ಅಟ್‌ಲೀಸ್ಟ್ ಸಿನಿಮಾ ಹೆಸರನ್ನಾದರೂ ಹೇಳಬಹುದಿತ್ತು ಅಲ್ವಾ? ಆಕೆ ಹೆಸರನ್ನು ಹೇಳಿಲ್ಲ ಎಂದರೆ ಬೇಕಂತಲೇ ಈ ಥರದ ವರ್ತನೆ ತೋರಿದ್ದಾರೆ' ಎಂದು ಅಸಾಮಾಧಾನ ಹೊರ ಹಾಕಿದರು.

ಯುಟ್ಯೂಬ್‌ನಲ್ಲೂ 'ಶ್ರೀವಲ್ಲಿ' ಹವಾ; ಅತೀ ಹೆಚ್ಚು ವೀಕ್ಷಿಸಿದ ಹಾಡುಗಳ ಲಿಸ್ಟ್‌ನಲ್ಲಿ ಪುಷ್ಪ ನಂ.1

ಮಾತು ಮುಂದುವರಿಸಿ, 'ಈಕೆ ಕನ್ನಡ ಮಾತ್ರವಲ್ಲ ತೆಲುಗಿನ ಪ್ರಥಮ ಚಿತ್ರದ ವಿಷಯದಲ್ಲೂ ಇದೇ ರೀತಿ ನಡೆದುಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ರೀತಿಯೇ ತನ್ನ ಮೊದಲ ತೆಲುಗು ಚಿತ್ರದ ನಟನನ್ನು ಕಡೆಗಣಿಸಿದ್ದಾಳೆ. ಕಿರಿಕ್ ಪಾರ್ಟಿ(Kirik Party)ಯಲ್ಲಿ ರಕ್ಷಿತ್ ಶೆಟ್ಟಿ ಇರುವ ಕಾರಣ ಆತನ ಹೆಸರನ್ನು ಹೇಳಲಿಲ್ಲ ಎಂದುಕೊಳ್ಳಬಹುದು. ಆಕೆ ತೆಲುಗು ಚಿತ್ರರಂಗ ಪ್ರವೇಶಿಸಿದ ಚಲೋ ಚಿತ್ರದ ನಟ ನಾಗಶೌರ್ಯ ಹೆಸರನ್ನೂ ಹೇಳಿರಲಿಲ್ಲ. ಇತ್ತೀಚೆಗಷ್ಟೆ ಚಲೋ ಚಿತ್ರದ ವಾರ್ಷಿಕೋತ್ಸವದ ಕುರಿತು ಟ್ವೀಟ್(Tweet) ಮಾಡಿದ್ದ ರಶ್ಮಿಕಾ ಮಂದಣ್ಣ ನಿರ್ದೇಶಕನ ಹೆಸರನ್ನು ಉಲ್ಲೇಖಿಸಿ ನಟ ನಾಗಶೌರ್ಯ ಹೆಸರನ್ನು ಉಲ್ಲೇಖಿಸಲಿಲ್ಲ. ಎಷ್ಟೇ ಬೆಳೆದರೂ ನಮಗೆ ಮೊದಲು ತುತ್ತು ನೀಡಿದವರನ್ನು ಮರೆಯಬಾರದು, ಕೃತಜ್ಞತೆ ಇರಬೇಕು' ಅಂತ ಎಂದು ರಶ್ಮಿಕಾ ವಿರುದ್ಧ ತೋಟಾ ಪ್ರಸಾದ್ ಕಿಡಿ ಕಾರಿದ್ದಾರೆ. 

click me!