ಬಾಗಲಕೋಟೆ: ಅಭಿಮಾನಿ ಮನೆಗೆ ನಟ ಧ್ರುವ ಸರ್ಜಾ ಭೇಟಿ, ಸ್ಪೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್‌..!

By Kannadaprabha News  |  First Published Dec 7, 2022, 11:15 PM IST

ಹಿರೇಕೊಡಗಲಿ ಗ್ರಾಮದ ದರ್ಶನ ಮಾದರ ಎಂಬ ಅಭಿಮಾನಿಯ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿ ಕೆಲಕಾಲ ಕಳೆದರು ಚಿತ್ರನಟ ಧ್ರುವ ಸರ್ಜಾ 


ಬಾಗಲಕೋಟೆ/ಕುಷ್ಟಗಿ(ಡಿ.07): ಜಿಲ್ಲೆಯ ಇಳಕಲ್‌ ತಾಲೂಕಿನ ಹಿರೇಕೊಡಗಲಿ ಗ್ರಾಮದ ದರ್ಶನ ಮಾದರ ಎಂಬ ಅಭಿಮಾನಿಯ ಮನೆಗೆ ಚಿತ್ರನಟ ಧ್ರುವ ಸರ್ಜಾ ಭೇಟಿ ನೀಡಿದ್ದಾರೆ. ಕುಷ್ಟಗಿಯ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಹುಟ್ಟುಹಬ್ಬಕ್ಕಾಗಿ ಕುಷ್ಟಗಿ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿಯೇ ಇಳಕಲ್‌ ತಾಲೂಕಿನ ಹಿರೇಕೊಡಗಲಿ ಗ್ರಾಮದ ಅಭಿಮಾನಿಯ ಮನೆಗೆ ಆಗಮಿಸಿ, ಕುಶಲೋಪರಿ ವಿಚಾರಿಸಿ ಕೆಲಕಾಲ ಅಭಿಮಾನಿಯ ಮನೆಯಲ್ಲಿ ಕಾಲ ಕಳೆದರು. ಗ್ರಾಮಕ್ಕೆ ಧ್ರುವ ಸರ್ಜಾ ಬಂದ ಸುದ್ದಿ ತಿಳಿದ ಅಭಿಮಾನಿಗಳು ಮೆಚ್ಚಿನ ಚಿತ್ರನಟನೊಂದಿಗೆ ಸ್ಪೆಲ್ಫಿಗೆ ಮುಗಿಬಿದ್ದಿದ್ದರು.

ಧ್ರುವ ಸರ್ಜಾ ನೋಡಲು ಮುಗಿಬಿದ್ದ ಅಭಿಮಾನಿಗಳು

Tap to resize

Latest Videos

undefined

ಕುಷ್ಟಗಿ: ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಅವರ 50ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಧ್ರುವ ಸರ್ಜಾ ಅವರು ವರ್ಣರಂಜಿತ ವೇದಿಕೆಗೆ ಆಗಮಿಸುತ್ತಿದ್ದಂತೆ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು ಕಂಡುಬಂತು.

'ಕೆಡಿ'ಯಲ್ಲಿ ಹೊಸ ಅವತಾರದಲ್ಲಿ ಧ್ರುವ ಸರ್ಜಾ: 35 ಕೆ.ಜಿ ತೂಕ ಕಡಿಮೆ ಮಾಡಿಕೊಂಡ ಆಕ್ಷನ್ ಪ್ರಿನ್ಸ್

ಅಲ್ಲದೇ, ನಟ ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದಂತೆ ಅಭಿಮಾನಿಯೋರ್ವ ಅವರ ಕಾಲನ್ನು ಹಿಡಿದುಕೊಂಡು ನಾನು ನಿಮ್ಮ ಅಭಿಮಾನಿ ಪಟ್ಟು ಹಿಡಿದನು. ಪೊಲೀಸರು ಬ್ಯಾರಿಕೇಡ್‌ನಂತೆ ನಿಂತರೂ ಅಭಿಮಾನಿಗಳು ಪೊಲೀಸರನ್ನು ಭೇದಿಸಿ ನೆಚ್ಚಿನ ನಟ ಧ್ರುವ ಸರ್ಜಾ ಅವರನ್ನು ಭೇಟಿ ಮಾಡಿ, ಸೆಲ್ಫಿಗಾಗಿ ಹರಸಾಹಸ ಪಟ್ಟರು.

ಈ ವೇಳೆ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಕೆ. ಶರಣಪ್ಪ, ಪುರಸಭೆ ಅಧ್ಯಕ್ಷ ಗಂಗಾಧರಯ್ಯ ಹಿರೇಮಠ, ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ ಪತ್ತಾರ, ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು, ಹಾಲುಮತ ಸಮುದಾಯದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ, ಪ್ರಕಾಶ ಬೆದವಟ್ಟಿ, ಉಮೇಶ ಯಾದವ, ದೊಡ್ಡಬಸವ ಸುಂಕದ, ನಾಗರಾಜ ಮೇಲಿನಮನಿ ಸೇರಿದಂತೆ ಅನೇಕರು ಇದ್ದರು. ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್‌ಐ ಮೌನೇಶ ರಾಠೋಡ ಬಂದೋಬಸ್ತ್ ಒದಗಿಸಿದ್ದರು.
 

click me!