ಪ್ರಜ್ವಲ್ ದೇವರಾಜ್ ಬರ್ತ್‌ಡೇ ಸ್ಪೆಷಲ್; ನಂದ ಕಿಶೋರ್ ನಿರ್ದೇಶನದಲ್ಲಿ ಡೈನಾಮಿಕ್ ಪ್ರಿನ್ಸ್ ಹೊಸ ಚಿತ್ರ!

By Kannadaprabha News  |  First Published Jul 5, 2021, 9:30 AM IST

ನಟ ಪ್ರಜ್ವಲ್ ದೇವರಾಜ್ ಅವರ ಹುಟ್ಟು ಹಬ್ಬಕ್ಕೆ ಮೂರು ಚಿತ್ರಗಳು ಸದ್ದು ಮಾಡಿವೆ. ಟೀಸರ್, ಫಸ್‌ಟ್ ಲುಕ್ ಬಿಡುಗಡೆ ಜತೆಗೆ ಮತ್ತೊಂದು ಹೊಸ ಸಿನಿಮಾ ಸೆಟ್ಟೇರುವ ಮೂಲಕ ಪ್ರಜ್ವಲ್ ಅವರ ಹುಟ್ಟು ಹಬ್ಬವನ್ನು ಆಯಾ ಚಿತ್ರತಂಡಗಳು ರಂಗೇರಿಸಿವೆ.


ನಂದ ಕಿಶೋರ್ ನಿರ್ದೇಶನದಲ್ಲಿ ನಟನೆ

ನಿರ್ದೇಶಕ ಸುಮಂತ್ ಕ್ರಾಂತಿ ಈಗ ನಿರ್ಮಾಪಕರಾಗಿದ್ದಾರೆ. ನಾನಿ, ಕಾಲಚಕ್ರ ಹಾಗೂ ಬರ್ಕ್ಲಿ ಚಿತ್ರಗಳ ನಿರ್ದೇಶಕರೇ ಈ ಸುಮಂತ್ ಕ್ರಾಂತಿ. ಈಗ ನಂದಕಿಶೋರ್ ನಿರ್ದೇಶನದ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ಇದು ಪ್ರಜ್ವಲ್ ದೇವರಾಜ್ ನಟನೆಯ ಚಿತ್ರ. ಹುಟ್ಟು ಹಬ್ಬದ ಅಂಗವಾಗಿ ಈ ಹೊಸ ಚಿತ್ರವನ್ನು ಘೋಷಣೆ ಮಾಡಲಾಯಿತು. ಹೊಸ ನಿರ್ದೇಶಕನೊಬ್ಬ ಬಿಗ್ ಬಜೆಟ್ ಸಿನಿಮಾ ನಿರ್ಮಿಸುತ್ತಿರುವುದು ವಿಶೇಷ. ಇದೀಗ ಪ್ರಿಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ದೊರೆತಿದ್ದು, ಸದ್ಯದಲ್ಲೇ ಚಿತ್ರದ ಟೈಟಲ್ ಹಾಗೂ ಫಸ್‌ಟ್ ಲುಕ್ ರಿಲೀಸ್ ಮಾಡುವುದಾಗಿ ನಿರ್ಮಾಪಕ ಸುಮಂತ್ ಕ್ರಾಂತಿ ತಿಳಿಸಿದ್ದಾರೆ.

Tap to resize

Latest Videos

undefined

ವೀರಂ ಟೀಸರ್ ಬಿಡುಗಡೆ

ಶಶಿಧರ್ ನಿರ್ಮಾಣ ಹಾಗೂ ಖದರ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ವೀರಂ. ಪ್ರಜ್ವಲ್ ದೇವರಾಜ್ ಭಿನ್ನ ಬಗೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ಅವರ ಹುಟ್ಟುಹಬ್ಬದ ಪ್ರಯುಕ್ತ ಆನಂದ್ ಆಡಿಯೋ ಮೂಲಕ ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಪ್ರಜ್ವಲ್ ದೇವರಾಜ್‌ಗೆ ನಾಯಕಿಯಾಗಿ ರಚಿತಾರಾಮ್ ಅವರು ಕಾಣಿಸಿಕೊಂಡಿದ್ದಾರೆ. ಗ್ಲೂಗಿ, ಶಿವಲಿಂಗ, ಶ್ರಾವಣಿ ಸುಬ್ರಹ್ಮಣ್ಯ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಖದರ್ ಕುಮಾರ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದೊಂದು ಮಾಸ್ ಎಂಟರ್‌ಟೈನ್‌ಮೆಂಟ್ ಕತೆ ಹೊಂದಿರುವ ಚಿತ್ರ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಅವರು ವಿಶೇಷವಾದ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಸಾವು ನೋವಿನಲ್ಲಿ ಹುಟ್ಟುಹಬ್ಬವೇಕೆ?: ಪ್ರಜ್ವಲ್ ದೇವರಾಜ್ 

ಫಸ್‌ಟ್ ಲುಕ್, ಟೈಟಲ್ ಬಿಡುಗಡೆ

ಗುರುದತ್ ಗಾಣಿಗ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ಸಿನಿಮಾ ಮಾಡುತ್ತಾರೆಂಬುದು ಗೊತ್ತಿರುವ ಸುದ್ದಿ. ಈಗ ಚಿತ್ರದ ಹೆಸರು ಹಾಗೂ ಫಸ್‌ಟ್ ಲುಕ್ ಬಿಡುಗಡೆ ಆಗಿದೆ. ಚಿತ್ರಕ್ಕೆ ಮಾಫಿಯಾ ಎನ್ನುವ ಹೆಸರು ಇಡಲಾಗಿದೆ. ಪೊಲೀಸ್ ಡ್ರೆಸ್‌ನಲ್ಲಿ ಇದ್ದರೂ, ಕೈಗೆ ಬೇಡಿ ಹಾಕಿಕೊಂಡಿರುವ ಪ್ರಜ್ವಲ್ ಲುಕ್ಕು ಮಾಸ್ ಆಗಿದೆ. ಇದು ಪ್ರಜ್ವಲ್ ಅವರ 35ನೇ ಚಿತ್ರ. ಕುಮಾರ್ ಬಿ ಅವರು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಆಗಸ್‌ಟ್ನಲ್ಲಿ ಆರಂಭವಾಗಲಿದೆ. ಪ್ರಜ್ವಲ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.

click me!