
ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆಗೆ ಮಾತುಕತೆಗೆ ನಿಂತ ರಶ್ಮಿಕಾಗೆ ಅನೇಕ ಪ್ರಶ್ನೆಗಳು ಬಂದವು. ಅದರಲ್ಲೊಬ್ಬ ಅಬಿಮಾನಿ, ‘ನನ್ನ ಮದ್ವೆ ಆಗಿ’ ಅನ್ನೋ ರಿಕ್ವೆಸ್‌ಟ್ ಮಾಡಿದ. ಅದಕ್ಕೆ ರಶ್ಮಿಕಾ, ಕರೆಕ್ಟಾಗಿ ಪ್ರೊಪೋಸ್ ಮಾಡಿ ಅಂತ ತಮಾಷೆ ಮಾಡಿದ್ದಾರೆ. ಅಲ್ಲಿ ಕೇಳಿದ ಕೆಲವು ಇಂಟರೆಸ್ಟಿಂಗ್ ಪ್ರಶ್ನೆಗಳು ಮತ್ತು ರಶ್ಮಿಕಾ ಉತ್ತರ ಹೀಗಿದೆ:
ಉತ್ತಮ ನಟಿಯಾಗಲು ಏನಿರಬೇಕು, ಎಕ್‌ಸ್ಪ್ರೆಶನ್, ಫಿಟ್‌ನೆಸ್?
ಅದಕ್ಕಿಂತ ಮುಖ್ಯವಾಗಿ ಇರಬೇಕಾದ್ದು ಮಾನವೀಯತೆ.
ನಂಗೊಂದು ಒಳ್ಳೆ ಮಾತು ಹೇಳೋದಿದ್ರೆ?
ಜಗತ್ತಲ್ಲಿ ಯಾರೂ ಪರ್ಫೆಕ್‌ಟ್ ಅಲ್ಲ. ಬದುಕನ್ನು ಆನಂದಿಸುತ್ತಾ ಮುಂದೆ ಹೋಗ್ತಿರಬೇಕು.
ವಿಜಯ ದೇವರಕೊಂಡ ನಿಮಗೆಷ್ಟು ಸ್ಪೆಷಲ್?
ನನ್ ಬೆ.......ಸ್‌ಟ್ ಫ್ರೆಂಡ್!
ರಶ್ಮಿಕಾ ಮಂದಣ್ಣ ಸಿಗರೇಟ್ ಸೇದುವ ವಿಚಾರಕ್ಕೆ ಕಾಲೆಳೆದ ನೆಟ್ಟಿಗರು!
ನಿಮ್ ಥರದವ್ರನ್ನು ಮದ್ವೆ ಆದರೆ?
ನಿಮ್ ಲೈಫು ಚೆನ್ನಾಗಿರಬಹುದು, ಹಿತಮಿತ ಮಾತಿನ ಸಿಂಪಲ್ ಹುಡುಗಿ ನಾನು.
ದಿನಕ್ಕೆಷ್ಟು ಬಾರಿ ಸ್ಮೋಕ್ ಮಾಡ್ತೀರಾ?
ನಾನು ಧೂಮಪಾನ ಮಾಡಲ್ಲ. ಮಾಡೋರ ಹತ್ರನೂ ಸುಳಿದಾಡಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.