8 ಲಕ್ಷ ಲಗ್ನ ಪತ್ರಿಕೆ, ಮನೆ-ಮನೆಗೂ ಸೀರೆ, ಶರ್ಟ್, ಪಂಚೆ; ನಿಖಿಲ್‌ ಮದುವೆ ಸಂಭ್ರಮ!

Suvarna News   | Asianet News
Published : Mar 03, 2020, 11:38 AM ISTUpdated : Mar 03, 2020, 11:39 AM IST
8 ಲಕ್ಷ ಲಗ್ನ ಪತ್ರಿಕೆ, ಮನೆ-ಮನೆಗೂ ಸೀರೆ, ಶರ್ಟ್, ಪಂಚೆ; ನಿಖಿಲ್‌ ಮದುವೆ ಸಂಭ್ರಮ!

ಸಾರಾಂಶ

ಏಪ್ರಿಲ್‌ನಲ್ಲಿ ರಾಮನಗರದಲ್ಲಿ ಅದ್ಧೂರಿಯಾಗಿ ನಡೆಯಲಿರುವ ನಿಖಿಲ್‌-ರೇವತಿ ಮದುವೆ ಸಿದ್ಧತೆ ಜೋರಾಗಿದೆ. ಗೌಡರ ಕುಟುಂಬ ವಿಷೇಶವಾಗಿ ರಾಮನಗರ-ಚನ್ನಪಟ್ಟಣದ ಜನರಿಗೆ ಆಮಂತ್ರಣ ಪತ್ರಿಕೆ ಜೊತೆ ಉಡುಗೊರೆಯನ್ನೂ ನೀಡಲಿದ್ದಾರಂತೆ!

ಸ್ಯಾಂಡಲ್‌ವುಡ್ ಎಂಗ್‌ ಚಾರ್ಮ್‌ ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ಏಪ್ರಿಲ್‌ 17ರಂದು ಹಸೆಮಣೆ ಏರಲಿದ್ದಾರೆ. ಗೌಡರ ಕುಟುಂಬದ ಮದುವೆಯಾದ ಕಾರಣ ಅದ್ಧೂರಿಯಾಗಿ ರಾಮನಗರದಲ್ಲಿ ನಡೆಯಬೇಕು ಎಂದು ನಿರ್ಧರಿಸಿದ್ದಾರೆ. 

ನಿಶ್ಚಿತಾರ್ಥದಲ್ಲಿ ಅಪ್ಸರೆಯಂತೆ ಕಂಗೊಳಿಸಿದ ರೇವತಿ; ಮೇಕಪ್ ಆರ್ಟಿಸ್ಟ್ ಇವರೇ!

ರಾಜಕೀಯವಾಗಿ ಮಾತ್ರವಲ್ಲದೇ ಭಾವನಾತ್ಮಕವಾಗಿ ರಾಮನಗರ ಹಾಗೂ ಚನ್ನಪಟ್ಟಣದ ಜನತೆಯೊಂದಿಗೆ ನಂಟು ಹೊಂದಿರುವ ಕುಮಾರಸ್ವಾಮಿ ಕುಟುಂಬ ಪ್ರತೀ ಮನೆಗೂ ಆಮಂತ್ರಣ ಪತ್ರಿಕೆ ಜೊತೆ ಸೀರೆ, ಶರ್ಟ್‌ ಹಾಗೂ ಪಂಚೆಯನ್ನು ನೀಡಲಾಗುತ್ತದೆ ಎನ್ನಲಾಗಿದೆ.

ರೇವತಿ ಬಂದಿದ್ದೇ ತಡ ರಾಜಕಾರಣಿಯಾಗಿದ್ದ ನಿಖಿಲ್ ಕವಿಯಾಗ್ಬಿಟ್ರು!

ಈಗಾಗಲೇ 8 ಲಕ್ಷಕ್ಕೂ ಹೆಚ್ಚು ಆಮಂತ್ರಣ ಪತ್ರಿಕೆ ಸಿದ್ಧವಾಗಿದೆ. ಪ್ರತೀ ಹಳ್ಳಿಯ ಮುಖಂಡರ ಜೊತೆ ಚರ್ಚಿಸಿ ಎಷ್ಟು ಮನೆಗಳಿವೆ ಎಂದು ಮಾಹಿತಿ ಪಡೆದುಕೊಂಡಿದ್ದಾರಂತೆ. ರಾಮನಗರದಲ್ಲಿ ಸುಮಾರು 68 ಸಾವಿರ ಮನೆಗಳು ಹಾಗೂ ಚನ್ನಪಟ್ಟಣದಲ್ಲಿ ಸುಮಾರು 70 ಸಾವಿರ ಮನೆಗಳಿದೆ ಎಂಬ ಮಾಹಿತಿ ಇದೆ. ಅಷ್ಟೇ ಅಲ್ಲದೇ ಮದುವೆಗೆ ಲಕ್ಷಾಂತರ ಜನರು ಆಗಮಿಸುವ  ನಿರೀಕ್ಷೆ ಇದ್ದು, ಸುಮಾರು 1 ಸಾವಿರಕ್ಕೂ ಹೆಚ್ಚು ಅಡುಗೆ ಭಟ್ಟರನ್ನು ವ್ಯವಸ್ಥೆ ಮಾಡಲಾಗುತ್ತದೆಯಂತೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪ್ರಿಯಾಂಕಾ ಉಪೇಂದ್ರ ದಾಂಪತ್ಯ ಜೀವನಕ್ಕೆ 25 ವರ್ಷ: ಸ್ಟಾರ್ ಜೋಡಿಗಳ Love Story ಸೂಪರ್
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?