
ಕನ್ನಡ ಚಿತ್ರರಂಗದ ಹಿರಿಯ ನಟ ಮೋಹನ್ ಜುನೇಜಾ (Mohan Juneja) ಅವರು ಇಂದು ಬೆಳಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿ ಸ್ನೇಹಿತರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಮೋಹನ್ ಜುಹೇಜಾ ಅವರು ಮೂಲತಃ ತುರುವೇಕೆರೆ (Turuvekere) ಅವರು. ಅವರ ತಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಾಗ ಇಲ್ಲಿ ನೆಲೆಸಿದ್ದಾಗ ಮೋಹನ್ ಅವರು ಹುಟ್ಟಿದ್ದು. ಕೆಸಿ ಜೆನರಲ್ ಆಸ್ಪತ್ರೆಯಲ್ಲಿ (KC General HospitaL) ಮೋಹನ್ ಅವರು ಹುಟ್ಟಿದ್ದು ಎಂದು ರೇಖಾ ದಾಸ್ (Rekha Das) ಅವರ ಯೂಟ್ಯೂಬ್ (Youtube Channel) ಚಾನೆಲ್‌ನಲ್ಲಿ ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ.
ತಂದೆ ಕೆಲಸದ ಮೇಲೆ ವರ್ಗಾವಣೆ ಆಗುತ್ತಿದ್ದ ಕಾರಣ ಮೂರ್ನಾಲ್ಕು ಕಡೆ ವಿದ್ಯಾಭ್ಯಾಸ ಮಾಡಿದ್ದಾರೆ. 'ನಾನು ತುಂಬಾ ಅಂಕ ಪಡೆಯುತ್ತಿದ್ದೆ ಹೀಗಾಗಿ ದಿನ ಮೇಷ್ಟ್ರು ನಮ್ಮನ್ನು ಹೊಗಳುತ್ತಿದ್ದರು. ದಿನ ಬೆಳಗ್ಗೆ ಕಡಿ ಹಿಡಿದುಕೊಂಡು ನಿಲ್ಲುತ್ತಿದ್ದರು ಅವರನ್ನು ಆಟವಾಡಿಸಲು ನಾವು ಕಡ್ಡಿ ಮುರಿಯುತ್ತಿದ್ದೆವು. ಬಾಲ್ಯದಲ್ಲಿ ತುಂಬಾ ಸಾಧನೆ ಮಾಡಿದ್ದೀನಿ. ನನ್ನ ಸಹೋದರರಿಗೆ 10ನೇ ತರಗತಿಗೆ ಸೀಟ್ ಸಿಗುತ್ತಿತ್ತು ಆದರೆ ನನಗೆ ಎಲ್ಲೂ ಸಿಗಲಿಲ್ಲ. ಗಾಂಧಿ ನಗರದಲ್ಲಿರುವ (Gandhi Nagar) ಆರ್ಯಾ ಶಾಲೆಯಲ್ಲಿ ಓದಿದೆ. ಎರಡು ವಾರ ಕರೆಕ್ಟ್ ಆಗಿ ಶಾಲೆಗೆ ಹೋದೆವು ಆದರೆ ಅಲ್ಲಿಗೆ........' ಎಂದು ಶಾಲೆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಕನ್ನಡದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜಾ ಇನ್ನಿಲ್ಲ
ಸಿನಿಮಾ ಆಸಕ್ತಿ:
'ಶಾಲೆ ಪಕ್ಕದಲ್ಲಿ ಚಿತ್ರಮಂದಿರಗಳು ಇದ್ದ ಕಾರಣ ಗಮನ ಸೆಳೆದಿದ್ದು ಗಾಂಧಿ ನಗರದ ಕಡೆ. ಆಗ ಮಾರ್ನಿಂಗ್ ಶೋ, ನೂನ್ ಶೋ, ಮ್ಯಾಟ್ನಿ ಶೋ, ಫಸ್ಟ್ ಶೋ ಮತ್ತು ಸೆಕೆಂಡ್ ಶೋ ಸಿನಿಮಾ ಇರುತ್ತತ್ತು. ಶಾಲೆಗೆ ಹೋಗಿ ಅಟೆಂಡೆನ್ಸ್ ಹಾಕಿ ಸಿನಿಮಾ ಟಿಕೆಟ್ ತರಲು ಸ್ನೇಹಿತರನ್ನು ಕಳುಹಿಸುತ್ತಿದ್ದೆವು. ಮೇಷ್ಟ್ರುಗಳಿಗೆ ನಮ್ಮ ಗುಂಪು ನೋಡಿದರೆ ಭಯ ಆಗುತ್ತಿತ್ತು ಯಾಕಪ್ಪಾ ಬಂದಿದ್ದೀರಾ ಎಂದು ಪ್ರಶ್ನೆ ಕೇಳುತ್ತಿದ್ದರು. ಹೀಗಾಗಿ ಸಿನಿಮಾಗಳನ್ನು ಹೆಚ್ಚಿಗೆ ನೋಡುತ್ತಿದ್ದವು. ದಿನಕ್ಕೆ ಮೂರು ಸಿನಿಮಾಗಳನ್ನು ನೋಡುತ್ತಿದ್ದ ಕಾರಣ ಶಾಲೆ ಮತ್ತು ಕಾಲೇಜ್ ಬಿಟ್ಟು ಸಿನಿಮಾ ಕಡೆ ಬಂದೆವು.
'ನಾನು ಸಿನಿಮಾಗಳ ಲೆಕ್ಕ ಮಾಡಿಲ್ಲ ಆದರೆ ಸುಮಾರು 450 ಸಿನಿಮಾ ಆಗಿದೆ. ಸೀರಿಯಲ್ ಸಾಕಷ್ಟು ಮಾಡಿದ್ದೀನಿ, ಸಾವಿರಾರೂ ಎಪಿಸೋಡ್‌ಗಳಲ್ಲಿ ನಟಿಸಿದ್ದೀನಿ. ನೂರಾರೂ ಬೀದಿ ನಾಟಕಗಳನ್ನು ಮಾಡಿದ್ದೀನಿ' ಎಂದು ಮೋಹನ್ ಮಾತನಾಡಿದ್ದಾರೆ.
'ಅವನು ಒಬ್ಬನೇ ಬರೋನು..ಮಾನ್ ಸ್ಟರ್' ಡೈಲಾಗ್ ಹೊಡೆದು KGFನಲ್ಲಿ ಮಿಂಚಿದ್ದ ನಟ ಮೋಹನ್ ಜುನೇಜ ಇನ್ನಿಲ್ಲ
ಪೋಷಕರ ಸಪೋರ್ಟ್:
'ನನ್ನ ತಾಯಿ ನನಗೆ ತುಂಬಾನೇ ಸಪೋರ್ಟ್ ಮಾಡುತ್ತಿದ್ದರು. ಆದರೆ ತಂದೆಗೆ ಬೇಸರವಿತ್ತು ಮಗ ಈ ರೀತಿ ಜೀವನ ಮಾಡಿಕೊಂಡ ಎಂದು. ನಾನು ಇಂಜಿನಿಯರ್ (Engineer) ನನ್ನ ಮಗ ಇಂಜಿನಿಯರ್ ಅವರಿಗೆ ಸಹಾಯ ಮಾಡೋಕೂ ಆಗಲಿಲ್ಲ ಎನ್ನುತ್ತಿದ್ದರು ಕೋಪ ಇತ್ತು. ಖರ್ಚಿಗೆ ಹಣ ಕೊಡುತ್ತಿರಲಿಲ್ಲ ಹೀಗಾಗಿ ಗೋವಾಗಿ ಹೋಗೆ ಸೆಕ್ಯೂರಿಟಿ ಗಾರ್ಡ್ (security Guard) ಆಗಿ ಕೆಲಸ ಮಾಡಿದ್ದೀನಿ, ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದೀನಿ ಕೆಲವೊಮ್ಮೆ ಟೈಲರ್ ಅಂಗಡಿಗೆ ಹೋಗಿ ಗುಂಡಿ ಒಲಿದಿದ್ದೀನಿ. 6 ತಿಂಗಳು ಸೈಕಲ್ ಹೊಡೆದು ಜೀವನದ ದಿಕ್ಕು ಬದಲಾಯಿತ್ತು. ರಂಗಶಾಲೆ ಸೇರಿಕೊಂಡೆ ಜವಾಬ್ದಾರಿಗಳು ಬಂದ ಮೇಲೆ ನನ್ನ ದಾರಿ ಬದಲಾಯಿತ್ತು' ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.