ಸ್ಯಾಂಡಲ್‌ವುಡ್ ಮಾತ್ರವಲ್ಲದೇ, ಭಾರತೀಯ ಸಿನಿರಂಗದಲ್ಲಿ ಟೈಟಲ್ನಿಂದಲೇ ಹವಾ ಸೃಷ್ಟಿಸಿರುವ ಚಿತ್ರ ಕಬ್ಜ. ನಿರ್ದೇಶಕ ಆರ್.ಚಂದ್ರು ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸ್ಯಾಂಡಲ್‌ವುಡ್ ಮಾತ್ರವಲ್ಲದೇ, ಭಾರತೀಯ ಸಿನಿರಂಗದಲ್ಲಿ ಟೈಟಲ್ನಿಂದಲೇ ಹವಾ ಸೃಷ್ಟಿಸಿರುವ ಚಿತ್ರ ಕಬ್ಜ (Kabza). ನಿರ್ದೇಶಕ ಆರ್.ಚಂದ್ರು (R.Chandru) ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿದ್ದು, 80ರ ದಶಕದ ಡಾನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಉಪೇಂದ್ರ ಜೊತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ನಟಿಸುತ್ತಿದ್ದು, ನಿರ್ದೇಶಕ ಆರ್ ಚಂದ್ರು ಅವರು ಉಪೇಂದ್ರ ಹಾಗೂ ಸುದೀಪ್ ಲುಕ್ ಬಗ್ಗೆ ಒಂದು ಸ್ಪೆಷಲ್ ಪೋಸ್ಟರ್ ಕೂಡ ರಿವೀಲ್ ಮಾಡಿದ್ದರು. 'ಕಬ್ಜ' ಸಿನಿಮಾದಲ್ಲಿ ಸುದೀಪ್ ಅವರು ಭಾರ್ಗವ್ ಭಕ್ಷಿ ಎನ್ನುವ ಮಾಫಿಯಾ ದೊರೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಚಿತ್ರದ ಚಿತ್ರೀಕರಣಕ್ಕೆ ಎಂಟ್ರಿ ಕೊಟ್ಟಿದ್ದರು.
ಇದೀಗ ಸುದೀಪ್ ಪಾತ್ರದ ಲುಕ್ ರಿವೀಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಈ ಪಾತ್ರಕ್ಕಾಗಿ ಸುದೀಪ್ 'ಕೆಂಪೇಗೌಡ' ಚಿತ್ರದಲ್ಲಿ ಯಾವ ರೀತಿ ಮೀಸೆ ಬಿಟ್ಟಿದ್ದರೋ ಅದೇ ರೀತಿ ಮೀಸೆ ಬಿಟ್ಟಿದ್ದಾರೆ. ಜೊತೆಗೆ ಸ್ಟೈಲಿಶ್ ಕನ್ನಡಕ ಧರಿಸಿದ್ದು, ರೆಟ್ರೋ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಲುಕ್‌ನ್ನು ಸ್ವತಃ ಕಿಚ್ಚ ಸುದೀಪ್ ಅವರೇ ಟ್ವೀಟರ್‌ನಲ್ಲಿ (Twitter) ಹಂಚಿಕೊಂಡಿದ್ದು, 'ಕಬ್ಬ' ಚಿತ್ರದ ಭಾರ್ಗವ ಭಕ್ಷಿ ಅಂತ ಬರೆದು ಕಬ್ಜ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಸದ್ಯ ಈ ಲುಕ್ಗೆ ಕಿಚ್ಚನ ಅಭಿಮಾನಿಗಳು ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋದಲ್ಲಿರುವ ಸುದೀಪ್ ಚಿತ್ರ ಸಾಕಷ್ಟು ವೈರಲ್ (Viral) ಆಗುತ್ತಿದೆ.
Upendra: 'ಕಬ್ಜ' ಚಿತ್ರದ ಟೀಸರ್ ಲಾಂಚ್ ಮುಂದೂಡಿದ ನಿರ್ದೇಶಕ ಆರ್.ಚಂದ್ರು
ಇತ್ತೀಚೆಗೆ 'ಕಬ್ಜ' ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸುದೀಪ್ ಲುಕ್ ಮಾತ್ರ ರಿವೀಲ್ ಆಗಿಲ್ಲ. ಸಹ ಕಲಾವಿದರು ಖಾಕಿ ಧರಿಸಿದ್ದಾರೆ. ಆದರೆ, ಸುದೀಪ್ ಸಹಜ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಿರ್ದೇಶಕ ಚಂದ್ರು ಸುದೀಪ್ಗೆ ಚಿತ್ರದ ಸನ್ನಿವೇಶದ ಬಗ್ಗೆ ಹೇಳುತ್ತಿರುವ ಫೋಟೋಗಳು ಸಹ ಸಖತ್ ವೈರಲ್ ಆಗಿವೆ. ಈ ಶೂಟಿಂಗ್ಗಾಗಿ ಬೆಂಗಳೂರಿನ ಮಿನರ್ವಾ ಮಿಲ್‌ನಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಸೆಟ್‌ಗಾಗಿಯೇ ಚಿತ್ರ ತಂಡ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ಇದು ರೆಟ್ರೋ ಕಥೆ ಆದ ಕಾರಣ ಚಿತ್ರದ ಬಹುತೇಕ ಭಾಗ ಸೆಟ್‌ನಲ್ಲೇ ನಡೆಯಲಿದೆ. ನಟ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಇಬ್ಬರೂ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಎಂ.ಟಿ.ಬಿ ನಾಗರಾಜ್ (M.T.B.Nagaraj) ಅರ್ಪಿಸುವ ಈ ಚಿತ್ರವು ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ. 'ಕಬ್ಜ' ಚಿತ್ರಕ್ಕೆ 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರು (Ravi Basrur) ಸಂಗೀತ ಸಂಯೋಜನೆಯಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಕ್ಯಾಮೆರಾ ಕೈಚಳಕ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್, ಪೀಟರ್ ಹೆನ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
Kichcha Sudeep: ಡಿಸೆಂಬರ್ 15 ರಂದು 'ಕಬ್ಜ' ಸೆಟ್‌ಗೆ ಅಭಿನಯ ಚಕ್ರವರ್ತಿ ಎಂಟ್ರಿ
'ಕಬ್ಜ' ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ಬಾಲಿವುಡ್‌ನ ಖ್ಯಾತ ನಟ ನವಾಬ್ ಶಾ (Nawab Shah) ಇತ್ತೀಚೆಗೆ ಸಿನಿಮಾ ಸೆಟ್‌ಗೆ ಎಂಟ್ರಿ ಕೊಟ್ಟಿದ್ದರು. ತಮಿಳಿನ 'ಐ' (I) ಚಿತ್ರದ ಖ್ಯಾತಿಯ ಕಾಮರಾಜನ್ (Kamarajan), ಟಾಲಿವುಡ್ ವಿಲನ್ ಜಗಪತಿ ಬಾಬು (Jagapati Babu), ರಾಹುಲ್ ದೇವ್, ಸುನಿಲ್ ಪುರಾಣಿಕ್, ಲಕ್ಷ್ಮೀಶ ಲಕ್ಷ್ಮಣ್ (ಲಕ್ಕಿ ಲಕ್ಷ್ಮಣ್), ಪ್ರಮೋದ್ ಶೆಟ್ಟಿ, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 1947-1986 ನಡುವಿನ ಕಾಲಘಟ್ಟದ ಭೂಗತಲೋಕದ ಅಧ್ಯಾಯವನ್ನು 'ಕಬ್ಜ' ಚಿತ್ರ ತೆರೆದಿಡಲಿದೆ.
of
Best wshs to the team pic.twitter.com/0xRwsLTM8b