Angry Rachita Ram: ನಮ್ಮ ಕನ್ನಡ ಭಾಷೆ ಸಿನಿಮಾ ನೋಡಿ, ಪುಷ್ಪಗೆ ಟಾಂಗ್‌ ಕೊಟ್ಟ ರಚ್ಚು!

Suvarna News   | Asianet News
Published : Dec 18, 2021, 01:16 PM IST
Angry Rachita Ram: ನಮ್ಮ ಕನ್ನಡ ಭಾಷೆ ಸಿನಿಮಾ ನೋಡಿ, ಪುಷ್ಪಗೆ ಟಾಂಗ್‌ ಕೊಟ್ಟ ರಚ್ಚು!

ಸಾರಾಂಶ

ಲವ್ ಯು ರಚ್ಚು ಸಿನಿಮಾ ಟ್ರೈಲರ್ ರಿಲೀಸ್ ವೇಳೆ ಕನ್ನಡಿಗರು ಮತ್ತು ಕನ್ನಡ ಸಿನಿಮಾ ಪರ ಧ್ವನಿ ಎತ್ತಿದ ನಟಿ ರಚಿತಾ......

ಕೊರೋನಾ (Covid19) ಆರ್ಭಟ  ಕಡಿಮೆ ಆಗುತ್ತಿದ್ದಂತೆ ಕನ್ನಡ ಚಿತ್ರರಂಗ (Sandalwood) ನಿಟ್ಟುಸಿರು ಬಿಡುತ್ತಿದೆ. ಒಬ್ಬೊಬ್ಬರೆ ಸಿನಿಮಾ ಬಿಡುಗಡೆಗೆ ಮುಂದೆ ಬರುತ್ತಿದ್ದಾರೆ. ಬಿಗ್ ಬಜೆಟ್ (Big budget film), ಸ್ಟಾರ್ ನಟನ ಸಿನಿಮಾ, ಸಣ್ಣ ಬಜೆಟ್ ಯಾವುದರ ಬಗ್ಗೆಯೂ ಚಿಂತಿಸದ ಕನ್ನಡಿಗರು ಚಿತ್ರರಂಗವನ್ನು ಬೆಳೆಸುತ್ತಿದ್ದಾರೆ. ಈ ನಡುವೆ ತೆಲುಗು (Telugu) ಮತ್ತು ತಮಿಳು (Tamil) ಸಿನಿಮಾಗಳು ಕರ್ನಾಟಕಕ್ಕೆ (Karnataka) ಕಾಲಿಟ್ಟು ಕನ್ನಡ ಸಿನಿಮಾಗಳಿಗೆ ಜಾಗವೇ ಇಲ್ಲದಂತಾಗಿದೆ. ಯಾವ ಸಿನಿಮಾ ಅಂತ ನಾವು ಹೇಳೋದು ಬೇಡ ಅಂದ್ಕೊಳ್ತೀನಿ... 

ಕೆಲವು ದಿನಗಳ ಹಿಂದೆ ಗುರು ದೇಶಪಾಂಡೆ (Guru Deshpande) ನಿರ್ದೇಶನ ಲವ್ ಯು ರಚ್ಚು (Love You Rachchu) ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮ ನಡೆಯಿತ್ತು. ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಕೂಡ ಭಾಗಿಯಾಗಿದ್ದರು. ಮೊದಲ ಬಾರಿ ರಚಿತಾ ರಾಮ್ (Rachita Ram) ಮತ್ತು ಅಜಯ್ ರಾವ್ (Ajai Rao) ಕಾಂಬಿನೇಷನ್‌ನಲ್ಲಿ ಮೂಡಿ ಬರತ್ತಿರುವ ಸಿನಿಮಾ ಇದಾಗಿದ್ದು ಸಖತ್ ರೊಮ್ಯಾನ್ಸ್‌ (Romance) ಇರಲಿದೆ ಎಂದು ಬಿಡುಗಡೆ ಆಗಿರುವ ಹಾಡುಗಳನ್ನು ನೋಡಿದರೆ ಗೊತ್ತಾಗುತ್ತದೆ. 

ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ರಚಿತಾ ರಾಮ್‌ ಕೆಲವೊಂದು ವಿಚಾರಗಳ ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ.  ನಿಜವಾದ ಕನ್ನಡ ಸಿನಿಮಾ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 'ಸಿನಿಮಾ ಡಿಸೆಂಬರ್ 31ರಂದು ಬಿಡುಗಡೆ ಆಗುತ್ತಿದೆ. ನಮ್ಮ ಕನ್ನಡ ಸಿನಿಮಾ ಇದು.  ತುಂಬಾ ಒತ್ತಿ ಹೇಳ್ತಿದ್ದೀನಿ ನಮ್ಮ ಕನ್ನಡ ಸಿನಿಮಾ. ಯಾವುದೇ ಕನ್ನಡ ಸಿನಿಮಾ ಆದರೂ ದಯವಿಟ್ಟು ಪ್ರೋತ್ಸಾಹ ನೀಡಿ. ನಮ್ಮ ಭಾಷೆ ನಮ್ಮ ಸಿನಿಮಾ ನಮ್ಮ ಜನನ ಯಾವತ್ತೂ ಬಿಡ್ಕೋಡ್ಬಾರ್ದು ಅಂತೆ. ಬೇರೆ ರಾಜ್ಯದಲ್ಲಿ ಅವರ ಭಾಷೆ ಮೇಲೆ ಎಷ್ಟು ಅಭಿಮಾನ ಪ್ರೀತಿ ಇರುತ್ತೋ ನಮ್ಮ ಭಾಷೆ ಮೇಲ್ಲೂ ಹಾಗೆ ಇರಬೇಕು' ಎಂದು ರಚಿತಾ ರಾಮ್ indirect ಆಗಿ ಪುಷ್ಪ ಸಿನಿಮಾಗೆ ಟಾಂಗ್ ಕೊಟ್ಟಿದ್ದಾರೆ.

Love You Rachchu Trailer: ಈ ಟೈಟಲ್ ಆಯ್ಕೆ ಮಾಡಿಕೊಳ್ಳಲು ಕಾರಣ ಏನು ಗೊತ್ತಾ?

'ನಾವು ಯಾವಾಗಲ್ಲೂ ಹೇಳ್ತೀವಿ ಕನ್ನಡದವರು ತುಂಬಾ ವಿಶಾಲ ಹೃದಯದವರು ಎಲ್ಲರನ್ನೂ ಒಪ್ಪಿಕೊಳ್ಳುತ್ತೀನಿ ಎಲ್ಲರನ್ನೂ ಬರ ಮಾಡಿಕೊಳ್ತೀವಿ ಅಂತ. ಆ ಪ್ರೀತಿ (Love) ಹಾಗೆ ಇರಲಿ ಆದರೆ ಕನ್ನಡ ಅಂತ ಬಂದ್ರೆ ನಮ್ಮ ಕನ್ನಡ ಅದು ನಮ್ಮ ಹೆಮ್ಮೆಯ ಕನ್ನಡ. ಯಾವ ಕಾರಣಕ್ಕೂ ನಾವು ಬಿಟ್ಟಿಕೊಡಬಾರದು. ಕನ್ನಡ ಸಿನಿಮಾನ ದಯವಿಟ್ಟು ನೋಡಿ ಬೆಳಸಿ. ಹೊಸ ಸಿನಿಮಾ ತಂಡ ಆದರೂ ಸರಿ ಅಥವಾ ರಿಲೀಸ್‌ಗೂ ಮುನ್ನವೇ ಹೆಸರು ಮಾಡಿರುವ ಸಿನಿಮಾ ಆಗಲಿ ಯಾವುದೇ ಆದರೂ ಸರಿ. ಕನ್ನಡ ಹೆಚ್ಚಿದೆ ನೋಡಿ' ಎಂದು ರಚಿತಾ ಮಾತು ಮುಗಿಸಿದ್ದಾರೆ. 

Love You Rachchu: 'ಲವ್ ಯು ರಚ್ಚು' ಟ್ರೈಲರ್ ರಿಲೀಸ್‌ಗೆ ಅಜಯ್ ಗೈರು, ಅಸಲಿ ಕತೆ ಏನು?

'ಹನುಮಾನ ಜಯಂತಿ ದಿನ ಧ್ರುವ (Dhruva Sarja) ನಮ್ಮ ಕಾರ್ಯಕ್ರಮಕ್ಕೆ ಬಂದಿರುವುದಕ್ಕೆ ತುಂಬಾನೇ ಖುಷಿ ಇದೆ. ನನಗೆ ಧ್ರುವ ಯಾವಾಗಲ್ಲೂ ಈ ಒಂದು ವಿಚಾರಕ್ಕೆ ಜಗಳ (Fight) ಆಗುತ್ತೆ, ನೀನು ಆಂಜನೇಯನ ಭಕ್ತೆ ನಾ ನಾನು ಆಂಜನೇಯನ ಮಗ ನಾ ಅಂತ. ನಾನು ಇವತ್ತು ಸತ್ಯ ಹೇಳ್ತೀನಿ ಧ್ರುವನೇ ಆಂಜನೇಯನ ಮಗ' ಎಂದು ರಚಿತಾ ರಾಮ್ ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ