ಕನ್ನಡ ಚಿತ್ರರಂಗದ ಒನ್ ಆ್ಯಂಡ್ ಓನ್ಲಿ ಡಾಲಿ ಧನಂಜಯ್ ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ ಕವನ ಈಗ ಎಲ್ಲೆಲ್ಲೂ ಕಾಣುತ್ತಿದೆ.
ಕೈ ತುಂಬಾ ಸಂಬಳ ಬರುವ ಐಟಿ ಕೆಲಸ ಬಿಟ್ಟು ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಎಂದು ಬಣ್ಣದ ಲೋಕಕ್ಕೆ ಬರುವ ಯೋಚನೆ ಮಾಡಿದವರು ಧನಂಜಯ್. 'ಡೈರೆಕ್ಟರ್ ಸ್ಪೆಷಲ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಧನಂಜಯ್‌ಗೆ ವೃತ್ತಿ ಜೀವನದಲ್ಲಿ ಬ್ರೇಕ್ ಕೊಟ್ಟಿದ್ದು 'ಜಯನಗರ 4th ಬ್ಲಾಕ್' ಕಿರುಚಿತ್ರ. ಮೊದಲ ಚಿತ್ರ ಸೈಮಾ ಪ್ರಶಸ್ತಿ ತಂದುಕೊಟ್ಟರೂ ಹಣೆ ಬರಹ ಬದಲಾಯಿಸಿದ್ದು ತನ್ನದೇ ನಿರ್ದೇಶನದ ಕಿರುಚಿತ್ರ.
ಕೆಲ ದಿನಗಳ ಹಿಂದೆ ನಿರೂಪಕಿ ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ತನ್ನ ಜೀವನದ ಬಗ್ಗೆ ಯಾರಿಗೂ ತಿಳಿಯದ ವಿಚಾರವನ್ನು ಬಹಿರಂಗವಾಗಿ ಅಭಿಮಾನಿಗಳ ಜೊತೆ ಧನಂಜಯ್ ಹಂಚಿಕೊಂಡಿದ್ದಾರೆ. ಕನ್ನಡ ಭಾಷೆ ಮೇಲಿದ್ದ ಪ್ರೀತಿಗೆ ಕೆಲವೊಮ್ಮೆ ಕವನಗಳನ್ನು ಬರೆಯುತ್ತಿದ್ದರು. ಅದನ್ನು ಈ ವಿಡಿಯೋದಲ್ಲಿ ಹೇಳಿದ್ದಾರೆ. ಅದನ್ನು ಕೇಳಿ ಡಾಲಿ ಅಭಿಮಾನಿಯೊಬ್ಬ ಕಾರ್ ಮೇಲೆ ಬರೆಸಿಕೊಂಡಿದ್ದಾರೆ.
ಧನಂಜಯ್ ಅವರು ನಟನಾಗಿ ಮಾತ್ರ ಪರಿಚಯವಾಗಿದ್ದಾರೆ. ಆದರೆ ಅವರಲ್ಲಿ ಒಬ್ಬ ಉತ್ತಮ ಬರಹಗಾರನಿದ್ದಾನೆ ಎಂದು ಕಡಿಮೆ ಜನರಿಗೆ ಮಾತ್ರ ತಿಳಿದಿದೆ. ನಟಿ ಹರಿಪ್ರಿಯಾ ಹಾಗೂ ಸಂಸದೆ ಸುಮಲತಾ ಒಟ್ಟಾಗಿ ಅಭಿನಯಿಸಿರುವ 'ಡಾಟರ್ ಅಫ್ ಪಾರ್ವತಮ್ಮ' ಚಿತ್ರದ ಹಾಡೊಂದಕ್ಕೆ ಧನಂಜಯ್ ಸಾಹಿತ್ಯ ಬರೆದಿದ್ದಾರೆ.