
ಹುಟ್ಟುಹಬ್ಬದ ಪ್ರಯುಕ್ತ ನಟ ಸುದೀಪ್ ಇಂದು ಸಂಜೆ 6 ಗಂಟೆಗೆ ಫೇಸ್‌ಬುಕ್, ಟ್ವಿಟ್ಟರ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ಗೆ ಬಂದು ಅಭಿಮಾನಿಗಳ ಜತೆ ಮಾತನಾಡಲಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ಮೊದಲ ವಿಡಿಯೋ ಹಾಡು ಇಂದು ಬೆಳಿಗ್ಗೆ 11.15ಕ್ಕೆ ಬಿಡುಗಡೆಯಾಗಲಿದೆ.
ಕಿಚ್ಚನಿಗೆ ಶುಭ ಕೋರಿದ ನೀರಜ್ ಚೋಪ್ರಾ
ಈ ಬಾರಿಯ ಒಲಿಪಿಕ್‌ಸ್ನಲ್ಲಿ ಜಾವೆಲಿನ್ ಥೊ್ರೀ ಕ್ರೀಡೆಯಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರು ನಟ ಸುದೀಪ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರಕ್ಕೂ ಶುಭಾಶಯ ತಿಳಿಸಿದ್ದಾರೆ. ನೀರಜ್ ಚೋಪ್ರಾ ಅವರ ಈ ವಿಡಿಯೋ ನೋಡಿ ಖುಷಿಯಾಗಿರುವ ಸುದೀಪ್, ‘ಥ್ಯಾಕ್ಯೂ ಬ್ರದರ್‌ಮ್ಯಾನ್’ ಎಂದಿದ್ದಾರೆ.
"
ಸುದೀಪ್ ಕುರಿತ ಆಡಿಯೋ ಪುಸ್ತಕ ಬಿಡುಗಡೆ
ಪತ್ರಕರ್ತ ಡಾ ಶರಣ್ ಹುಲ್ಲೂರು ಅವರು ಬರೆದಿರುವ ಕಿಚ್ಚನ ಬಯೋಗ್ರಫಿ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕ ಆಡಿಯೋ ರೂಪದಲ್ಲಿ ಬರುತ್ತಿದೆ. ಕಾಯಕ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕ ಆಡಿಯೋ ಮತ್ತು ಇ ಬುಕ್ ಆವೃತ್ತಿಯನ್ನು ಮೈಲ್ಯಾಂಗ್ ಒದಗಿಸುತ್ತಿದೆ. ಮೈಲ್ಯಾಂಗ್ ಆ್ಯಪ್‌ನಲ್ಲಿ ಈ ಪುಸ್ತಕಗಳ ಲಭ್ಯ. ಬಿಗ್‌ಬಾಸ್ ಖ್ಯಾತಿಯ ನಟ ಚಂದನ್ ಆಚಾರ್ಯ ಆಡಿಯೋ ಬುಕ್‌ಗೆ ದನಿ ನೀಡಿದ್ದಾರೆ.
ದಸರಾ ಹಬ್ಬಕ್ಕೆ ತೆರೆ ಮೇಲೆ ಕೋಟಿಗೊಬ್ಬ 3
ಸುದೀಪ್ ಹುಟ್ಟುಹಬ್ಬದ ಅಂಗವಾಗಿ ‘ಕೋಟಿಗೊಬ್ಬ 3’ ಚಿತ್ರದ ಬಿಡುಗಡೆಯ ದಿನಾಂಕದ ಗುಟ್ಟು ಬಿಟ್ಟು ಕೊಡಲಾಗಿದೆ. ದಸರಾ ಹಬ್ಬದ ದಿನ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ಸೂರಪ್ಪ ಬಾಬು ನಿರ್ಧರಿಸಿದ್ದಾರೆ. ‘ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಚಿತ್ರವನ್ನು ನಾಡಹಬ್ಬ ದಸರಾ ಸಂದರ್ಭ ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ. ಅಷ್ಟೊತ್ತಿಗೆ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಸಿಗಲಿದೆ ಎನ್ನುವ ಭರವಸೆ ಇದೆ’ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.