'ಭಾರತದ ಸಿಂಧೂರಕ್ಕೆ ಕಲೆ ಬಿದ್ದಿತ್ತು, ಅದೀಗ ಮರಳಿ ಸ್ಥಾಪನೆಯಾಗಿದೆ'-Kiccha Sudeep On Operation Sindoor

Published : May 07, 2025, 04:45 PM ISTUpdated : May 07, 2025, 04:54 PM IST
'ಭಾರತದ ಸಿಂಧೂರಕ್ಕೆ ಕಲೆ ಬಿದ್ದಿತ್ತು, ಅದೀಗ ಮರಳಿ ಸ್ಥಾಪನೆಯಾಗಿದೆ'-Kiccha Sudeep On  Operation Sindoor

ಸಾರಾಂಶ

ಪಾಕ್ ಉಗ್ರರ ನೆಲೆಗಳ ಮೇಲಿನ "ಆಪರೇಷನ್ ಸಿಂಧೂರ" ದಾಳಿಗೆ ಕಿಚ್ಚ ಸುದೀಪ್, ಜಗ್ಗೇಶ್, ಪವನ್ ಕಲ್ಯಾಣ್ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಸೇನೆ ಕೈಗೊಂಡ ಕ್ರಮಕ್ಕೆ ಮೋದಿ ಸರ್ಕಾರ ಮತ್ತು ಸೇನಾಪಡೆಗಳ ಶೌರ್ಯವನ್ನು ಸ್ತುತಿಸಿದ್ದಾರೆ. ಭಾರತ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ ಎಂದಿದ್ದಾರೆ.

ಇಂದು ಬೆಳಗ್ಗಿನ ಜಾವ ಮೇ 7ರಂದು ಪಾಕ್‌ ಉಗ್ರರ ತಾಣಗಳ ಮೇಲೆ ನಡೆದ ದಾಳಿ ಬಗ್ಗೆ ಇಡೀ ಭಾರತ ಸಂಭ್ರಮಿಸುತ್ತಿದೆ. ಅಂದು ಪಹಲ್ಗಾಮ್‌ನಲ್ಲಿ ನಡೆಸಿದ ಅಮಾಯಕ ಜೀವಗಳ ಮಾರಣಹೋಮ ಮಾಡಿದವರ ಪ್ರಾಣಪಕ್ಷಿ ಇಂದು ಹಾರಿ ಹೋಗಿದೆ. ಈ ಬಗ್ಗೆ 
ನಟ ಕಿಚ್ಚ ಸುದೀಪ್‌, ನಟ ಜಗ್ಗೇಶ್ ಅವರು ʼಆಪರೇಶನ್‌ ಸಿಂಧೂರʼದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

ನಟ ಕಿಚ್ಚ ಸುದೀಪ್‌ ಹೇಳಿದ್ದೇನು?
ಭಾರತೀಯನಾಗಿ… ಈ ಪವಿತ್ರ ಭೂಮಿಯ ಮಗನಾಗಿ,
ಪಹಲ್ಗಾಮ್‌ನಲ್ಲಿ ನಡೆದ ನೋವಿನ ಕಂಪನವನ್ನು ಅನುಭವಿಸಿದೆ.
ಇಂದು, ನಾನು ನ್ಯಾಯದ ಗುಡುಗನ್ನು ಅನುಭವಿಸುತ್ತೇನೆ.
ಆಪರೇಷನ್ ಸಿಂಧೂರ: ಕೇವಲ ಮಿಷನ್ ಅಲ್ಲ, ಒಂದು ಪವಿತ್ರ ಪ್ರತಿಜ್ಞೆ.
ಭಾರತದ ಸಿಂದೂರಕ್ಕೆ ಕಲೆ ಬಿದ್ದಿತ್ತು… ನಮ್ಮ ಶೂರ ಸೈನಿಕರು ಬೆಂಕಿಯಿಂದ ಮತ್ತು ನಿಖರತೆಯಿಂದ ಅದರ ಗೌರವವನ್ನು ಮರಳಿ ಸ್ಥಾಪಿಸಿದರು.
ನಮ್ಮ ಸಶಸ್ತ್ರ ಪಡೆಗಳಿಗೆ ನನ್ನ ಅಂತ್ಯವಿಲ್ಲದ ಸಲಾಂ.
ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತು ರಕ್ಷಣಾ ನಾಯಕತ್ವಕ್ಕೆ, ಎತ್ತರವಾಗಿ, ದೃಢವಾಗಿ ಮತ್ತು ನಿರ್ಭೀತವಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು. ಮತ್ತು ಕರ್ನಲ್ ಸೋಫಿಯಾ ಕುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಚೂಪಾದ, ಘನತೆಯ ಬ್ರೀಫಿಂಗ್‌ಗೆ ಸಲಾಂ.
ಭಾರತ ಮರೆಯುವುದಿಲ್ಲ. ಭಾರತ ಕ್ಷಮಿಸುವುದಿಲ್ಲ.

 

ನಟ ಜಗ್ಗೇಶ್‌ ಅವರು ಕವನದ ಮೂಲಕ ʼಆಪರೇಶನ್‌ ಸಿಂಧೂರʼವನ್ನು ಕೊಂಡಾಡಿದ್ದಾರೆ. 
ಭಾರತದ ರಕ್ಷಕ ಇವ
ನುಡಿದಂತೆ ನಡೆದವ..

ಆಧುನಿಕ ಭಾರತದ ಕಲಿ
ನೊಂದ ಭಾರತೀಯ ನಲಿ..

ಹೊರ ಶತ್ರುಗಳ ಪಕ್ಷ
ಒಳ ಶತ್ರುಗಳ ಪಕ್ಷ
ಆಚರಿಸುವರು (ಪಿತೃ) ಪಕ್ಷ

ಸಾಮ ಬೇಧ ದಂಡ
ನಡೆಯ ರಣಭಂಡ
ಮೋದಿ ಭಾರತದ ಪ್ರಚಂಡ

ಸಮಾಧಾನವಾಗಲಿ ಪ್ರಾಣ
ತೆತ್ತ ಆತ್ಮಗಳಿಗೆ, ನಿದಿರೆ ತಪ್ಪಿದ ರಾತ್ರಿಗಳು ನಿರಂತರ ಶತೃಗಳಿಗೆ.
ಪಾಪಿಸ್ತಾನದ ಶತೃಸಂಹಾರ ಮಾಡಿದಕ್ಕೆ
ನರೇಂದ್ರ ಮೋದಿ ಅವರಿಗೆ ಧನ್ಯವಾದ

 

ಪವನ್ ಕಲ್ಯಾಣ್ ಏನು ಹೇಳಿದ್ರು?
ಪವನ್ ಕಲ್ಯಾಣ್ ಕೂಡ ಈ ಬಗ್ಗೆ 'ಆಪರೇಷನ್ ಸಿಂಧೂರ'ದ ಬಗ್ಗೆ ಮಾತನಾಡಿದ್ದಾರೆ. ಭಾರತದಾದ್ಯಂತ ಇಂದು ಈ ಮಾತು ಕೇಳಿಬರುತ್ತಿದೆ. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರನ್ನು ಹೊಡೆದುರುಳಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಿದೆ. ಪಾಕ್ ಜೊತೆಗೆ ಪಿಒಕೆ ಯಲ್ಲಿರುವ 9 ಉಗ್ರರ ನೆಲೆಗಳ ಮೇಲೆ ಮಧ್ಯರಾತ್ರಿ ವಾಯುಪಡೆಯ ಯುದ್ಧ ವಿಮಾನಗಳು ದಾಳಿ ನಡೆಸಿವೆ. ಇದರಲ್ಲಿ ನೂರಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಆಪರೇಷನ್ ಸಿಂಧೂರದ ಬಗ್ಗೆ ರಾಜಕೀಯ, ವ್ಯಾಪಾರ ಮತ್ತು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಭಾರತದ ಕ್ರಮಗಳನ್ನು ಬೆಂಬಲಿಸಿ ಸೇನೆಗೆ ಬೆಂಬಲ ಸೂಚಿಸಿದ್ದಾರೆ. ಇದೀಗ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ಪ್ರತಿಕ್ರಿಯಿಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಒಂದು ಅದ್ಭುತ ಕವಿತೆಯನ್ನು ಸೇರಿಸಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. “ಧೈರ್ಯವಿಲ್ಲದೆ ಧರ್ಮ ಹಾನಿ. ಸ್ವಾರ್ಥ ರಾಜ್ಯಭಾರ” ಎಂದು ಪ್ರಸಿದ್ಧ ಲೇಖಕ ದಿನಕರ್ ಹಿಂದಿಯಲ್ಲಿ ಬರೆದ ಕವಿತೆಯನ್ನು ಪವನ್ ಅವರು ಪೋಸ್ಟ್ ಮಾಡಿದ್ದಾರೆ. “ದಶಕಗಳಿಂದ ಸಹನೆ.. ಸಹನೆ! ಮಿತಿಮೀರಿದ ಸಹನೆಯಿಂದ ಕೈಕಟ್ಟಿ ಕುಳಿತಿದ್ದ ಭಾರತಕ್ಕೆ... “ಆಪರೇಷನ್ ಸಿಂಧೂರ” ಮೂಲಕ ಭಾರತೀಯ ಸಮಾಜದಲ್ಲಿ ಮತ್ತೆ ಶೌರ್ಯ ತುಂಬಿದ ತ್ರಿವಿಧ ದಳಾದಿಪತಿಗಳಿಗೆ, ಅವರ ಜೊತೆ ನಿಂತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳು... ನಿಮ್ಮ ಜೊತೆ ನಾವಿದ್ದೇವೆ... ಜೈ ಹಿಂದ್!” ಎಂದು ಪವನ್ ಕಲ್ಯಾಣ್ ಆಪರೇಷನ್ ಸಿಂಧೂರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?