
ನಟ, ನಿರ್ದೇಶಕ ಉಪೇಂದ್ರ ಅವರ ಆರೋಗ್ಯದಲ್ಲಿ ದಿಢೀರನೆ ಏರುಪೇರಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿರುವುದಾಗಿ ಭಾರಿ ಸುದ್ದಿ ಹರಡಿದ್ದು ಇದರಿಂದ ಅಭಿಮಾನಿಗಳಿಗೆ ಆತಂಕ ಉಂಟಾಗಿದೆ. ಉಪೇಂದ್ರ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಡಿಸ್ಚಾರ್ಜ್ ಮಾಡಲಾಗಿದೆ ಎಂದು ಕೆಲವರು ಹೇಳುತ್ತಿದ್ದರೆ, ಮತ್ತೆ ಕೆಲವರು ಇನ್ನೂ ಉಪೇಂದ್ರ ಅವರು ಚೇತರಿಸಿಕೊಂಡಿಲ್ಲ. ಆಸ್ಪತ್ರೆಗೆ ಕುಟುಂಬದವರು ದೌಡಾಯಿಸುತ್ತಿದ್ದಾರೆ ಎಂದೆಲ್ಲಾ ವರದಿಯಾಗುತ್ತಿದೆ.
ಇದೀಗ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ಕೊಟ್ಟಿರೋ ನಟ ಉಪೇಂದ್ರ ಅವರು, 'ಎಲ್ಲರಿಗೂ ನಮಸ್ಕಾರ.. ನಾನು ಆರೋಗ್ಯವಾಗಿದ್ದೇನೆ.. ರೆಗ್ಯುಲರ್ ಚೆಕ್ ಅಪ್ ಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೆ ಅಷ್ಟೇ.. ಯಾವುದೇ ಊಹಾಪೋಹ ಗಳಿಗೆ ಕಿವಿಕೊಟ್ಟು ಗೊಂದಲಕ್ಕಿಡಾಗಬೇಡಿ.. ನಿಮ್ಮ ಪ್ರೀತಿ ಕಾಳಜಿಗೆ ಅನಂತ ಧನ್ಯವಾದಗಳು' ಎಂದು ಹೇಳಿದ್ದಾರೆ. ಈ ಮೂಲಕ ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ತಮ್ಮ ನೆಚ್ಚಿನ ನಟ ಆರೋಗ್ಯದಿಂದ ಇರುವ ಬಗ್ಗೆ ಅಭಿಮಾನಿಗಳು ಖುಷಿಯಾದರು ಕೂಡ, ಅವರು ಆಸ್ಪತ್ರೆಗೆ ಹೋಗಿದ್ದು ಏಕೆ ಎನ್ನುವ ಚಿಂತೆಯಲ್ಲಿ ಸದ್ಯ ಇದ್ದಾರೆ.
ಊಟಿಯಲ್ಲಿ, ಸೃಜನ್ ಲೋಕೇಶ್ ಮನೆಯಲ್ಲಿ... ಭೂತ ಕಂಡದ್ದನ್ನು ತಿಳಿಸಿದ ಪ್ರಿಯಾಂಕಾ ಉಪೇಂದ್ರ
ಅಂದಹಾಗೆ ನಟನಿಗೆ ಈಗ 56 ವರ್ಷ ವಯಸ್ಸು. ಬಹುಶಃ ಅವರಿಗೆ ಆ್ಯಸಿಡಿಟಿ ಸಮಸ್ಯೆ ಉಂಟಾಗಿದ್ದಿರಬಹುದು ಎಂದು ಹೇಳಲಾಗುತ್ತಿದೆ. ಏಕೆಂದರೆ, ಈ ಹಿಂದೆ ‘ಯುಐ’ ಸಿನಿಮಾದ ಶೂಟಿಂಗ್ ವೇಳೆ ಕೂಡ ಆ್ಯಸಿಡಿಟಿ ಸಮಸ್ಯೆಯಿಂದ ಬಳಲಿದ್ದರು. ದೀರ್ಘ ಸಮಯದ ಚಿತ್ರೀಕರಣ, ಉದ್ಯೋಗದ ಒತ್ತಡ ಮತ್ತು ಆಹಾರದ ಅವ್ಯವಸ್ಥೆ ಸೇರಿದಂತೆ ಹಲವು ಕಾರಣಗಳಿಂದ ಈ ಆರೋಗ್ಯ ಸಮಸ್ಯೆ ಉಂಟಾಗಿರಬಹುದೆಂಬ ಅಂದಾಜು ವ್ಯಕ್ತವಾಗಿದೆ. ಆದರೆ ಇದೀಗ ಸ್ಪಷ್ಟನೆ ನೀಡಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ನಿರಾತಂಕ ಆಗಿದ್ದಾರೆ. ಅಷ್ಟಕ್ಕೂ ಹಿಂದೊಮ್ಮೆ ಶಿವರಾಜ್ ಕುಮಾರ್ ಅವರು ಉಪೇಂದ್ರ ಅವರ ಊಟದ ಶೈಲಿಯ ಬಗ್ಗೆ ಹೇಳಿದ್ದರು. ಉಪೇಂದ್ರ ಅವರ ಸ್ಟೈಲ್ ಸಂಪೂರ್ಣ ಭಿನ್ನ. ಅದೇ ರೀತಿ ಅವರು ಊಟ ಮಾಡುವ ರೀತಿ ಕೂಡ ವಿಭಿನ್ನವಾದದ್ದು. ಅವರು ಬೇರೆಯವರ ರೀತಿ ಊಟ ಮಾಡಲ್ಲ. ಅನ್ನ, ಸಾಂಬಾರ್, ರಸಂ, ಮೊಸರು ಎಲ್ಲನ್ನೂ ಒಟ್ಟಿಗೆ ಕಲಿಸಿಕೊಂಡು ಪಾಯಸದ ರೀತಿ ಎಲ್ಲವನ್ನೂ ಒಟ್ಟಿಗೇ ಸೇವಿಸುತ್ತಾರೆ. ನಾನೇ ಫಾಸ್ಟ್ ಎಂದರೆ ಉಪೇಂದ್ರ ನನಗಿಂತ ಫಾಸ್ಟ್’ ಎಂದು ಶಿವರಾಜ್ಕುಮಾರ್ ಹೇಳಿದ್ದರು. ಊಟ ಕೂಡ ಈ ರೀತಿ ಫಾಸ್ಟ್ ಮಾಡುವ ಕಾರಣ, ಆ್ಯಸಿಡಿಟಿ ಸಮಸ್ಯೆ ಹೆಚ್ಚಾಗಿರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.
ಈ ಹಿಂದೆ ಕೂಡ ಅಭಿಮಾನಿಗಳು ಆತಂಕಪಟ್ಟುಕೊಂಡಿದ್ದಾರೆ ಉಪೇಂದ್ರ ಅವರು ಇದೇ ರೀತಿ ಸ್ಪಷ್ಟನೆ ಕೊಟ್ಟಿದ್ದರು. ವಿಡಿಯೋ ಮೂಲಕ ಅವರು, ''ನನಗೇನೂ ಆಗಿಲ್ಲ. ಆರಾಮವಾಗಿದ್ದೇನೆ. ನೋಡಿ ಶೂಟಿಂಗ್ ಸಹ ಮುಂದುವರೆಸುತ್ತಿದ್ದೇನೆ ಎಂದು ಶೂಟಿಂಗ್ ಸೆಟ್ ಅನ್ನು ತೋರಿಸಿದ್ದರು. ಮೋಹನ್ ಬಿಕಿರಿ ಸ್ಟುಡಿಯೋ, ಡಸ್ಟ್ ಅಲರ್ಜಿ ಆಗಿತ್ತು, ಕೆಮ್ಮು ಸ್ವಲ್ಪ ಬಂದಿತ್ತು ಅಷ್ಟೆ. ಆರಾಮವಾಗಿದ್ದೇನೆ, ಶೂಟಿಂಗ್ ಸಹ ಸ್ಟಾರ್ಟ್ ಮಾಡ್ತಾ ಇದ್ದೀನಿ. ಯಾರೂ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದರು.
ನಟ ಉಪೇಂದ್ರ ಊಟ ಮಾಡೋ ರೀತಿಯೂ ವಿಚಿತ್ರ! ಶಿವಣ್ಣ ವಿವರಿಸಿದ್ದು ಕೇಳಿ ಅಬ್ಬಬ್ಬಾ ಅಂತಿರೋ ಫ್ಯಾನ್ಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.