ಕಾಮ-ಪ್ರೇಮ ಅನೈತಿಕ ಕಥೆಗಳನ್ನೇ ಸಿನಿಮಾ ಮಾಡುತ್ತಿದ್ದ ಪುಟ್ಟಣ್ಣ ಮಡಿವಂತರ ಮಧ್ಯೆ ಗೆದ್ದಿದ್ದು ಹೇಗೆ?

By Shriram Bhat  |  First Published May 31, 2024, 9:48 PM IST

ಎಡಕಲ್ಲು ಗುಡ್ಡದ ಮೇಲೆ ಹಾಗೂ ರಂಗನಾಯಕಿ ಚಿತ್ರಗಳಲ್ಲಿ ಕಾಮ ಕೇಂದ್ರೀಕೃತವಾದ ಹಸಿಬಿಸಿ ದೃಶ್ಯಗಳು ಸಾಕಷ್ಟಿದ್ದವು. ಚಿತ್ರಬ್ರಹ್ಮ ಎಂದೇ ಖ್ಯಾತಿ ಹೊಂದಿದ್ದ ಪುಟ್ಟಣ್ಣ ಅವರಿಗೆ ಸಾಮಾನ್ಯ ಜನರ, ಅಂದರೆ ಸಿನಿಮಾ ಪ್ರೇಕ್ಷಕರ ಅಭಿರುಚಿ ಗೊತ್ತಿತ್ತು. 


70-80ರ ದಶಕದಲ್ಲಿ ಹೆಣ್ಣುಮಕ್ಕಳು ಮನೆಯಲ್ಲಿ ಕಾದಂಬರಿ ಓದುವುದಕ್ಕೆ ಬಿಡುತ್ತಿರಲಿಲ್ಲ ಎನ್ನಲಾಗಿದೆ. ಕಾರಣ, ಕಾದಂಬರಿ ಓದಿದರೆ ವಯಸ್ಸಿಗೆ ಬಂದ ಹೆಣ್ಣುಮಕ್ಕಳ ಮನಸ್ಸು ಚಂಚಲವಾಗುತ್ತದೆ. ಅದರೆ ಕನ್ನಡದ ಮೇರ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಅವರು ತಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದು ಕಾದಂಬರಿಗಳನ್ನೇ ಎಂಬುದು ವಿಶೇಷ. ಅದರಲ್ಲೂ ಪುಟ್ಟಣ್ಣನವರ ಸಿನಿಮಾಗಳಾದ 'ರಂಗನಾಯಕಿ, ಮಸಣದ ಹೂವು, ಪಡುವಾರಹಳ್ಳಿ ಪಾಂಡವರು, ಅವೆಲ್ಲಕ್ಕಿಂತ ಹೆಚ್ಚಾಗಿ 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದಲ್ಲಿ ಅನೈತಿಕ ಸಂಬಂಧದ ಜೊತೆಗೆ ಕಾಮ-ಪ್ರೇಮದ ಕಥೆಯನ್ನು ಲೀಲಾಜಾಲವಾಗಿ ಎಂಬಂತೆ ಕಟ್ಟಿಕೊಡಲಾಗಿತ್ತು. 

ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ತಮ್ಮ ಸಿನಿಮಾಗಳಿಗೆ ಮಡಿವಂತರು ಇಷ್ಟಪಡದ ಎ ಗ್ರೇಡ್ ಎನ್ನಬಹುದಾದ ಕಾದಂಬರಿ, ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅವುಗಳಿಂದಲೇ ಕಟ್ಟಿಕೊಡುತ್ತಿದ್ದ ಚಿತ್ರಗಳನ್ನು ಸಮಾಜದ ಎಲ್ಲ ವರ್ಗದ ಸಿನಿಪ್ರೇಕ್ಷಕರೂ ನೋಡುತ್ತಿದ್ದರು. ಹೀಗಾಗಿ ಪುಟ್ಟಣ್ಣ ಕಣಗಾಲರ ಸಾಕಷ್ಟು ಸಿನಿಮಾಗಳು ಗೆದ್ದವು. ಆದರೆ, ಜಯಂತಿ ಅಭಿನಯದ ಎಡಕಲ್ಲು ಗುಡ್ಡದ ಮೇಲೆ ಹಾಗೂ ಆರತಿ ಅಭಿನಯದ ರಂಗನಾಯಕಿ ಚಿತ್ರಗಳನ್ನು ಅಂದು ಸ್ವಲ್ಪ ಅಸಭ್ಯತೆ ಹೊಂದಿರುವ ಚಿತ್ರಗಳು ಎಂದೇ ಹೇಳಲಾಗಿತ್ತು. 

Tap to resize

Latest Videos

'ಚೈತ್ರದ ಪ್ರೇಮಾಂಜಲಿ' ನಟಿ ಬಾಳಲ್ಲಿ ಘೋರ ದುರಂತ; ಪತಿಗೆ ಏನಾಗಿದೆ, ಎಲ್ಲಿದ್ದಾರೆ ಶ್ವೇತಾ?

ಎಡಕಲ್ಲು ಗುಡ್ಡದ ಮೇಲೆ ಹಾಗೂ ರಂಗನಾಯಕಿ ಚಿತ್ರಗಳಲ್ಲಿ ಕಾಮ ಕೇಂದ್ರೀಕೃತವಾದ ಹಸಿಬಿಸಿ ದೃಶ್ಯಗಳು ಸಾಕಷ್ಟಿದ್ದವು. ಚಿತ್ರಬ್ರಹ್ಮ ಎಂದೇ ಖ್ಯಾತಿ ಹೊಂದಿದ್ದ ಪುಟ್ಟಣ್ಣ ಅವರಿಗೆ ಸಾಮಾನ್ಯ ಜನರ, ಅಂದರೆ ಸಿನಿಮಾ ಪ್ರೇಕ್ಷಕರ ಅಭಿರುಚಿ ಗೊತ್ತಿತ್ತು. ನೋಡಬಾರದು ಎಂದು ಹೇಳುತ್ತಲೇ ನೋಡುವವರು ಎಂಬುದನ್ನು ಚೆನ್ನಾಗಿ ಅರಿತಿದ್ದರು ಪುಟ್ಟಣ್ಣನವರು. ಈ ಕಾರಣಕ್ಕಾಗಿಯೇ, ಅಂದು ಸಮಾಜದಲ್ಲಿ ಮಡಿವಂತಿಕೆ ತುಂಬಿದ್ದರೂ ಪುಟ್ಟಣ್ಣನವರು ಮಾತ್ರ ಮಡಿವಂತಿಕೆ ಮೀರಿದ ಕಥೆಗಳನ್ನೇ ಆಯ್ಕೆ ಮಾಡಿಕೊಂಡು ಗೆಲ್ಲುತ್ತಿದ್ದರು. 

ತುಂಬಿದ ಅಸೆಂಬ್ಲಿಯಲ್ಲಿ ಸೀರೆ-ಬ್ಲೌಸ್‌ ಕಿತ್ತ ದೊರೆ ಮುರುಗನ್; ಜಯಲಲಿತಾ ಅಂದು ಹೇಳಿದ್ದೇನು?

ಆದರೆ, ಪುಟ್ಟಣ್ಣ ಕಣಗಾಲ್ ತಮ್ಮ ನಿರ್ದೇಶನದ ಚಿತ್ರದಲ್ಲಿ ಎಲ್ಲಿಯೂ ಮಿತಿಮೀರಿದ ಅಶ್ಲೀಲತೆಯನ್ನು ತುರುಕುತ್ತಿರಲಿಲ್ಲ. ಮಡಿವಂತರೂ ಕೂಡ ಸಿನಿಮಾ ನೋಡಿ ಅಚ್ಚರಿಯಿಂದ ಕಣ್ಣರಳಿಸಿ ಆ ಕತೆಯ ಬಗ್ಗೆ ಮನೆಮನೆಗಳಲ್ಲಿ ಮಾತನಾಡುವಂತೆ ಮಾಡುತ್ತಿದ್ದರು ಪುಟ್ಟಣ್ಣ. ಈ ಕಾರಣಕ್ಕಾಗಿಯೇ ಅವರ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ದಾಖಲಿಸಿ ಸಾಕಷ್ಟು ಗಳಿಕೆಯನ್ನೂ ಮಾಡಿದ್ದವು. ಪ್ರೀತಿಪ್ರೇಮದ ಕಾಮ ವಾಸನೆಯ ಕಥೆಗಳನ್ನೂ ಕೂಡ ಸಿನಿಮಾ ಮಾಡುವಾಗ ಅದು ಅಶ್ಲೀಲ ಸಿನಿಮಾ ಆಗದಂತೆ ನೋಡಿಕೊಂಡು ಜಾಣ್ಮೆ ಮೆರೆಯುತ್ತಿದ್ದರು ಪುಟ್ಟಣ್ಣ. ಅದರಿಂದಲೇ ಅವರು ಅಂದು ಮೇರು ನಿರ್ದೇಶಕ ಬಿರುದನ್ನು ಪಡೆದುಕೊಂಡಿದ್ದರು. 

ಬ್ರೇಕಪ್ ಬಳಿಕ ಖಿನ್ನತೆಗೆ ಜಾರಿದ್ದ ಅನುಪಮಾ ಗೌಡಗೆ ಹೆಲ್ಪ್ ಮಾಡಿದ ಹ್ಯಾಂಡ್ ಯಾರದು?

ನಿಜ ನೀವನದಲ್ಲೂ ಪುಟ್ಟಣ್ಣ ಕಣಗಾಲ್ ಅವರು ಬಹಳಷ್ಟು ರಸಿಕರಾಗಿದ್ದರು ಎನ್ನಲಾಗಿದೆ. ನಟಿಯರಾದ ಕಲ್ಪನಾ ಹಾಗೂ ಆರತಿ ಅವರನ್ನು ಪುಟ್ಟಣ್ಣನವರು ಬೆನ್ನು ಬಿದ್ದು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಅದರಲ್ಲೂ ಆರತಿ ತಮ್ಮ ಜೀವನದಲ್ಲಿ ಬಂದ ಮೇಲೆ ಕಲ್ಪನಾರಿಂದ ದೂರವಾದರು ಪುಟ್ಟಣ್ಣ ಕಣಗಾಲ್. ಆರತಿಯವರನ್ನು ಮದುವೆ ಸಹ ಆಗಿದ್ದರು ಎನ್ನಲಾಗಿದೆ. ಆದರೆ, ಅಚ್ಚರಿ ಎಂಬಂತೆ, ಕಲ್ಪನಾ ಹಾಗೂ ಪುಟ್ಟಣ್ಣ ಈ ಇಬ್ಬರ ಜೀವನವೂ ದುರಂತದಲ್ಲೆ ಕೊನೆಯಾಯಿತು. ಇನ್ನು ಆರತಿ ಕೂಡ ಪುಟ್ಟಣ್ಣನವರನ್ನು ಬಿಟ್ಟು ಹೋಗಿ ಬಳಿಕ ಅವರ ಜೀವನ ಕೂಡ ಹಲವು ತಿರುವುಗಳನ್ನು ಪಡೆಯಿತು. 

ಭಾಷೆ ಬಗ್ಗೆ ಮತ್ತೆ 'ಕಿರಿಕ್' ಮಾಡಿಕೊಂಡ್ರಾ ರಶ್ಮಿಕಾ ಮಂದಣ್ಣ; ಎಲ್ಲೇ ಹೋದ್ರೂ ಬೆಂಬಿಡದ ವಿವಾದ!

click me!