Jaggesh: ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಭೇಟಿಯಾದ ನವರಸ ನಾಯಕ!

By Suvarna NewsFirst Published Feb 24, 2022, 8:46 PM IST
Highlights

ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್ 'ರಾಘವೇಂದ್ರ ಸ್ಟೋರ್ಸ್' ಚಿತ್ರೀಕರಣ ಮುಗಿಸಿಕೊಂಡು 'ತೋತಾಪುರಿ' ಚಿತ್ರದ ಬಿಡುಗಡೆಗಾಗಿ ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ ಶಿವರಾಜ್‌ಕುಮಾರ್ ಅವರನ್ನು ಜಗ್ಗೇಶ್ ಭೇಟಿ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್ (Jaggesh)  'ರಾಘವೇಂದ್ರ ಸ್ಟೋರ್ಸ್' (Raghavendra Stores) ಚಿತ್ರೀಕರಣ ಮುಗಿಸಿಕೊಂಡು 'ತೋತಾಪುರಿ' (Totapuri) ಚಿತ್ರದ ಬಿಡುಗಡೆಗಾಗಿ ತಯಾರಿ ನಡೆಸುತ್ತಿದ್ದಾರೆ. ಸದ್ಯ 'ರಾಘವೇಂದ್ರ ಸ್ಟೋರ್ಸ್' ಡಬ್ಬಿಂಗ್ (Dubbing) ಕಾರ್ಯದಲ್ಲಿ ಜಗ್ಗೇಶ್ ಸಂಪೂರ್ಣವಾಗಿ ತೊಡಗಿದ್ದಾರೆ. ಈ ಮಧ್ಯೆ ಡಬ್ಬಿಂಗ್‌ಗಾಗಿ ಸ್ಟುಡಿಯೋಗೆ ಹೋದ ಸಂದರ್ಭದಲ್ಲಿ ಅವರು ಆಕಸ್ಮಿಕ ಎನ್ನುವಂತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರನ್ನು ಭೇಟಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ಟರ್‌ನಲ್ಲಿ (Twitter) 'ಇಂದಿನಿಂದ ರಾಘವೇಂದ್ರ ಸ್ಟೋರ್ಸ್ ಮರುಮಾತಿನ ಜೋಡಣೆ ಶುರು. ಇಂದು ನಮ್ಮಿಬ್ಬರ ಆಕಸ್ಮಿಕ ಭೇಟಿ. ನನ್ನ ಆತ್ಮೀಯ ಸಹೋದರ ಶಿವಣ್ಣನ ನೋಡಿದರೆ ನನಗಾಗುವ ಆನಂದವೆ ಬೇರೆ. ಮಗುವಿನಂತಹ ಮನಸ್ಸಿನ ಬಂಧು' ಎಂದು ಬರೆದುಕೊಂಡು ಶಿವಣ್ಣನ ಜೊತೆ ಇರುವ ಫೋಟೋವೊಂದನ್ನಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಡಾ.ರಾಜ್‌ಕುಮಾರ್ (Dr Rajkumar) ಕುಟುಂಬಕ್ಕೂ ಮತ್ತು ಜಗ್ಗೇಶ್ ಅವರಿಗೂ ತೀರಾ ಹತ್ತಿರದ ನಂಟಿದೆ. ಜಗ್ಗೇಶ್ ಅವರ ಕಷ್ಟದ ಎಷ್ಟೋ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್ ಅವರೇ ಸಹಾಯಕ್ಕೆ ನಿಂತಿದ್ದಾರೆ. ಮಾತ್ರವಲ್ಲದೇ, ಪುನೀತ್ ರಾಜ್‌ಕುಮಾರ್ (Puneeth Rajkumar) ಜತೆಗೆ ಜಗ್ಗೇಶ್ ಅವರಿಗೆ ತೀರಾ ಆತ್ಮೀಯತೆ ಇತ್ತು. 

Latest Videos

ರಾಯರ ಪವಾಡದಿಂದ ಹಳ್ಳಿಹುಡುಗನಾಗಿದ್ದ ನಾನಿಂದು ನವರಸನಾಯಕನಾದೆ: Jaggesh

ಅಪ್ಪು ನಿಧನಕ್ಕೂ ಒಂದು ವಾರ ಮುಂಚೆ ಜಗ್ಗೇಶ್ ಮತ್ತು ಪುನೀತ್ ಮಲ್ಲೇಶ್ವರಂನಲ್ಲಿ ಭೇಟಿ ಮಾಡಿ, ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದರು. ಪುನೀತ್ ಏನಾದರೂ ಮಲ್ಲೇಶ್ವರಂ ಕಡೆ ಬಂದಾಗ, ಜಗ್ಗೇಶ್ ಅವರಿಗೆ ಕರೆ ಮಾಡಿ, ತಾವಿದ್ದಲ್ಲಿಗೆ ಕರೆಯಿಸಿಕೊಳ್ಳುತ್ತಿದ್ದರು. ಈ ಬಾಂಧವ್ಯದ ಕಾರಣಕ್ಕಾಗಿಯೇ ಜಗ್ಗೇಶ್ 'ರಾಘವೇಂದ್ರ ಸ್ಟೋರ್ಸ್' ಸಿನಿಮಾವನ್ನು ಒಪ್ಪಿಕೊಂಡಿದ್ದರು. ಪುನೀತ್ ಅವರ 'ರಾಜಕುಮಾರ' ಹಾಗೂ 'ಯುವರತ್ನ' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಸಂತೋಷ್ ಆನಂದ್ ರಾಮ್ (santhosh ananddram) 'ರಾಘವೇಂದ್ರ ಸ್ಟೋರ್ಸ್' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹೊಂಬಾಳೆ ಫಿಲಂಸ್ (Hombale Films) ಮೂಲಕ ವಿಜಯ್ ಕಿರಗಂದೂರು (Vijay Kiragandur) ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.



'ರಾಘವೇಂದ್ರ ಸ್ಟೋರ್ಸ್' ಚಿತ್ರದಲ್ಲಿ ಜಗ್ಗೇಶ್‌ಗೆ ನಾಯಕಿಯಾಗಿ ನಟಿ ಶ್ವೇತಾ ಶ್ರೀವಾತ್ಸವ್‌ (Shweta Srivastava) ಕಾಣಿಸಿಕೊಳ್ಳುತ್ತಿದ್ದು, 'ಸಂತೋಷ್‌ ಚಿತ್ರದ ಕಥೆ ಹೇಳಿದಾಗ ಖುಷಿಯಾಯಿತು. ಬಹಳ ಒಳ್ಳೆಯ ಪಾತ್ರವಾದ್ದರಿಂದ ಒಪ್ಪಿಕೊಂಡೆ. ಈಗಾಗಲೇ ನನ್ನ ಭಾಗದ ಚಿತ್ರೀಕರಣ ಮುಗಿದಿದೆ. ಈ ಸಿನಿಮಾದ ಆಫರ್‌ ನನಗೆ ಬಂದಾಗ ಅಚ್ಚರಿಗೊಳಗಾದೆ. ದೊಡ್ಡ ನಿರ್ದೇಶಕರು, ದೊಡ್ಡ ನಟರ ಬಹಳ ಒಳ್ಳೆಯ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎನಿಸುತ್ತಿದೆ. ಪಕ್ಕಾ ಕಮರ್ಷಿಯಲ್‌ ಎಂಟರ್‌ಟೇನರ್‌ ಸಿನಿಮಾವಿದು' ಎಂದು ಶ್ವೇತಾ ಶ್ರೀವಾತ್ಸವ್ ಹೇಳಿದ್ದಾರೆ. ವಿಶೇಷವಾಗಿ ಶ್ವೇತಾ ಮತ್ತು ಜಗ್ಗೇಶ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾವಾಗಿದ್ದು, ಸಿನಿರಸಿಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. 

ಬದುಕಿದರೆ ರಾಜನಂತೆ ಬದುಕು ಸತ್ತಮೇಲೆ ದೇವರಾಗು: ಕುವೆಂಪು ಅವರನ್ನು ನೆನೆಪು ಮಾಡಿಕೊಂಡ Jaggesh

ಇನ್ನು 'ಜಗ್ಗೇಶ್ ಅವರು ಇದೇ ಮೊದಲ ಬಾರಿಗೆ ನಮ್ಮ ಬ್ಯಾನರ್‌ನಲ್ಲಿ ನಟಿಸುತ್ತಿರುವುದು ನಮ್ಮನ್ನು ಪುಳಕಿತರನ್ನಾಗಿ ಮಾಡಿದೆ. ಇದು ನಮಗೆ ಹೆಮ್ಮೆಯ ವಿಷಯವೂ ಹೌದು. ಕನ್ನಡ ಚಲನಚಿತ್ರರಂಗದ ಕೀರ್ತಿಯಲ್ಲಿ ಜಗ್ಗೇಶ್ ಅವರ ಪಾತ್ರ ಅಪಾರವಾದದ್ದು. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅವಿಸ್ಮರಣೀಯ, ಅವರು ಚಿತ್ರರಂಗದ ಬಹುದೊಡ್ಡ ಆಸ್ತಿ ಎಂದರೆ ತಪ್ಪಾಗಲಾರದು, ಹೀಗಾಗಿ ಹೊಂಬಾಳೆ ಟೀಮ್‌ಗೆ ಜಗ್ಗೇಶ್ ಅವರ ಸೇರ್ಪಡೆ ನಮ್ಮ ಸೌಭಾಗ್ಯ ಎಂದು 'ರಾಘವೇಂದ್ರ ಸ್ಟೋರ್ಸ್' ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಈ ಹಿಂದೆ ಹೇಳಿಕೊಂಡಿದ್ದರು. ಈ ಚಿತ್ರದಲ್ಲಿ ಜಗ್ಗೇಶ್‌ ಹೋಟೆಲ್‌ ಮಾಲೀಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
 

ಇಂದಿನಿಂದ ಮರುಮಾತಿನ ಜೋಡಣೆ ಶುರು..
ಇಂದು ನಮ್ಮಿಬ್ಬರ ಆಕಸ್ಮಿಕ ಭೇಟಿ
ನನ್ನ ಆತ್ಮೀಯ ಸಹೋದರ ನ ನೋಡಿದರೆ ನನಗಾಗುವ ಆನಂದವೆ ಬೇರೆ..
ಮಗುವಿನಂತಹ ಮನಸ್ಸಿನ ಬಂಧು..ಶುಭಮಧ್ಯಾಹ್ನ:) pic.twitter.com/MSHGlctYFT

— ನವರಸನಾಯಕ ಜಗ್ಗೇಶ್ (@Jaggesh2)
click me!