Happy Birthday Jaggesh: 59ನೇ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್

By Suvarna News  |  First Published Mar 17, 2022, 4:58 PM IST

ಇಂದು ಸ್ಯಾಂಡಲ್‌ವುಡ್‌ನ ನವರಸ ನಾಯಕ ಜಗ್ಗೇಶ್ 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಶ್ರೀ ಗುರು ರಾಯರ ಆಶೀರ್ವಾದ ಪಡೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.


ಇಂದು ಸ್ಯಾಂಡಲ್‌ವುಡ್‌ನ (Sandalwood) ನವರಸ ನಾಯಕ ಜಗ್ಗೇಶ್ (Jaggesh) 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ (Mantralaya) ಭೇಟಿ ನೀಡಿದ್ದು, ಶ್ರೀ ಗುರು ರಾಯರ ಆಶೀರ್ವಾದ ಪಡೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟರ್‌ನಲ್ಲಿ (Twitter) 'ನಾನು ಈ ಜನ್ಮ ಮಾತಾಪಿತೃ ಕುಲದೇವರ ಕೃಪೆಯಿಂದ ಭೂಮಿಯಲ್ಲಿ ಪಡೆದು ಇಂದಿಗೆ 59 ವರ್ಷಗಳಾಗಿದೆ. ಇಂದು ಕೋಟ್ಯಂತರ ಕನ್ನಡದ ಮನಗಳ ಆಶೀರ್ವಾದ ಪಡೆದ ಮಗನಾಗಿರುವೆ. ರಾಯರ ಕೃಪೆಯಿಂದ ನಿಮ್ಮ ಪ್ರೀತಿ ಕೊನೆ ಉಸಿರಿನವರೆಗು ಉಳಿಸಿಕೊಳ್ಳುವೆ. ಇಂದು ರಾಯರ ಮುಂದೆ ನಿಂತು ಆಶೀರ್ವಾದ ಪಡೆದೆ. ಬದುಕು ಸಾರ್ಥಕ ಎನಿಸಿತು. ನನ್ನ ಹರಸಿದ ಆತ್ಮೀಯ ಹೃದಯಗಳಿಗೆ ಧನ್ಯವಾದ ಎಂದು ಟ್ವೀಟ್ (Tweet) ಮಾಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನದ ನೋವಿನಲ್ಲಿರುವ ಕಾರಣ ನಟ ಜಗ್ಗೇಶ್ ಅವರು ಇಂದು ಯಾವುದೇ ಸಂಭ್ರಮವಿಲ್ಲದೆ ಸರಳವಾಗಿ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡಿದ್ದಾರೆ.  ಈ ಬಾರಿ ನನ್ನ 59ನೇ ಹುಟ್ಟುಹಬ್ಬವನ್ನು ಆಚರಿಸುವುದಿಲ್ಲ. ಅದಕ್ಕೆ ಮನಸ್ಸು ಇಲ್ಲ. ಪ್ರತಿ ವರ್ಷ ಮಾರ್ಚ್ 17 ರಂದು ಪುನೀತ್ ರಾಜ್​ಕುಮಾರ್​ ಪರ್ಸನಲ್ ಆಗಿ ಕರೆ ಮಾಡಿ ಅಣ್ಣ ಹ್ಯಾಪಿ ಬರ್ತ್‌ಡೇ ಎಂದು ಹೇಳುತ್ತಿದ್ದರು. ಆದರೆ, ಆ ವಿಶಸ್​ ಬರದಂತಾಯಿತು ಎಂದು ನಟ ಜಗ್ಗೇಶ್ ಈ ಹಿಂದೆ ಟ್ವೀಟ್ ಮಾಡಿದ್ದರು. ಅಲ್ಲದೇ ಪುನೀತ್ ರಾಜ್‌ಕುಮಾರ್ ಜೊತೆ ತೆಗೆಸಿಕೊಂಡ ಕೊನೆಯ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಹಂಚಿಕೊಂಡಿದ್ದರು.

Tap to resize

Latest Videos

Jaggesh: ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಭೇಟಿಯಾದ ನವರಸ ನಾಯಕ!

ಅಪ್ಪು ಬದುಕಿದ್ದಾಗ ಜಗ್ಗೇಶ್‌ಗೆ ವಿಶ್​ ಮಾಡುತ್ತಿದ್ದರು. 'ನಾನು ಜಗ್ಗೇಶ್​ ಅವರ ಅಭಿಮಾನಿ' ಎಂದು ಹಲವು ಬಾರಿ ಪುನೀತ್​ ಹೇಳಿದ್ದರು. ಆದರೆ ಇಂದು ಆ ಮಾತನ್ನು ಹೇಳಲು ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲ. ಪುನೀತ್​ ರಾಜ್​ಕುಮಾರ್​ ಅವರ ಬಗೆಗಿನ ನೆನಪುಗಳು ಎಂದಿಗೂ ಶಾಶ್ವತವಾಗಿ ಇರುತ್ತವೆ. ಅದರಲ್ಲೂ ಕೆಲವು ಹಳೇ ವಿಡಿಯೋಗಳು ವೈರಲ್ (Video)​ ಆದಾಗ ಅಪ್ಪು ನೆನಪು ಇನ್ನಷ್ಟು ಕಾಡುತ್ತದೆ. ಇಂದು ಜಗ್ಗೇಶ್​ ಜನ್ಮದಿನದ ಪ್ರಯುಕ್ತ ಶುಭ ಕೋರಿರುವ ಅಭಿಮಾನಿಗಳು ಕೆಲವು ಹಳೆಯ ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದನ್ನು ನೋಡಿದ ಜಗ್ಗೇಶ್​ ಭಾವುಕರಾಗಿದ್ದಾರೆ.
 

ನಾನು ಈ ಜನ್ಮ ಮಾತಾಪಿತೃ ಕುಲದೇವರ ಕೃಪೆಯಿಂದ ಭೂಮಿಯಲ್ಲಿ ಪಡೆದು ಇಂದಿಗೆ 59ವರ್ಷ🙏
ಇಂದು ಕೋಟ್ಯಾಂತರ ಕನ್ನಡದ ಮನಗಳ ಆಶೀರ್ವಾದ ಪಡೆದ ಮಗನಾಗಿರುವೆ🙏ರಾಯರ ಕೃಪೆಯಿಂದ ನಿಮ್ಮ ಪ್ರೀತಿ ಕೊನೆ ಉಸಿರಿನವರೆಗು ಉಳಿಸಿಕೊಳ್ಳುವೆ🙏
ಇಂದು ರಾಯರ ಮುಂದೆ ನಿಂತು ಆಶೀರ್ವಾದ ಪಡೆದೆ🙏ಬದುಕು ಸಾರ್ಥಕ ಎನಿಸಿತು.
ನನ್ನಹರಸಿದ ಆತ್ಮೀಯ ಹೃದಯಗಳಿಗೆ ಧನ್ಯವಾದ🙏 pic.twitter.com/p6dP7AiS5z

— ನವರಸನಾಯಕ ಜಗ್ಗೇಶ್ (@Jaggesh2)


ಜಗ್ಗೇಶ್​ ಮೇಲೆ ತಮಗೆ ಯಾವ ರೀತಿಯ ಅಭಿಮಾನ ಇದೆ ಎಂಬುದನ್ನು ಪುನೀತ್​ ರಾಜ್​ಕುಮಾರ್​ ಅವರು ಈ ಮೊದಲು ಅನೇಕ ಬಾರಿ ಹೇಳಿದ್ದರು. 'ತರ್ಲೆ ನನ್​ ಮಗ' ಸಿನಿಮಾವನ್ನು ಅವರು ನೂರಾರು ಸಲ ನೋಡಿದ್ದರು. ಜಗ್ಗೇಶ್​ ಕಾಮಿಡಿಗೆ ಅಪ್ಪು ಫಿದಾ ಆಗಿದ್ದರು. ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ಪುನೀತ್​ ಕಡೆಯಿಂದ ಜಗ್ಗೇಶ್​ ಅವರಿಗೆ ಶುಭಾಶಯ ತಿಳಿಸಲಾಗುತ್ತಿತ್ತು. 'ಜಗ್ಗೇಶ್​ ಅವರಿಗೆ ಒಬ್ಬ ಅಭಿಮಾನಿಯಾಗಿ ನನ್ನ ಕಡೆಯಿಂದ ಶುಭಾಶಯಗಳು. ಹ್ಯಾಪಿ ಬರ್ತ್​ಡೇ ಜಗ್ಗೇಶ್​ ಸರ್​. ಯಾಕೆಂದರೆ ನಾನು ಅವರ ದೊಡ್ಡ ಫ್ಯಾನ್​' ಎಂದು ಪುನೀತ್​ ಹೇಳಿದ್ದ ವಿಡಿಯೋವನ್ನು ಅಭಿಮಾನಿಗಳು ಟ್ವಿಟರ್​ನಲ್ಲಿ ಈಗ ಶೇರ್​ ಮಾಡಿಕೊಂಡಿದ್ದಾರೆ.

ರಾಯರ ಪವಾಡದಿಂದ ಹಳ್ಳಿಹುಡುಗನಾಗಿದ್ದ ನಾನಿಂದು ನವರಸನಾಯಕನಾದೆ: Jaggesh

ಈ ವಿಡಿಯೋ ಮತ್ತೆ ವೈರಲ್​ ಆಗಿರುವುದು ಕಂಡು ಜಗ್ಗೇಶ್​ ಭಾವುಕರಾಗಿದ್ದಾರೆ. ಅಳುವ ಎಮೋಜಿಗಳ ಮೂಲಕ ಅವರು ಪ್ರತಿಕ್ರಿಯಿಸಿ ಆ ವಿಡಿಯೋವನ್ನು ರಿ-ಟ್ವೀಟ್ (Re-Tweet) ಮಾಡಿಕೊಂಡಿದ್ದಾರೆ. ಜಗ್ಗೇಶ್ ಅವರಿಗೆ ಸಿನಿರಂಗದ ಸೆಲೆಬ್ರಿಟಿಗಳು, ರಾಜಕೀಯದ ಗಣ್ಯರೂ ಸೇರಿದಂತೆ ಅಭಿಮಾನಿಗಳು ಅವರ ಜನ್ಮದಿನಕ್ಕೆ ಶುಭಾಶಯ ಕೋರುತ್ತಿದ್ದಾರೆ. ಇನ್ನು ಜಗ್ಗೇಶ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ವಿಜಯ್​ ಪ್ರಸಾದ್ (Vijay Prasad) ನಿರ್ದೇಶಿಸಿರುವ ರೊಮ್ಯಾಂಟಿಕ್‌ ಕಾಮಿಡಿ ಡ್ರಾಮಾ 'ತೋತಾಪುರಿ' (Totapuri) ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸಂತೋಷ್ ಆನಂದ್ ರಾಮ್ (santhosh ananddram) ನಿರ್ದೇಶನದ 'ರಾಘವೇಂದ್ರ ಸ್ಟೋರ್ಸ್​' (Raghavendra Stores) ಚಿತ್ರ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿದೆ. 
 

😭😭😭😭😭😭😭 https://t.co/3i8SWRplGO

— ನವರಸನಾಯಕ ಜಗ್ಗೇಶ್ (@Jaggesh2)
click me!