Golden Star Ganesh: ನಾನು ಎಸ್.ಪಿ.ಬಾಲು ಆಗಬೇಕು, ಇಳಯರಾಜ ಆಗಬೇಕು ಎಂದ 'ಸಖತ್ ಬಾಲು'

By Suvarna NewsFirst Published Nov 25, 2021, 7:03 PM IST
Highlights

ಚಿತ್ರದ ಸಖತ್ ಬಾಲು ಟೀಸರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಇಂದು ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ಗಣೇಶ್ ಪುತ್ರ ವಿಹಾನ್ ಕಾಣಿಸಿಕೊಂಡಿದ್ದು, ಚಿತ್ರದ ನಾಯಕ ಗಣೇಶ್ ಅವರ ಬಾಲ್ಯದ ದಿನಗಳ ಬಾಲು ಪಾತ್ರದಲ್ಲಿ ವಿಹಾನ್ ಅಭಿನಯಿಸಿದ್ದಾನೆ.

ಸ್ಯಾಂಡಲ್‌ವುಡ್‌ನ ಗೋಲ್ಡನ್​ ಸ್ಟಾರ್​ ಗಣೇಶ್ (Golden Star Ganesh)​ ಮತ್ತು ನಿರ್ದೇಶಕ ಸಿಂಪಲ್​ ಸುನಿ (Simple Suni) ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ 'ಸಖತ್' (Sakath) ಸಿನಿಮಾ ನಾಳೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಚಿತ್ರದ 'ಸಖತ್ ಬಾಲು' (Sakath Balu) ಟೀಸರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಇಂದು ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ಗಣೇಶ್ ಪುತ್ರ ವಿಹಾನ್ (Vihan) ಕಾಣಿಸಿಕೊಂಡಿದ್ದು, ಚಿತ್ರದ ನಾಯಕ ಗಣೇಶ್ ಅವರ ಬಾಲ್ಯದ ದಿನಗಳ ಬಾಲು ಪಾತ್ರದಲ್ಲಿ ವಿಹಾನ್ ಅಭಿನಯಿಸಿದ್ದಾನೆ.

ಬಿಡುಗಡೆಯಾದ ಟೀಸರ್‌ನಲ್ಲಿ, ದೇವಲೋಕದಲ್ಲಿ ಋಷಿಮುನಿಗಳು ಶಿವಪುತ್ರ ಗಣೇಶನಿಗೆ ಚಿತ್ರದ ಕಥೆ ಬಗ್ಗೆ ಹೇಳುವ ಸನ್ನಿವೇಶಗಳಿವೆ. ಬಾಲು ಹಿಡಿದು ನಿಂತಿರುವವನೇ ಬಾಲು. ಇವನಿಗೆ ಕಣ್ಣೊಳಗೆ ಕಣ್ಣು ಅನ್ನುವ ತರಹ ಪವರ್ ಕಣ್ಣು. ಹೆಸರು ಬಾಲು. ಇವನ ಐ ಬಾಲ್ ಚೆನ್ನಾಗಿ ಇರೋದಿಕ್ಕೆ ವಾಲಿಬಾಲ್, ಬಾಸ್ಕೆಟ್ ಬಾಲ್,  ಥ್ರೋ ಬಾಲ್, ಫುಟ್‌ಬಾಲ್ ಎಲ್ಲ ಚೆನ್ನಾಗಿ ಆಡುತ್ತಿದ್ದ. ಒಂದು ದಿನ ನಿದ್ದೆಯಿಂದ ಎದ್ದವನೇ ನಾನು ಎಸ್.ಪಿ.ಬಾಲು ಆಗಬೇಕು. ನಾನು ಇಳಯರಾಜ ಆಗಬೇಕು ಎಂಬೆಲ್ಲ ಕಚಗುಳಿ ಇಡುವ ಡೈಲಾಗ್​ಗಳು ಸೇರಿದಂತೆ ಭರ್ಜರಿ ಕಾಮಿಡಿಯನ್ನು ಟೀಸರ್‌ನಲ್ಲಿ ಕಾಣಬಹುದಾಗಿದೆ. ವಿಹಾನ್ ತಮ್ಮ ಪಾತ್ರಕ್ಕೆ ತಾನೇ ಡಬ್ಬಿಂಗ್ ಕೂಡಾ ಮಾಡಿದ್ದಾನೆ.

Sakath: ಗಣೇಶ್-ಸುರಭಿ ಕಾಂಬಿನೇಷನ್​ನ 'ಶುರುವಾಗಿದೆ' ಸಾಂಗ್ ರಿಲೀಸ್

ರೊಮ್ಯಾಂಟಿಕ್ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರ ಟಿ.ವಿ. ರಿಯಾಲಿಟಿ ಶೋ ಮತ್ತು ಕೋರ್ಟ್ ಕೇಸ್ ಸುತ್ತ ಸಾಗುತ್ತದೆ. ಚಿತ್ರದಲ್ಲಿ ಗಣೇಶ್‌ ರಿಯಾಲಿಟಿ ಶೋ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. 'ಚಮಕ್' ಚಿತ್ರದ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಕೊಟ್ಟಿದ್ದ ಗಣಿ-ಸುನಿ ಈ ಬಾರಿ 'ಸಖತ್' ಸಿನಿಮಾದ ಮೂಲಕ ಮತ್ತೆ ಒಂದಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಈ ಸಿನಿಮಾ ಟೀಸರ್‌ಗೆ (Teaser) ಅಭೂತ ಪೂರ್ವ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಬಾರಿಗೆ ಈ ಚಿತ್ರದಲ್ಲಿ ಕಣ್ಣು ಕಾಣದ ವ್ಯಕ್ತಿಯಾಗಿ ಗಣೇಶ್​ ಕಾಣಿಸಿಕೊಂಡಿದ್ದಾರೆ. ಕಚಗುಳಿ ಇಡುವ ಡೈಲಾಗ್​ಗಳು, ಭರ್ಜರಿ ಕಾಮಿಡಿ ಟೀಸರ್‌ನಲ್ಲಿತ್ತು. ಹಾಗೇ ಚಿತ್ರದ ಹಾಡುಗಳು ಕೂಡ ಎಲ್ಲರ ಗಮನ ಸೆಳೆಯುತ್ತಿವೆ. 



ಚಿತ್ರದಲ್ಲಿ ಗಣೇಶ್​ ಜೊತೆ ನಿಶ್ವಿಕಾ ನಾಯ್ಡು (Nishwika Naidu), ಸುರಭಿ (Surabhi) ನಾಯಕಿಯರಾಗಿ ನಟಿಸಿದ್ದಾರೆ. ರಂಗಾಯಣ ರಘು (Rangayana Raghu), ಸಾಧು ಕೋಕಿಲ (Sadhu Kokila), ಗಿರಿ, ಧರ್ಮಣ್ಣ ಮುಂತಾದ ಕಲಾವಿದರ ತಾರಾಬಳಗ ಚಿತ್ರಕ್ಕಿದೆ. ಕೆವಿಎನ್​ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಈ ಸಿನಿಮಾ ತಯಾರಾಗಿದ್ದು,​ ನಿಶಾ ವೆಂಕಟ್​ ಕೋನಂಕಿ ಮತ್ತು ಸುಪ್ರಿತ್​ ಬಂಡವಾಳ ಹಾಕಿದ್ದಾರೆ. ಜೂಡಾ ಸ್ಯಾಂಡಿ (Judah Sandhy) ಸಂಗೀತ ಸಂಯೋಜನೆ, ಶಾಂತ್​ ಕುಮಾರ್​ ಸಂಕಲನ ಮತ್ತು ಸಂತೋಷ್​ ರೈ ಪಾತಾಜೆ ಕ್ಯಾಮರಾ ಕೈಚಳಕ 'ಸಖತ್'​ ಸಿನಿಮಾಗಿದೆ. 

ನವೆಂಬರ್ 26ಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ 'ಸಖತ್' ಸಿನಿಮಾ ರಿಲೀಸ್

ಇನ್ನು ಇತ್ತೀಚೆಗಷ್ಟೇ ಚಿತ್ರದ 'ಟೈಟಲ್‌ ಟ್ರ್ಯಾಕ್‌' ಹಾಗೂ 'ಶುರುವಾಗಿದೆ' ಹಾಡುಗಳು ಬಿಡುಗಡೆಯಾಗಿ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಟೈಟಲ್‌ ಹಾಡಿಗೆ ನಿಂತಲ್ಲೇ ಡ್ಯಾನ್ಸ್ ಮಾಡುವಂತ ರ್‍ಯಾಪ್‌ ಸಾಹಿತ್ಯವನ್ನು ಸಿಂಪಲ್ ಸುನಿ ಹಾಗೂ ರ್‍ಯಾಪರ್‌ ಸಿದ್ ಬರೆದಿದ್ದರು. ಪಂಚಮ್ ಜೀವಾ, ಜೂಡಾ ಸ್ಯಾಂಡಿ, ರ್‍ಯಾಪರ್‌ ಸಿದ್ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದ್ದು, ಬಿ.ಧನಂಜಯ್ ಹಾಡಿಗೆ ಕೊರಿಯೋಗ್ರಾಫಿ ಮಾಡಿದ್ದರು. ಹಾಗೂ ಶುರುವಾಗಿದೆ ಮೆಲೋಡಿ ಹಾಡಿಗೆ ಅರ್ಜುನ್ ಲೂಯಿಸ್ ಸಾಹಿತ್ಯ ಬರೆದಿದ್ದು, ದಕ್ಷಿಣ ಭಾರತದ ಹೆಸರಾಂತ ಗಾಯಕ ಸಿದ್ ಶ್ರೀರಾಂ (Sid Sriram) ಕಂಠದಲ್ಲಿ ಈ ಹಾಡು ಮೂಡಿಬಂದಿತ್ತು. 
 

click me!