ಪ್ರೇಮಿಗಳಿಗೆ ಕೊನೆ ಇರಬಹುದು, ಪ್ರೀತಿಗೆ ಕೊನೆ ಇಲ್ಲ: ಗಣೇಶ್

Published : Sep 29, 2023, 10:30 AM ISTUpdated : Sep 29, 2023, 09:10 PM IST
ಪ್ರೇಮಿಗಳಿಗೆ ಕೊನೆ ಇರಬಹುದು, ಪ್ರೀತಿಗೆ ಕೊನೆ ಇಲ್ಲ: ಗಣೇಶ್

ಸಾರಾಂಶ

ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿಯಾಗಿ ರೇಶ್ಮಾ ನಾನಯ್ಯ ಮತ್ತು ರುಕ್ಮಿಣಿ ವಸಂತ್ ಕಾಣಿಸಿಕೊಂಡಿರುವ ಬಾನದಾರಿಯಲ್ಲಿ ಸಿನಿಮಾ ರಿಲೀಸ್ ಆಗಿದೆ.....

- ಸುಂದರವಾದ ಹಾಡಿನ ಬ್ಯೂಟಿಫುಲ್ ಪದ ಬಾನದಾರಿಯಲ್ಲಿ. ಇಲ್ಲಿ ಅಷ್ಟೇ ಸುಂದರವಾದ ಜೀವದ ಕತೆ ಇದೆ. ಹೀಗಾಗಿ ಹೆಸರು ಮತ್ತು ಕತೆ ಒಂದಕ್ಕೊಂದು ನಂಟು ಇದೆ.

- ಇದೊಂದು ಫೀಲ್‌ಗುಡ್‌ ಕತೆ. ಮನಸ್ಸುಗಳಿಗೆ ಹತ್ತಿರವಾಗುವ ಪಾತ್ರಗಳು, ದೃಶ್ಯಗಳು, ಹಿನ್ನೆಲೆ, ಕತೆ ಎಲ್ಲವೂ ಇದೆ. ಸಿನಿಮಾ ನೋಡಿದ ಮೇಲೆ ಪ್ರೇಕ್ಷಕನ ಮನಸ್ಸಿನಲ್ಲಿ ಉಳಿಯುವಂತಹ ಸಿನಿಮಾ ಇದು.

- ಇಲ್ಲಿಯವರೆಗೂ ನಾವು ಪ್ರೇಮದ ಕತೆಗಳನ್ನು ನೋಡಿದ್ದೇವೆ. ಆದರೆ, ಪ್ರೀತಿಗೆ ಒಂದು ಕತೆ ಇದೆ. ಇದು ಜೀವನ, ಸಂಬಂಧಗಳು, ಖುಷಿ, ದುಃಖ ಹೀಗೆ ಎಲ್ಲವನ್ನೂ ಒಗೊಂಡಿರುವ ಪ್ರೀತಿಯ ಕುರಿತ ಸಿನಿಮಾ.

ಸಿಂಹ ಕಂಡು ರಂಘಾಯಣ ರಘುಗೆ ನಡುಕ, ಮಧ್ಯರಾತ್ರಿ ಸಿಂಹ ಗುಡಾರ ಕೆರೀತಾ ಇತ್ತು: ರಂಗಾಯಣ ರಘು ಫುಲ್‌ ಭಯ!

- ಪ್ರೇಮಿಗಳಿಗೆ ಕೊನೆ ಇರುತ್ತದೆ. ಅಂದರೆ ಪ್ರೇಮಿಗಳು ಸಾಯಬಹುದು. ಆದರೆ, ಪ್ರೀತಿ ಸಾಯಲ್ಲ. ಅಂಥ ಪ್ರೀತಿಯನ್ನು ಪ್ರೇಮಿಗಳ ಸಾವಿನ ನಂತರವೂ ಮುಂದುವರಿಸಬೇಕು ಎಂಬುದೇ ಈ ಸಿನಿಮಾ.

- ಒಬ್ಬ ಕ್ರಿಕೆಟರ್‌, ಪರಿಸರ ಪ್ರೀತಿ ಇರುವ ಹುಡುಗಿ, ಮತ್ತೊಬ್ಬಳು ಟ್ರಾವೆಲರ್‌, ಮಗಳೇ ಪ್ರಪಂಚ ಎಂದುಕೊಂಡಿರುವ ಅಪ್ಪ... ಇವಿಷ್ಟು ಪಾತ್ರಗಳ ಮೂಲಕ ಸಿನಿಮಾ ಸಾಗುತ್ತದೆ.

ಕಡಲನ್ನು ಹೆಚ್ಚು ಗೌರವಿಸಲು ಕಲಿತೆ: Rukmini Vasanth

- ಇದೊಂದು ಅನುಭವ ಕಥನ. ಹೊಸ ಕತೆ, ಹೊಸತನದಿಂದ ಕೂಡಿರುವ ಹಿನ್ನೆಲೆಯಲ್ಲಿ ಹೇಳಬೇಕು ಅನಿಸಿದಾಗಲೇ ಈ ಸಿನಿಮಾ ಆಫ್ರಿಕಾವರೆಗೂ ಹೋಗಿದ್ದು.

- ತೆರೆ ಮೇಲೂ ಪಾತ್ರಧಾರಿಗಳು ಮುದ್ದು ಮುದ್ದಾಗಿ ಕಾಣುವುದು, ಆಗಾಗ ನಗಿಸುವುದು, ಭಾವುಕರನ್ನಾಗಿಸುವುದು ಈ ಚಿತ್ರದ ಹೈಲೈಟ್‌.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?