
ಬೆಂಗಳೂರು (ಸೆ.29): ಕಾವೇರಿ ಹೋರಾಟ (Cauvery Water) ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಂದೇ ವಾರದಲ್ಲಿ ಕಾವೇರಿ ನೀರಿಗಾಗಿ ಎರಡು ಬಂದ್ ಆಗಿದೆ. ಇದೀಗ ಬೆಂಗಳೂರಿನಲ್ಲಿ ತಮಿಳು ನಟ ಸಿದ್ಧಾರ್ಥ್ ಸುದ್ದಿಗೋಷ್ಠಿಗೆ 'ಕರವೇ ಸ್ವಾಭಿಮಾನಿ ಸೇನೆ' ಕಡೆಯವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ನಟ ಪ್ರಕಾಶ್ ರಾಜ್ ಕನ್ನಡಿಗರ ಪರವಾಗಿ ಕ್ಷಮೆ ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್ , ದಶಕಗಳಷ್ಟು ಹಳೆಯದಾದ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿರುವ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅದರ ಮುಖಂಡರನ್ನು ಪ್ರಶ್ನಿಸುವ ಬದಲು, ಕೇಂದ್ರದ ಮಧ್ಯಸ್ಥಿಕೆಗೆ ಒತ್ತಡ ಹೇರದ ಅನುಪಯುಕ್ತ ಸಂಸದರನ್ನು ಪ್ರಶ್ನಿಸುವ ಬದಲು ಈ ರೀತಿ ಜನಸಾಮಾನ್ಯರಿಗೆ ಮತ್ತು ಕಲಾವಿದರಿಗೆ ತೊಂದರೆ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡಿಗನಾಗಿ , ಕನ್ನಡಿಗರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಸಿದ್ದಾರ್ಥ್ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರಲ್ಲಿ ಸಿದ್ಧಾರ್ಥ ಸಿನಿಮಾ ಪ್ರಚಾರ: ಕರವೇ ಆಕ್ರೋಶಕ್ಕೆ ಬೆಚ್ಚಿಬಿದ್ದ ತಮಿಳು ನಟ!
ತಮಿಳು ನಟ ಸಿದ್ಧಾರ್ಥ ನಟಿಸಿರುವ 'ಚಿತ್ಥ' ಚಿತ್ರದ ಸುದ್ದಿಗೋಷ್ಠಿ ಮಲ್ಲೇಶ್ವರಂನ SRV ಥಿಯೇಟರ್‌ನಲ್ಲಿ ನಡೆಯುತ್ತಿತ್ತು. ಕರವೇ ಸ್ವಾಭಿಮಾನಿ ಬಳಗದವರು "ಕಾವೇರಿ ಕಿಚ್ಚು ಹತ್ತಿರೋ ಈ ಸಮಯದಲ್ಲಿ ತಮಿಳು ಚಿತ್ರದ ಪ್ರಚಾರದ ಅವಶ್ಯಕತೆ ಏನಿದೆ...? ಈ ಸಮಯದಲ್ಲಿ ಸುದ್ದಿಗೋಷ್ಠಿಗೆ ನಮ್ಮ ವಿರೋಧವಿದೆ. ದಯವಿಟ್ಟು ತಕ್ಷಣವೇ ಸುದ್ದಿಗೋಷ್ಠಿ ನಿಲ್ಲಿಸಿ. ಇಲ್ಲಿ ಕಾವೇರಿ ಗಲಾಟೆ ನಡೆಯುತ್ತಿದೆ.. ಈಗ ಇದು ಬೇಕಿತ್ತಾ..? ಸಂಘರ್ಷಕ್ಕೆ ಇದು ದಾರಿ ಮಾಡಿಕೊಡಲ್ಲವಾ..? ಎಂದು ನಿಂಗರಾಜು ಗೌಡ ಮತ್ತು ಕರವೇ ಸ್ವಾಭಿಮಾನಿ ಸೇನೆ ತಂಡ ವಿರೋಧ ವ್ಯಕ್ತಪಡಿಸಿತ್ತು.
ಭಾರೀ ವೈರಲ್ ಆಗುತ್ತಿರುವ ಅನುಪಮಾ ಗೌಡ 'ರೆಡ್ ಬ್ಯೂಟಿ' ಹಾಟ್ ಫೋಟೋಸ್!
ತಕ್ಷಣವೇ ತಮಿಳು ನಟ ಸಿದ್ಧಾರ್ಥ ಪ್ರೆಸ್‌ಮೀಟ್‌ನಿಂದ ಹೊರನಡೆದರು. ನಾಯಕ ನಟ ಸಿದ್ಧಾರ್ಥ ಹೊರನಡೆದ ತಕ್ಷಣ 'ಪ್ರೇಸ್ ಮೀಟ್' ನಿಂತುಹೋಗಿ ಅಲ್ಲಿ ಮೌನ ಆವರಿಸಿತು. ಇದು ಪರ ವಿರೋಧಕ್ಕೆ ಕಾರಣವಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.