
ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷವೂ ತಮ್ಮ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಜೂನ್ 2ರಂದು ಗಣೇಶ್‌ಗೆ 46 ವರ್ಷ ಆಗಲಿದೆ. ಆದರೆ ಇದ್ದಕ್ಕಿದ್ದಂತೆ ಈ ವರ್ಷವೂ ಬೇಡ ಎಂದಿರುವುದಕ್ಕೆ ಕಾರಣ ತಿಳಿಯದೆ ನೆಟ್ಟಿಗರು ಕಾಮೆಂಟ್ ಮೂಲಕ ಬೇಸರ ವ್ಯಕ್ತ ಪಡಿಸಿದ್ದಾರೆ.
ಗಣೇಶ್ ಪೋಸ್ಟ್:
'ನನ್ನ ಆತ್ಮೀಯ ಅಭಿಮಾನಿಗಳೇ,
ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯವಿಲ್ಲ. ಅದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ. ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ. ಮುಂದಿನ ವರ್ಷ ಖಂಡಿತ ಒಟ್ಟಿಗೆ ಹುಟ್ಟುಹಬ್ಬ ಆಚರಿಸೋಣ. ಅನಾನುಕೂಲಕ್ಕೆ ಕ್ಷಮೆಯಿರಲಿ.
ಎಂದಿನ ತಮ್ಮ ಅಭಿಮಾನದ ನಿರೀಕ್ಷೆಯೊಂದಿಗೆ ನಿಮ್ಮವ ಗಣೇಶ್
ನನ್ನ ಗಂಡ ಸಲಿಂಗಕಾಮಿ, ನೀನೊಬ್ಬಳು ಸತ್ತ ಕಾಗೆ ಇದ್ದಂತೆ ಕೆಟ್ಟದಾಗಿ ಸಾಯುತ್ತೀಯಾ: ಗಾಯಕಿ ಸುಚಿತ್ರಾ
ಕೊರೋನಾ ಲಾಕ್‌ಡೌನ್ ಸಮಯದಿಂದಲೂ ಗಣೇಶ್ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಹೀಗಾಗಿ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. ಸಿನಿಮಾನೂ ರಿಲೀಸ್ ಆಗುತ್ತಿಲ್ಲ ನೀವು ಅಭಿಮಾನಿಗಳಿಗೂ ಸಿಗುವುದಿಲ್ಲ ಅಂದ್ರೆ ಎಷ್ಟು ಸರಿ ಎಂದು ಕಾಮೆಂಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.
ರೀಲ್ಸ್- ಯೂಟ್ಯೂಬ್ ಹಣದಿಂದ ಸಹೋದರನಿಗೆ ಮಹೇಂದ್ರ ಥಾರ್ ಕೊಡಿಸಿದ ರಚನಾ!
ಗಣೇಶ್ ಮುಂದಿನ ಚಿತ್ರ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಚಿನ್ನಮ್ಮ ಚಿನ್ನಮ್ಮ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ ಸಿಂಪಲ್ ಸುನಿ ಅಕ್ಷನ್ ಕಟ್ ಹೇಳುತ್ತಿರುವ 'ಸ್ಟೋರಿ ಅಫ್ ರಾಯಗಢ' ಎನ್ನುವ ಸಿನಿಮಾ ಘೋಷಣೆ ಅಗಿತ್ತು ಆದರೆ ಕೆಲವು ಕಾರಣಗಳಿಂದ ಸೆಟ್ಟೇರಿಲ್ಲ. ಕಳೆದ ವರ್ಷ ಬಾನ ದಾರಿಯಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಕಲೆಕ್ಷನ್ ಅಷ್ಟಕ್ಕೆ ಅಷ್ಟೇ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.