ಸ್ಯಾಂಡಲ್‌ವುಡ್ ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಅರೆಸ್ಟ್ ಆಗಿದ್ದು, ಪರಪ್ಪನ ಆಗ್ರಹಾರ ಜೈಲಿನಲ್ಲಿದ್ದಾರೆ. ಈ ನಡುವೆ ಚಿತ್ರರಂಗದ ಪ್ರಸ್ತುತ ಬೆಳವಣಿಗೆಯ ಬಗ್ಗೆ ಹಿರಿಯ ನಟ ಹಾಗೂ ರಾಜಕಾರಣಿ ಜಗ್ಗೇಶ್ ಮಾತನಾಡಿದ್ದಾರೆ.
ಬೆಂಗಳೂರು (ಜೂ.30): ಸ್ಯಾಂಡಲ್‌ವುಡ್ ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಅರೆಸ್ಟ್ ಆಗಿದ್ದು, ಪರಪ್ಪನ ಆಗ್ರಹಾರ ಜೈಲಿನಲ್ಲಿದ್ದಾರೆ. ಈ ನಡುವೆ ಚಿತ್ರರಂಗದ ಪ್ರಸ್ತುತ ಬೆಳವಣಿಗೆಯ ಬಗ್ಗೆ ಹಿರಿಯ ನಟ ಹಾಗೂ ರಾಜಕಾರಣಿ ಜಗ್ಗೇಶ್ ಮಾತನಾಡಿದ್ದಾರೆ. ಇನ್ನೂ ದರ್ಶನ್ ಪ್ರಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ನೋ ರಿಯಾಕ್ಷನ್ ಎಂದು ನಟ ಜಗ್ಗೇಶ್ ಮಾತನಾಡಿದ್ದಾರೆ. ಶಿವಾನಂದ ಸರ್ಕಲ್‌ನಲ್ಲಿ ಇಂದು ನಿರ್ಮಾಪಕರ ಸಂಘದ ನೂತನ ಕಟ್ಟಡಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಜಗ್ಗೇಶ್ ಕೂಡ ಭಾಗಿದ್ದರು. ಈ ವೇಳೆ, ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ.
ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಯತ್ನಗಳು ವ್ಯರ್ಥವಾಗುತ್ತಿದೆ. ಚಿತ್ರರಂಗದವರಲ್ಲಿ ಶಿಸ್ತು ಕಮ್ಮಿಯಾಗಿದೆ ಎಂದು ಮಾತನಾಡಿದ್ದಾರೆ. ಮುಂಚೆ ಎಲ್ಲಾ ಸಿನಿಮಾ ಮಾಡಬೇಕಾದರೆ, ಎಲ್ಲದಕ್ಕೂ ಸಮಯ ತೆಗೆದುಕೊಳ್ಳೋರು. ಬಜೆಟ್ ಲಿಸ್ಟ್ ರೆಡಿ ಮಾಡೋರು. ಈಗ ಹೀಗೆಲ್ಲಾ ಇಲ್ಲ. ಸಿನಿಮಾಗೆ ಭಾಷೆ ಇಲ್ಲದಂಗೆ ಆಗಿದೆ. ಶಿಸ್ತು ಎಲ್ಲಿ ಇರಲ್ವೋ ಅಲ್ಲಿ ಸಕ್ಸಸ್ ಇರಲ್ಲ. ಈಗಲೂ ಸರಿ ಮಾಡಿದ್ರೆ ಸರಿ ಆಗಲಿದೆ ಎಂದು ಜಗ್ಗೇಶ್ ಮಾತನಾಡಿದರು. ದರ್ಶನ್ ಪ್ರಕರಣದ ಬಗ್ಗೆ ಪ್ರಶ್ನೆ ಕೇಳಿದಾಗ ಯಾರ ಬಗ್ಗೆಯೂ ನಾನು ಮಾತನಾಡಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ.
ಆಗಾಗ್ಗೆ ಹೋಗಿ ಸಿಎಂ ತಲೆ ನಿನ್ನುತ್ತಿರಬೇಕು: ಚಿತ್ರರಂಗದ ಕೆಲಸಗಳನ್ನು ಪಟ್ಟು ಹಿಡಿದು ಮಾಡಿಸಬೇಕು, ಸಿದ್ದರಾಮಯ್ಯ ಅವರು ಬಂದಾಗ ಹೇಳಿ ಸುಮ್ಮನಾಗುವುದಲ್ಲ ಆಗಾಗ್ಗೆ ಹೋಗಿ ಅವರ ತಲೆ ನಿನ್ನುತ್ತಿರಬೇಕು, ಸಿಎಂ ಸಿದ್ದರಾಮಯ್ಯ ಅವರಿಗೆ ಕೆಲಸದ ಭಾರ ತುಂಬಾ ಇರುತ್ತದೆ. ಒಟಿಟಿ ಎಂಬುದು ಒಳ್ಳೆಯ ಯೋಜನೆ. ಇದನ್ನು ಸರ್ಕಾರ ಮಾಡಿದ್ರೆ ಪ್ರಾಫಿಟ್ ತಂದು ಕೊಡುತ್ತದೆ. ಈಗಾಗಲೇ ಮಲ್ಟಿ ನ್ಯಾಷನಲ್ ಕಂಪನಿ ಮಾಡಿಕೊಂಡಿದೆ. ನಮ್ಮ ದುಡ್ಡು ಹೊರ ರಾಜ್ಯಕ್ಕೆ ಹೋಗ್ತಿದೆ ಎಂದು ಜಗ್ಗೇಶ್ ಹೇಳಿದರು.
ಸಿಟ್ಟನ್ನ ಸ್ಕ್ರಿಪ್ಟ್ ಮಾಡಬೇಕು, ದ್ವೇಷವನ್ನ ಕ್ಯಾರೆಕ್ಟರ್ ಮಾಡಬೇಕು: ದರ್ಶನ್‌ಗೆ ಹಂಸಲೇಖ ಕಿವಿಮಾತು
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತಿದ್ದಾರೆ. ಹಲವು ಅಭಿಮಾನಿಗಳು ದರ್ಶನ್ರನ್ನು ಭೇಟಿಯಾಗಲು ಪ್ರತಿನಿತ್ಯ ಜೈಲಿನ ಬಳಿ ಬರುತ್ತಿದ್ದಾರೆ. ಆದರೆ ಪೊಲೀಸರು ಯಾರಿಗೂ ಅವಕಾಶ ನೀಡುತ್ತಿಲ್ಲ. ಕೇವಲ ಕುಟುಂಬ ಸದಸ್ಯರಿಗೆ ಹಾಗೂ ವಕೀಲರಿಗಷ್ಟೆ ಅವಕಾಶ ನೀಡಲಾಗಿದೆ. ಭಾನುವಾರ ರಜೆ ಹಿನ್ನೆಲೆಯಲ್ಲಿ ಯಾರಿಗೂ ಭೇಟಿಯಾಗುವ ಅವಕಾಶ ಇರುವುದಿಲ್ಲ.