
ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳುತ್ತಿರುವ ಗಾಳಿಪಟ 2 ಸಿನಿಮಾ ಚಿತ್ರೀಕರಣ ವಿದೇಶದಲ್ಲಿ ನಡೆಯುತ್ತಿದೆ. ಹಲವು ದಿನಗಳಿಂದ ವಿದೇಶದಲ್ಲಿರುವ ತಂಡ, ಗಾಳಿಪಟ ಉತ್ಸವದಲ್ಲಿ ಭಾಗಿಯಾಗಿದೆ. ಈ ವೇಳೆ ನಟ ತಮ್ಮ ಗಾಳಿಪಟವನ್ನು ವಿಭಿನ್ನವಾಗಿ ಮಾಡಿಸಿಕೊಂಡಿದ್ದರು ಗಣೇಶ್. ಸೋಷಿಯಲ್ ಮೀಡಿಯಾದಲ್ಲಿ ಇದರ ಫೋಟೋ ಕೂಡ ಹಂಚಿಕೊಂಡಿದ್ದಾರೆ.
ಕುದುರೆಮುಖದಲ್ಲಿ 'ಗಾಳಿಪಟ' ಹಾರಿಸಿದ ಗಣೇಶ್-ದಿಗಂತ್-ಪವನ್!
'ಗಾಳಿಪಟ 2..ಗಾಳಿಪಟ ಉತ್ಸವದಲ್ಲಿ ವಿಹಾನ್ ಜೊತೆ,' ಎಂದು ಗಣೇಶ್ ಬರೆದುಕೊಂಡಿದ್ದಾರೆ. ಗಣೇಶ್ ಪುತ್ರ ವಿಹಾನ್ ನಗುಮುಖದ ಫೋಟೋ ನೋಡಿ ನೆಟ್ಟಿಗರು ಸಂತಸ ಪಟ್ಟಿದ್ದಾರೆ. ಸರ್ ನೀವು ತುಂಬಾನೇ ಕ್ರಿಯೇಟಿವ್ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ದೂದ್ ಪೇಡಾ ದಿಗಂತ್, ಗಣೇಶ್, ಸಂಯುಕ್ತಾ ಮೆನನ್ ಹಾಗೂ ಶರ್ಮಿಳಾ ಮಾಂಡ್ರೆ ಕೆಲವು ದಿನಗಳ ಹಿಂದೆ ಕಜಕೀಸ್ತಾನದಲ್ಲಿ ಚಿತ್ರೀಕರಣ ಮಾಡುತ್ತಿರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡುತ್ತಿದ್ದರು. ಹಿಮ ತುಂಬಿರುವ ಪರ್ವತದ ಮೇಲೆ ನಿಂತು ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.
ಯುರೋಪ್‌ನಲ್ಲಿ ಶೂಟಿಂಗ್‌ಗೆ ಹೊರಡಲಿರುವ ಮೊದಲ ಕನ್ನಡ ಚಿತ್ರ 'ಗಾಳಿಪಟ-2'!
ಮೂವರು ನಾಯುಕಿಯರು ಇರುವ ಈ ಚಿತ್ರವನ್ನು ಮೂರು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಕಜಕಿಸ್ತಾನದಲ್ಲಿ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಆದ ನಂತರ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.