ಸಲಗ ನಂತರ ಮತ್ತೆ ಸಕ್ಸಸ್ ಕೊಟ್ಟ ಭೀಮಾ. ಸೂಪರ್ ಹಿಟ್ ಸಿನಿಮಾ ಫಸ್ಟ್ ಡೇ ಮಾಡಿದ ಕಲೆಕ್ಷನ್ ಎಷ್ಟು ಗೊತ್ತೇ?
ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ಭೀಮಾ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಹೊಸ ಪ್ರತಿಭೆಗಳಗೆ ದೊಡ್ಡ ಅವಕಾಶ ನೀಡಿದೆ. ಸ್ಟಾರ್ ನಟರು ಸಿನಿಮಾ ಮಾಡಿದರೆ ವೀಕ್ಷಕರು ಬಂದೇ ಬರುತ್ತಾರೆ ಅನ್ನೋ ವಿಚಾರವನ್ನು ಭೀಮಾ ಪ್ರೂವ್ ಮಾಡಿದೆ. ಈ ವರ್ಷ ರಿಲೀಸ್ ಆಗಿರುವ ಮೊದಲ ದೊಡ್ಡ ಬಜೆಟ್ ಸಿನಿಮಾ ಅಂದ್ರೆ ಭೀಮಾ, ಹಾಗೆಯೇ ಈ ವರ್ಷ ದೊಡ್ಡ ಕಲೆಕ್ಷನ್ ಮಾಡಲಿರುವ ಸಿನಿಮಾನೂ ಭೀಮಾನೇ ಎನ್ನಬಹುದು.
ಹೌದ! ಭೀಮಾ ಸಿನಿಮಾ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಪಡೆಯುತ್ತಿದೆ. ಜನರ ಸಾಗರ ಶಿಳ್ಳೆ ಚಪ್ಪಾಳೆ ಜೋರಾಗಿ ಕೇಳಿ ಬರುತ್ತಿದೆ. ಬ್ಯಾನರ್ ಮತ್ತು ಪೋಸ್ಟರ್‌ಗಳ ಮುಂದೆ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಮೊದಲ ದಿನವೇ ಭೀಮಾ ಸಿನಿಮಾ 3.5 ಕೋಟಿ ರಾಜ್ಯಾದ್ಯಂತ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಮಾಡಿದೆ ಎಂದು ಸುದ್ದಿಯಾಗುತ್ತಿದೆ. ಭೀಮಾ ತಂಡದಿಂದ ಸರಿಯಾದ ಕಲೆಕ್ಷನ್ ಮಾಹಿತಿ ಬರಬೇಕಿದೆ. ಯುವ ಜನಾಂಗ ಗಾಂಜಾ ಚಟಕ್ಕೆ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಇವರಿಗೆ ಎಲ್ಲಿಂದ ಗಾಂಜಾ ಸಿಗುತ್ತದೆ, ಗಾಂಜಾ ಮಾರಾಟ ಮಾಡುವವರು ಯಾರು, ಎಲ್ಲಿಂದ ಗಾಂಜಾ ತರಿಸುತ್ತಿದ್ದಾರೆ ಎಂಬುದರ ಬಗ್ಗೆ ಭೀಮಾ ಸಿನಿಮಾದಲ್ಲಿ ತಿಳಿಸಲಾಗಿದೆ.
ತಮಿಳು ವೇದಿಕೆಯಲ್ಲಿ ಪುನೀತ್ ರಾಜ್‌ಕುಮಾರ್ ಹೆಸರು ಎತ್ತಿದ ಪ್ರಿಯಾ ಆನಂದ್; ಮುಂದೇನಾಯ್ತು ನೀವೇ ನೋಡಿ!
ಸಖತ್ ಸಿಂಪಲ್ ಆಗಿ ಸಿನಿಮಾ ಪ್ರಚಾರ ಮಾಡಿದ ತಂಡ ಯಾವುದೇ ರೀತಿಯಲ್ಲಿ ಫ್ಯಾನ್ಸ್ ಶೋ ಅಥವಾ ಪ್ರೀಮಿಯರ್ ಶೋಗಳನ್ನು ಆಯೋಜಿಸಿರಲಿಲ್ಲ. ಅಭಿಮಾನಿಗಳೇ ನಮ್ಮ ಸೆಲೆಬ್ರಿಟಿಗಳು ಅವರೇ ನಮ್ಮ ಸಿನಿಮಾ ಹೇಗಿದೆ ಎಂದು ಮೊದಲು ಹೇಳಲಿ ಎಂದು ದುನಿಯಾ ವಿಜಯ್ ಆಸೆಯಾಗಿತ್ತು. ದುನಿಯಾ ವಿಜಯ್ ಮೊದಲ ಸಿನಿಮಾ ಸಲಗ ಮಾಡಿ ಯಶಸ್ಸು ಕಂಡು ಈಗ ಭೀಮಾ ಸಿನಿಮಾನೂ ಯಶಸ್ಸು ತಂದು ಕೊಟ್ಟಿದೆ. ಭೀಮಾ ಸಿನಿಮಾವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೋಡುತ್ತೀನಿ ಎಂದು ಬರವಸೆ ನೀಡಿದ್ದಾರೆ.
ಮನೆಯಲ್ಲಿಯೇ ಮಿಲನಾ ನಾಗರಾಜ್ ಅದ್ಧೂರಿ ಸೀಮಂತ; ನೇರಳೆ ಸೀರೆಯಲ್ಲಿ ಮಿಂಚಿದ ನಿಧಿಮಾ!
ಭೀಮಾ ಸಿನಿಮಾ ನಂತರ ದುನಿಯಾ ವಿಜಯ್ ಮಗಳ ಲಾಂಚ್ ಸಿನಿಮಾದ ಕಡೆ ಗಮನ ಕೊಡಲಿದ್ದಾರೆ. ಜೇಷ್ಠ ಪುತ್ರಿ ರಿತನ್ಯಾ ವಿಜಯ್ ಚೊಚ್ಚ ಸಿನಿಮಾದಲ್ಲಿ ವಿಜಯ್ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಚಿತ್ರೀಕರಣ ಆರಂಭವಾಗಿದ್ದು ಟೈಟಲ್ ಘೋಷಣೆ ಮಾಡಬೇಕಿದೆ. ಮೊದಲ ರಿಲೀಸ್‌ಗೂ ಮುನ್ನವೇ ಎರಡನೇ ಸಿನಿಮಾಗೂ ರಿತನ್ಯಾ ಸಹಿ ಮಾಡಿದ್ದಾರೆ. ಸೂರಿ ನಿರ್ದೇಶನ ಮಾಡುತ್ತಿರುವ ಕಾಗೆ ಬಂಡಾರ ಎಂದು ಟೈಟಲ್ ಕೂಡ ಘೋಷಣೆ ಮಾಡಿದ್ದಾರೆ.