ತಮಿಳು ವೇದಿಕೆಯಲ್ಲಿ ಪುನೀತ್ ರಾಜ್‌ಕುಮಾರ್ ಹೆಸರು ಎತ್ತಿದ ಪ್ರಿಯಾ ಆನಂದ್; ಮುಂದೇನಾಯ್ತು ನೀವೇ ನೋಡಿ!

By Vaishnavi Chandrashekar  |  First Published Aug 10, 2024, 10:26 AM IST

ಕನ್ನಡದ ನಟನನ್ನು ಮೆಚ್ಚಿ ಕೊಂಡಾಡಿದ ನಟಿ ಪ್ರಯಾ ಆನಂದ್. ಅಪ್ಪು ಹೆಸರು ಹೇಳುತ್ತಿದ್ದಂತೆ ಅಲ್ಲಿದ್ದ ಜನರ ರಿಯಾಕ್ಷನ್‌ ಹೇಗಿತ್ತು ಗೊತ್ತಾ? 


ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅಂದ್ರೆ ಸಾಕು ನಮ್ಮ ಅಪ್ಪು ನಮ್ಮ ಕನ್ನಡಿಗ ನಮ್ಮ ಹೆಮ್ಮೆಯಿಂದ ಪ್ರತಿಯೊಬ್ಬರು ಖುಷಿಯಿಂದ ಮಾತನಾಡುತ್ತಾರೆ. ಅಪ್ಪು ಜೊತೆ ಕೆಲಸ ಮಾಡಿದ ಪ್ರತಿಯೊಬ್ಬರೂ ಇಂದಿಗೆ ಸಿನಿಮಾ ಶೂಟಿಂಗ್‌ ಸೆಟ್‌ ಹೇಗಿರುತ್ತಿತ್ತು, ಅಪ್ಪು ಹೇಗೆ ನಡೆಸಿಕೊಳ್ಳುತ್ತಿದ್ದರು, ಎಷ್ಟು ಎಂಜಾಯ್ ಮಾಡುತ್ತಿದ್ದರು ಎಂದು ಹಂಚಿಕೊಳ್ಳುತ್ತಾರೆ. ಅಪ್ಪು ಜೊತೆ ಲಾಂಚ್ ಆದ ನಾಯಕಿ ಈಗ ತಮಿಳು ವೇದಿಯಲ್ಲಿ ಅಪ್ಪು ಹೆಸರು ತೆಗೆದಿದ್ದಾರೆ. 

ಹೌದು! 2017ರಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿದ್ದ 'ರಾಜ್‌ಕುಮಾರ್' ಸಿನಿಮಾ ಸೂಪರ್ ಹಿಟ್ ಕಲೆಕ್ಷನ್‌ ಮತ್ತು ಅಭಿಮಾನಿಗಳನ್ನು ಗಳಿಸಿತ್ತು. ಈ ಚಿತ್ರದ ಮೂಲಕ ಪ್ರಿಯಾ ಆನಂದ್ ಕನ್ನಡ ಚಿತ್ರರಂಗಕ್ಕೆ ಪರಿಚಯವಾದರು. ಈ ಸಿನಿಮಾದ 'ಬೊಂಬೆ ಹೇಳುತೈತ್ತೆ ಮತ್ತೆ ಹೇಳುತ್ತೈತೆ' ಹಾಡನ್ನು ಹೇಳದೆ ಯಾವ ಕಾರ್ಯಕ್ರಮವೂ ಮುಗಿಯುವುದಿಲ್ಲ. ಬ್ಲಾಕ್ ಬಸ್ಟರ್ ಹಿಟ್ ಕಂಡ ಸಿನಿಮಾ ಇದಾಗಿತ್ತು. ಇದಾದ ಮೇಲೆ ಪುನೀತ್ ಜೊತೆ ಜೇಮ್ಸ್‌ ಸಿನಿಮಾದಲ್ಲಿ ಪ್ರಿಯಾ ನಟಿಸಿದ್ದರು. ಎರಡು ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಕ್ಕಿದ್ದೆ ಖುಷಿ ಎಂದು ಈ ಹಿಂದೆ ಹೇಳಿಕೊಂಡಿದ್ದರು.

Tap to resize

Latest Videos

ಮನೆಯಲ್ಲಿಯೇ ಮಿಲನಾ ನಾಗರಾಜ್‌ ಅದ್ಧೂರಿ ಸೀಮಂತ; ನೇರಳ ಸೀರೆಯಲ್ಲಿ ಮಿಂಚಿದ ನಿಧಿಮಾ!

ಈಗ ಪ್ರಿಯಾ ತಮ್ಮ ತಮಿಳು ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನಿಮ್ಮ ನೆಚ್ಚಿನ ವ್ಯಕ್ತಿ ಯಾರು ಎಂದು ಪ್ರಶ್ನೆ ಮಾಡಿದಾಗ ಅಪ್ಪು ಹೆಸರು ಹೇಳಿದ್ದಾರೆ. 'ನಾನು ಜೀವನದಲ್ಲಿ ಭೇಟಿ ಮಾಡಿರುವ ಮೋಸ್ಟ್‌ ಫೇವರೆಟ್‌ ವ್ಯಕ್ತಿ ಅಂದ್ರೆ...ಕನ್ನಡದಲ್ಲಿ ಒಬ್ರು ಅಕ್ಟರ್ ಇದ್ದಾರೆ ಡಾ. ಪುನೀತ್ ರಾಜ್‌ಕುಮಾರ್. ಅವರು ನನ್ನ ಮೋಸ್ಟ್‌ ಫೇವರೆಟ್‌ ವ್ಯಕ್ತಿ. ರಾಜಕುಮಾರ ಸಿನಿಮಾದ ಮೂಲಕ ನಾನು ಲಾಂಚ್‌ ಆಗಿದ್ದು, ಆ ಚಿತ್ರಕ್ಕೆ ಅವರೇ ನಾಯಕ. ಅವರು ನನ್ನನ್ನು ಕರೆಸಿ ನಟಿಸಿದ್ದಕ್ಕೆ ನಾನು ನಾಯಕಿ ಆಗಿದ್ದು' ಎಂದು ಪ್ರಿಯಾ ಮಾತನಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

ಬೆಳಗ್ಗೆ ಎದ್ದ ತಕ್ಷಣ ಗೇಟ್‌ ಬಳಿ ಕುಣಿದು ಕುಪ್ಪಳಿಸಿದ ನಟಿ ಶುಭ್ರ ಅಯ್ಯಪ್ಪ; ಕಾರಣ ಕೇಳಿ ಎಲ್ಲರೂ ಶಾಕ್!

'ನನಗೆ ಅಪ್ಪು ತುಂಬಾನೇ ಕ್ಲೋಸ್ ಏಕೆಂದರೆ ಒಟ್ಟಿಗೆ ಎರಡು ಸಿನಿಮಾಗಳಲ್ಲಿ ನಟಿಸಿದ್ದೀವಿ. ಅವರೊಟ್ಟಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶ ಸಿಕ್ಕಿತ್ತು ಏಕೆಂದರೆ ಒಂದೊಂದು ಸಿನಿಮಾನೂ ಒಂದು ವರ್ಷ ತೆಗೆದುಕೊಂಡಿದೆ. ಅವರು ಎಂದಿಗೂ ಪುನೀತ್ ಆಗಿರಲಿಲ್ಲ ಅವರು ಯಾವತ್ತಿದ್ದರೂ ಅಪ್ಪುನೇ' ಎಂದು ಪ್ರಿಯಾ ಹೇಳಿದ್ದಾರೆ. 

 

click me!