
ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿ ಕಷ್ಟಪಡುತ್ತಿರುವ ಜನರ ಹಸಿವು ನೀಗಿಸಲು ನಟ ಡಾ.ಶಿವರಾಜ್‌ಕುಮಾರ್ ಮುಂದಾಗಿದ್ದಾರೆ. ‘ಆಸರೆ’ ಯೋಜನೆ ಹೆಸರಿನಲ್ಲಿ ನಾಗವಾರ ಪ್ರದೇಶದ 500 ಮಂದಿಗೆ ಚಹಾ, ತಿಂಡಿ, ಊಟ ಒದಗಿಸುತ್ತಿದ್ದಾರೆ.
ಡಾ. ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್ ಮತ್ತು ಶಿವಣ್ಣ ಬಾಯ್ಸ್ ಸೇರಿಕೊಂಡು ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದಾರೆ. ಆಹಾರ ಸರಬರಾಜಿಗಾಗಿ ಶಿವಣ್ಣ ಬೊಲೆರೋ ಕ್ಯಾಂಟರ್ ವ್ಯವಸ್ಥೆ ಮಾಡಿದ್ದಾರೆ. 10 ದಿನದವರೆಗೂ ಈ ವ್ಯವಸ್ಥೆ ಜಾರಿಯಲ್ಲಿದ್ದು, ಲಾಕ್‌ಡೌನ್ ಮುಂದುವರೆದರೆ ಸುಮಾರು 1000 ಮಂದಿಯ ಹಸಿವು ನೀಗಿಸಲು ಶಿವಣ್ಣ ಮತ್ತು ತಂಡ ಯೋಚನೆ ಮಾಡುತ್ತಿರುವುದಾಗಿ ಶಿವರಾಜ್‌ಕುಮಾರ್ ಆಪ್ತ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ತಿಳಿಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ್ದ ರೈತರ ನೆರವಿಗೆ ನಟ ಉಪೇಂದ್ರ : ತರಕಾರಿ ಖರೀದಿಸಿ ಉಚಿತ ಹಂಚಿಕೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.