
ಬೆಂಗಳೂರು: ಅಂಬೇಡ್ಕರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಅವರ ಹೇಳಿಕೆಯನ್ನು ಖಂಡಿಸಿದ್ದೂ ಅಲ್ಲದೇ, ಪ್ರಜಾಕೀಯ ಪಕ್ಷವನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಉಪೇಂದ್ರ ಕ್ಷಮೆ ಯಾಚಿಸುವ ಮೂಲಕ ಪ್ರಕರಣವನ್ನು ತಿಳಿಗೊಳಿಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ್ದ ರೈತರ ನೆರವಿಗೆ ನಟ ಉಪೇಂದ್ರ : ತರಕಾರಿ ಖರೀದಿಸಿ ಉಚಿತ ಹಂಚಿಕೆ
ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉಪೇಂದ್ರ, ‘ಯಾರೋ ಒಬ್ರು ಒಬ್ಬ ರಾಂಗ್ ಆಗಿ ಹೇಳಿದ್ದಾರೆ. ಹಿಸ್ಟರಿ ಗೊತ್ತಿಲ್ಲದವರು ಹಿಸ್ಟರಿ ಕ್ರಿಯೇಟ್ ಮಾಡಕ್ಕಾಗಲ್ಲ ಅಂತ. ಹಿಸ್ಟರಿ ಗೊತ್ತಿರಬೇಕಾಗಿಲ್ಲ. ಅದೇ ಕ್ರಿಯೇಟ್ ಆಗುತ್ತೆ. ನಾವು ಕ್ರಿಯೇಟ್ ಮಾಡೋದಲ್ಲ ಹಿಸ್ಟರೀನ. ಇತಿಹಾಸ ನಿರ್ಮಾಣ ಆಗುವ ಸತ್ಯ ಅಲ್ಲಿದ್ದರೆ ಅದಾಗುತ್ತೆ’ ಅಂದಿದ್ದರು.
"
ಇತಿಹಾಸ ಗೊತ್ತಿಲ್ಲದವರು ಇತಿಹಾಸ ಸೃಷ್ಟಿಸಲಿಕ್ಕೆ ಆಗುವುದಿಲ್ಲ ಎಂಬ ಹೇಳಿಕೆ ಅಂಬೇಡ್ಕರ್ ಅವರದ್ದು. ಅದನ್ನು ಖಂಡಿಸುವ ಮೂಲಕ ಉಪೇಂದ್ರ, ಆ ವಿಚಾರಧಾರೆಗೆ ಅಪಚಾರ ಎಸಗಿದ್ದಾರೆ ಎಂದು ಅಂಬೇಡ್ಕರ್ ಅಭಿಮಾನಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇದರ ಬೆನ್ನಿಗೇ, ‘ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರ ಎಂಬ ವಿಚಾರ ಡಾ. ಅಂಬೇಡ್ಕರ್ ಅವರದ್ದು ಅಂತ ತಿಳಿದಿರಲಿಲ್ಲ. ಯಾರೋ ಇಂಗ್ಲೀಷ್‌ನವರ ಬರಹ ಎಂದು ತಿಳಿದು ತಪ್ಪು ಮಾತನಾಡಿದ್ದೆ. ದಯವಿಟ್ಟು ಕ್ಷಮಿಸಿ’ ಎಂದು ಉಪೇಂದ್ರ ತಮ್ಮ ಟ್ವೀಟರ್ ಮೂಲಕ ಕ್ಷಮೆ ಯಾಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.