ಡಾ.ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಬಸವ ಶ್ರೀ ಪ್ರಶಸ್ತಿ ಪ್ರಧಾನ!

By Suvarna News  |  First Published May 3, 2022, 3:35 PM IST

* ಡಾ.ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಬಸವ ಶ್ರೀ ಪ್ರಶಸ್ತಿ ಪ್ರಧಾನ.

* ಚಿತ್ರದುರ್ಗದ ಮುರುಘಾ ಮಠದಿಂದ ಬಸವಶ್ರೀ ಪ್ರಶಸ್ತಿ ಪ್ರಧಾನ.

* ಶಿವಮೂರ್ತಿ ಮುರುಘಾ ಶರಣರಿಂದ ಪ್ರಶಸ್ತಿ ಹಾಗೂ 5 ಲಕ್ಷ ಚೆಕ್ ಪಡೆದ ಅಶ್ವಿನಿ ಪುನೀತ್ ರಾಜ್ ಕುಮಾರ್.

* ಬಸವಶ್ರೀ ಪ್ರಶಸ್ತಿ ಸ್ವೀಕರಿಸಿದ ಬಳಿಕ ಭಾವುಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್.


ಜಿಲ್ಲೆ: ಚಿತ್ರದುರ್ಗ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಮುರುಘಾಮಠದಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರದಾನ ಮಾಡುವ ಪ್ರತಿಷ್ಠಿತ '2021 ರ ಬಸವಶ್ರೀ' ಪ್ರಶಸ್ತಿಯನ್ನು ಡಾ.ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಲಾಯಿತು. ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಪ್ರಶಸ್ತಿಯನ್ನು ಸ್ವೀಕರಿಸಿದರು

Latest Videos

undefined

ಪ್ರಶಸ್ತಿ ಪ್ರದಾನ ಮಾಡಿದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಬಸವಣ್ಣನವರು ನಾಡಿಗೆ ಶರಣ ಸಂಸ್ಕೃತಿಯನ್ನು ನೀಡಿದ್ದಾರೆ. ಬಸವ ಸಂಸ್ಕೃತಿ ಎಂಬುವುದು ಶರಣ ಸಂಸ್ಕೃತಿ, ಮಾನವ ಜನಾಂಗದ ಸಂಸ್ಕೃತಿಯಾಗಿದೆ. ಬಸವಣ್ಣನವರ ವಿಶಾಲತೆಯಿಂದಾಗಿ ಬಸವ ಯುಗದಲ್ಲಿ ನೂರಾರು  ಜನರು ಕಂಗೊಳಿಸಿದ್ದಾರೆ. ಬಸವಣ್ಣ ಜಾತಿಯ ಉದ್ದಾರಕ ಅಲ್ಲ, ಮಾನವ ಕುಲದ ಉದ್ದಾರಕರು. ಕೆಳಸ್ತರದಲ್ಲಿದ್ದ ಜನರನ್ನು ಮೇಲೆತ್ತುವ ಕಾರ್ಯವನ್ನು ಮಾಡಿ, ಸಮಾನತೆಯನ್ನು ಸಾರಿದ ಮಹಾನ್ ವ್ಯಕ್ತಿ ಎಂದರು.

ಕರ್ನಾಟಕ ರತ್ನ ಬೆನ್ನಲ್ಲೇ ಪುನೀತ್‌ಗೆ ಮತ್ತೊಂದು ಮರಣೋತ್ತರ ಪ್ರಶಸ್ತಿ

ಭೋಗ ಪ್ರಧಾನ ಬದುಕಿಗೆ ಎಂದಿಗೂ ಅಸ್ಪದ ನೀಡದ ಬಸವಣ್ಣನವರು, ತ್ಯಾಗ ಹಾಗೂ ಬಲಿದಾನಕ್ಕೆ ಮುಂದಾಗಿ, ಆಡಂಬರದಿಂದ ಆದರ್ಶದ ಕಡೆಗೆ ನಡೆದು ಬಂದಂತಹ ಮಹಾನ್ ಮಾನವತಾವಾದಿ ಯಾಗಿದ್ದಾರೆ ಅವರ ಆದರ್ಶಗಳನ್ನು ಮನುಕುಲ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.

ಪುನೀತ್ ರಾಜ್‍ಕುಮಾರ್ ಅಭಿನಯದ ಮುಖಾಂತರ ರಸಿಕರನ್ನು ರಂಜಿಸುತ್ತ, ತಮ್ಮ ಬದುಕನ್ನು ಪುನೀತಾಗಿಸಿ ಕೊಂಡಂತಹ ಅಪೂರ್ವ ಕಲಾವಿದ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದು, ತನ್ನದೇ ಆದ ಛಾಪು ಮೂಡಿಸಿದ ಕನ್ನಡ ಕುವರರಾಗಿದ್ದಾರೆ ಎಂದು ಹೇಳಿದರು. ಡಾ.ರಾಜಕುಮಾರ್‌ರವರ ಮುದ್ದಿನ ಮಗನಾಗಿ ಕಿರಿವಯಸ್ಸಿನಲ್ಲೇ ಬೆಳ್ಳಿತೆರೆಯ ಮೇಲೆ ನಟಿಸಿದ ಪ್ರತಿಭಾವಂತ, ಅಭಿನಯದೊಟ್ಟಿಗೆ ಹಾಡುಗಾರಿಕೆಯನ್ನೂ ಮೈಗೂಡಿಸಿಕೊಂಡ ಗಾಯಕ. ಒಟ್ಟಾರೆ ಪುನೀತ್ ಅವರು ತಮ್ಮ ಹೆಸರಿಗೆ ತಕ್ಕಂತೆ ಅಭಿನಯ, ಅಭಿವ್ಯಕ್ತಿ ಮತ್ತು ಹಾಡುಗಾರಿಕೆಯಲ್ಲಿ ಪುನೀತರು ಮತ್ತು ಪರಿಣಿತರೆಂಬುದು ಸ್ಪಷ್ಟವಾಗಿದೆ. ಕೆಲವೊಮ್ಮೆ ಗುರುವಿಗಿಂತ ಶಿಷ್ಯ ಪ್ರಭಾವಿ ಆಗುತ್ತಾನೆ. ಅದರಂತೆ ತಂದೆಯನ್ನು ಮಗ ಮೀರಿಸಲು ಶಕ್ತನಾಗುತ್ತಾನೆ. 

ತಂದೆಯ ಮಾರ್ಗದರ್ಶನ, ಅವರ ಸ್ಫೂರ್ತಿಯನ್ನು ಆಂತರ್ಯದಲ್ಲಿ ಇಟ್ಟುಕೊಂಡು, ಆಕಾಶದೆತ್ತರಕ್ಕೆ ಬೆಳೆದಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ  ಕುಟುಂಬಕ್ಕೆ ಮಧ್ಯ ಕರ್ನಾಟಕದ ಮೂಲಕ ಬಸವಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಹೇಳಿದರು.

Puneeth Rajkumar ನುಡಿ ನಮನ ಕಾರ್ಯಕ್ರಮ!

ಜಿಲ್ಲಾ ಉಸ್ತುವಾರಿ ಸಚಿವ ಬಿ‌.ಸಿ.ಪಾಟೀಲ್ ಮಾತನಾಡಿ, ಮನುಷ್ಯನ ಹುಟ್ಟು ಸಹಜ ಸಾವು ಆಕಸ್ಮಿಕ. ಆದರೆ ಇವೆರಡರ ಮಧ್ಯೆ ನಾವುಗಳು ಮಾಡಬೇಕಾದ ಕೆಲಸ ಅನಮ್ಯವಾಗಿರಬೇಕು. ಪುನೀತ್ ಮಾಡಿದ ಸಹಾಯಹಸ್ತ ಯಾರಿಗೂ ಸಹ ತಿಳಿಯಲಿಲ್ಲ ಅಂತಹ ವ್ಯಕ್ತಿಗೆ ಬಸವಶ್ರೀ ಪ್ರಶಸ್ತಿ ನೀಡಿರುವುದು ಬಸವಶ್ರೀ ಪ್ರಶಸ್ತಿಗೆ ಒಂದು ಗೌರವ ಬಂದಂತಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ.ಸಿಇಓ ನಂದಿನಿ ದೇವಿ, ಜಿಲ್ಲಾ ರಕ್ಷಣಾಧಿಕಾರಿ ಕರ.ಪರಶುರಾಮ್, ಚಿತ್ರೋದ್ಯಮಿ ಚನ್ನೇಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.

click me!