ಡೆಲಿವರಿ ಗರ್ಲ್ಸ್‌ ಜೀವನನೇ ಹೀಗೆ ಗುರು: ಸತ್ಯ ಬಿಚ್ಚಿಟ್ಟ 'ಲಾಸ್ಟ್‌ ಆರ್ಡರ್'!

By Govindaraj SFirst Published May 2, 2022, 7:47 PM IST
Highlights

ಝೋಮ್ಯಾಟೋ ಫುಡ್ ಡೆಲಿವರಿ ಮಾಡುವ ಮಹಿಳೆ ತನ್ನ ಕುಟುಂಬಕೋಸ್ಕರ ಯಾವ ರೀತಿ ಕಷ್ಟಪಡುತ್ತಾಳೆ ಮತ್ತು ಆ ಸಮಯದಲ್ಲಿ ಅವಳಿಗೆ ಸಮಾಜದಿಂದ ಆಗುವ ಕೆಲ ಸಮಸ್ಯೆಗಳನ್ನು ನಿರ್ದೇಶಕರು ತೋರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಿರು ಚಿತ್ರಗಳನ್ನು (Short Movies) ನಿರ್ಮಾಣ, ನಿರ್ದೇಶನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಕೆಲವರು ಭವಿಷ್ಯದಲ್ಲಿ ಸಿನಿಮಾ ನಿರ್ದೇಶಕರಾಗಬೇಕು ಎಂಬ ಕನಸನ್ನಿಟ್ಟುಕೊಂಡು ಇಂಥ ಪ್ರಯತ್ನಕ್ಕೆ ಮುಂದಾಗುತ್ತಾರೆ. ಇನ್ನು ಹಲವರಿಗೆ ಸಾಮಾಜಿಕ ಸಂದೇಶ ನೀಡುವ ಕಾಳಜಿಯೂ ಇರುತ್ತದೆ. ಒಟ್ಟಿನಲ್ಲಿ ಇವು ಜನರ ಗಮನ ಸೆಳೆಯುತ್ತಿರುವುದಂತೂ ನಿಜ. ಕಿರು ಚಿತ್ರ ಎಂಬುದು ಸಿನಿಮಾದ ಮತ್ತೊಂದು ಪರಿಭಾಷೆಯೆ. ಸುಮಾರು ಮೂರು ಗಂಟೆಯ ಸಿನಿಮಾದಲ್ಲಿ ಹೇಳಲಾಗದ ವಿಷಯವನ್ನು ಕೆಲ ನಿಮಿಷಗಳಲ್ಲಿ ಹೇಳುವಂತಹ ಯತ್ನವಿದು. ಸಮಾಜದ ಕೆಲ ಸೂಕ್ಷ್ಮ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯುವಕರು ಕಿರು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. 

ಇದೀಗ 'ಲಾಸ್ಟ್‌ ಆರ್ಡರ್' (Last Order) ಎಂಬ ಕಿರು ಚಿತ್ರವು ಸತ್ಯ ಹೆಗ್ಡೆ ( Satya Hegde) ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಚಿಕ್ಕಮಗಳೂರು ಹುಡುಗ ಪ್ರಶಾಂತ್ ಗೌಡ (Prashanth Gowda) ಈ ಕಿರು ಚಿತ್ರಕ್ಕೆ ಕಥೆ ಬರೆಯುವುದರ ಜೊತೆಗೆ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಪ್ರಶಾಂತ್ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ತಾನು ಉತ್ತಮ ನಿರ್ದೇಶಕ ಆಗಬೇಕೆಂದು ಹೊತ್ತು ಬಂದಿರುವ ಪ್ರಶಾಂತ್ 'ಲಾಸ್ಟ್‌ ಆರ್ಡರ್' ಕಿರು ಚಿತ್ರವನ್ನು ನಿರ್ದೇಶಿದ್ದಾರೆ. 

ವೆಬ್ ಸೀರಿಸ್ ಲೋಕಕ್ಕೆ ಎಂಟ್ರಿ ಕೊಟ್ಟ ಶಿವಣ್ಣನಿಗೆ ಮಗಳು ನಿವೇದಿತಾ ಸಾಥ್

ಇತ್ತಿಚೆಗಷ್ಟೇ ಚಿತ್ರದ ಸ್ಕ್ರೀನಿಂಗ್ ನಗರದ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಝೋಮ್ಯಾಟೋ ಫುಡ್ ಡೆಲಿವರಿ (Zomoto Food Delivery) ಮಾಡುವ ಮಹಿಳೆ (Women) ತನ್ನ ಕುಟುಂಬಕೋಸ್ಕರ ಯಾವ ರೀತಿ ಕಷ್ಟಪಡುತ್ತಾಳೆ ಮತ್ತು ಆ ಸಮಯದಲ್ಲಿ ಅವಳಿಗೆ ಸಮಾಜದಿಂದ ಆಗುವ ಕೆಲ ಸಮಸ್ಯೆಗಳನ್ನು ನಿರ್ದೇಶಕರು ತೋರಿಸಿದ್ದಾರೆ.  ಇನ್ನು ಮಹಿಳೆಯಾಗಿರುವ ಆಕೆ ತನ್ನ ಕುಟುಂಬವನ್ನು ನೋಡಿಕೊಳ್ಳಲು ಎಲ್ಲವನ್ನೂ ಸಹಿಸಿಕೊಳ್ಳುವ ಸ್ವಾಭಿಮಾನಿಯಾಗಿ ತನ್ನ ಶಕ್ತಿಯಿಂದ ನಿಂತಿದ್ದು, ಕೊನೆಯಲ್ಲಿ ಅವಳ ಎಲ್ಲಾ ಪ್ರಯತ್ನಗಳು ಹೇಗೆ ವ್ಯರ್ಥವಾಗುತ್ತದೆ ಎಂಬುದೇ ಈ ಕಿರು ಚಿತ್ರದ ಸಾರಾಂಶ. 



ಸಂಗೀತ ನಿರ್ದೇಶಕ ಕರಣ್ (Karan) ಅವರ ಕೆಲಸ ಗಮನಾರ್ಹವಾಗಿದ್ದು, ಹಿನ್ನೆಲೆ ಸಂಗೀತ ಅದ್ಭುತವಾಗಿ ಮೂಡಿಬಂದಿದೆ. ಅಚ್ಯುತ್.ಬಿ.ಎಸ್ (Achyth B S) ಕ್ಯಾಮೆರಾ ಕೈಚಳಕ ಹಾಗೂ ತಿಲಕ್ ಕುಮಾರ್ (Tilak Kumar) ಸಂಕಲನದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದು, ಶಿಲ್ಪ ಹೆಗ್ಡೆ (Shilpa Hegde) ಈ ಕಿರುಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ ರಮ್ಯಕೃಷ್ಣ (Ramya Krishna) ಹಾಗೂ ರಕ್ಷಿತ್ ಕರಿಯಣ್ಣ (Rakshith Kariyanna) ಅವರ ಪಾತ್ರಗಳು ಗಮನ ಸೆಳೆಯುವಂತಿದೆ. 

Puneeth Rajkumar: ಪಿಆರ್​ಕೆ ಬ್ಯಾನರ್‌ನಲ್ಲಿ ಶೈನ್​ ಶೆಟ್ಟಿ ಅಭಿನಯದ ಥ್ಯಾಂಕ್ಯೂ ಕಿರುಚಿತ್ರ ರಿಲೀಸ್

ಅದರಲ್ಲೂ ನಾಯಕಿ ರಮ್ಯಕೃಷ್ಣ ಝೋಮ್ಯಾಟೋ ಫುಡ್ ಡೆಲಿವರಿ ಮಾಡುವ ಮಹಿಳೆಯಾಗಿ ತಮ್ಮ ಪಾತ್ರದಲ್ಲಿ ನೋಡುಗರಿಗೆ ಬಹಳ ನೈಜತೆಗೆ ಹತ್ತಿರ ಎನ್ನುವಂತೆ ಲೀಲಾಜಾಲವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಅದೇ ರೀತಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಾಯಕಿಯ ತಮ್ಮ ರಕ್ಷಿತ್ ಕರಿಯಣ್ಣ ಅವರ ಪಾತ್ರ ಕೂಡಾ ನೋಡುಗರ ಮನಸ್ಸಿನಲ್ಲಿ ಗೊಂದಲ ಮೂಡಿಸುವಂತಿದೆ. ಈ ಕಿರು ಚಿತ್ರವನ್ನು ಯೂಟ್ಯೂಬ್‌ನಲ್ಲಿ ನೋಡಬಹುದು.

click me!