ಶಿವಣ್ಣ ಲಾಂಗ್‌ ಹಿಡಿದ್ರೆ, ಅವರ ಹಿಂದೆ ನಾ ಇರ್ತೀನಿ: ದರ್ಶನ್‌

Published : Nov 23, 2019, 01:54 PM IST
ಶಿವಣ್ಣ ಲಾಂಗ್‌ ಹಿಡಿದ್ರೆ, ಅವರ ಹಿಂದೆ ನಾ ಇರ್ತೀನಿ: ದರ್ಶನ್‌

ಸಾರಾಂಶ

ಶಿವಣ್ಣ ಲಾಂಗ್‌ ಹಿಡಿದ್ರೆ, ಅವರ ಹಿಂದೆ ನಾ ಇರ್ತೀನಿ... - ಹೀಗೆ ಹೇಳಿದ್ದು ನಟ ದರ್ಶನ್‌. ಶಿವರಾಜ್‌ ಕುಮಾರ್‌ ಜತೆಗೆ ಒಂದೇ ಸಿನಿಮಾದಲ್ಲಿ ಅಭಿನಯಿಸುವ ಸಂದರ್ಭ ಬಂದ್ರೆ ಏನ್‌ ಮಾಡ್ತೀರಿ ಎನ್ನುವ ಪ್ರಶ್ನೆಗೆ ದರ್ಶನ್‌ ಕೊಟ್ಟಉತ್ತರ ಅದು.

ಶಿವರಾಜ್‌ ಕುಮಾರ್‌ ಹಾಗೂ ದರ್ಶನ್‌ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಾರಾ ? ಅಭಿನಯಿಸುವುದೇ ಆಗಿದ್ದರೆ ಆ ಸಿನಿಮಾ ಹೇಗಿರುತ್ತೆ? ಆ ಸಿನಿಮಾಕ್ಕೆ ಡೈರೆಕ್ಟರ್‌ ಯಾರ್‌ ಆಗ್ತಾರೆ? ಮಜಾ ಅಂದ್ರೆ ಕುತೂಹಲದ ಈ ಪ್ರಶ್ನೆಗಳಿಗೆ ಉತ್ತರ ಅವರಿಂದಲೇ ರಿವೀಲ್‌ ಆಗಿದೆ. ಆ ಬಗ್ಗೆ ಶಿವಣ್ಣ ಮತ್ತು ದರ್ಶನ್‌ ಇಬ್ಬರು ಮಾತನಾಡಿದರು. ಈ ಇಬ್ಬರು ಸ್ಟಾರ್‌ ನಟರು ಜತೆಗಿದ್ದು ಒಂದೇ ಸಿನಿಮಾದಲ್ಲಿ ಅಭಿನಯಿಸುವ ಕುರಿತು ಮಾತನಾಡಿದ್ದು, ಧ್ರುವನ್‌ ಹಾಗೂ ಪ್ರಿಯಾ ವಾರಿಯರ್‌ ಅಭಿನಯದ ಹೊಸ ಸಿನಿಮಾದ ಮುಹೂರ್ತದ ಸಂದರ್ಭ.

ಶಿವಣ್ಣ ಲಾಂಗ್ ಹಿಡಿದ್ರೆ ಬೆನ್ನಿಗೆ ನಿಲ್ತೇನೆ, ದರ್ಶನ್-ಶಿವಣ್ಣ ಜೋಡಿಯಾಗಿ ಹೊಸ ಚಿತ್ರ!

ದರ್ಶನ್‌ ಅವರ ಪರಿಚಿತ ಹಾಗೂ ರಾಜ್‌ ಕುಟುಂಬ ಸಂಬಂಧಿ ಧ್ರುವನ್‌ ಅಭಿನಯದ ಸಿನಿಮಾ ಮುಹೂರ್ತ ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಡೆಯಿತು. ಅಲ್ಲಿಗೆ ಶಿವಣ್ಣ ಹಾಗೂ ದರ್ಶನ್‌ ಅತಿಥಿಗಳಾಗಿ ಬಂದು ಚಿತ್ರಕ್ಕೆ ಚಾಲನೆ ನೀಡಿದರು. ಶಿವಣ್ಣ ಕ್ಲಾಪ್‌ ಮಾಡಿದರೆ, ದರ್ಶನ್‌ ಕ್ಯಾಮರಾ ಸ್ವಿಚ್‌ ಆನ್‌ ಮಾಡಿದರು. ನಂತರ ಮಾಧ್ಯಮದ ಜತೆಗೆ ಮಾತಿಗೆ ನಿಂತರು.

ಶಿವಣ್ಣ ಹೇಳಿದ್ದು

‘ಹೇಳೋದಿಕ್ಕೆ ಆಗಲ್ಲ, ಟೈಮ್‌ ಹೇಗೆ ಬರುತ್ತೆ ಅಂತ. ಒಳ್ಳೆಯ ಕತೆಗಳು ಸಿಕ್ಕಾಗ ಇಬ್ಬರು ಕೂಡ ಒಂದಾಗಿ ಕಾಣಿಸಿಕೊಳ್ಳಬಹುದು. ಅದೇನು ಕಷ್ಟನಾ? ಈಗಾಗಲೇ ಸಾಕಷ್ಟುನಟರು ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಾನು ಕೂಡ ಅಂತಹ ಸಿನಿಮಾ ಮಾಡಿದ್ದೇನೆ. ಸುದೀಪ್‌ ಮತ್ತು ನಾನು ಒಂದೇ ಸಿನಿಮಾದಲ್ಲಿ ಅಭಿನಯಿಸಿದ್ದೆವು. ಸಮಯ ಬಂದ್ರೆ ದರ್ಶನ್‌ ಜತೆಗೂ ಅಭಿನಯಿಸಿದರೆ ಅಚ್ಚರಿ ಇಲ್ಲ ಅಂತ’ ಶಿವರಾಜ್‌ ಕುಮಾರ್‌ ನೀಡಿದ ಉತ್ತರಕ್ಕೆ ಪಕ್ಕದಲ್ಲೇ ಇದ್ದ ದರ್ಶನ್‌ ಕೊಟ್ಟರಿಯಾಕ್ಷನ್‌ ಕೂಡ ಮಜಾವಾಗಿತ್ತು.

ತಮ್ಮ ರಾಧಿಕಾ ನಡುವಿನ ಸೀಕ್ರೆಟ್ ಬಿಚ್ಚಿಟ್ಟ ಚಾಲೆಂಜಿಂಗ್ ಸ್ಟಾರ್!

ದರ್ಶನ್‌ ಮಾತುಗಳು

‘ಸಮಯ ಬರುತ್ತೆ, ಹೇಳೋದಿಕ್ಕೆ ಆಗಲ್ಲ ಅಂತಲ್ಲ. ಆದ್ರೆ ನಮ್ಮಿಬ್ಬರನ್ನು ಹ್ಯಾಂಡಲ್‌ ಮಾಡುವಂತಹ ಡೈರೆಕ್ಟರ್‌ ಇಲ್ಲ. ಅಂತಹ ಡೈರೆಕ್ಟರ್‌ ಸಿಕ್ಕಾಗ, ನಮಗೆ ಮೆಚ್ಚಿಗೆ ಆಗುವಂತಹ ಕತೆ ಸಿಕ್ಕಾಗ ಸಿನಿಮಾ ಮಾಡೋಣ ಬಿಡಿ’ ಎನ್ನುವುದು ದರ್ಶನ್‌ ಇಂಗಿತವಾಗಿತ್ತು.

ಒಂದು ವೇಳೆ ಅಂತ ಸಮಯ ಬಂದೇ ಬಿಟ್ಟಿತು, ಅದು ಲಾಂಗ್‌ ಹಿಡಿಯುವ ಸಿನಿಮಾವೇ ಆಗಿಬಿಟ್ಟಿತು ಅಂತಿಟ್ಟುಕೊಳ್ಳಿ, ಆಗ್‌ ಏನ್‌ ಮಾಡ್ತೀರಿ? ತಕ್ಷಣವೇ ದರ್ಶನ್‌ಗೆ ಎದುರಾದ ಪ್ರಶ್ನೆ ಅದು. ಅದಕ್ಕೆ ಅವರು ಕೊಟ್ಟರಿಯಾಕ್ಷನ್‌ ಕೂಡ ಸಖತ್‌ ಆಗಿತ್ತು. ‘ಶಿವಣ್ಣ ಸೀನಿಯರ್‌, ಅವ್ರು ಲಾಂಗ್‌ ಹಿಡಿದ್ರೆ, ಅವರ ಹಿಂದೆ ನಾನು ಇರ್ತೀನಿ...’ ಎನ್ನುವ ಮೂಲಕ ಶಿವರಾಜ್‌ಕುಮಾರ್‌ ಜತೆಗೆ ತಾವು ಅಭಿನಯಿಸುವ ಇಂಗಿತ ವ್ಯಕ್ತಪಡಿಸಿದರು ದರ್ಶನ್‌.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್​ ಬಾಳಲ್ಲಿ ವಿಜಯಲಕ್ಷ್ಮಿ ಎಂಟ್ರಿ ಕೊಟ್ಟು ನಾಳೆಗೆ 23 ವರ್ಷ: ಡಿಜಿಪಿಗೆ ಪತ್ನಿ ಹೀಗೊಂದು ವಿಶೇಷ ಮನವಿ
Malashri Secret: 'ನಂಜುಂಡಿ ಕಲ್ಯಾಣ'ಕ್ಕಿಂತ ಮೊದಲು ಮಾಲಾಶ್ರೀ 35 ಸಿನಿಮಾಗಳಲ್ಲಿ ನಟಿಸಿದ್ರು; ಕನಸಿನ ರಾಣಿಯ ಹಲವು ಸೀಕ್ರೆಟ್ ಇಲ್ಲಿವೆ ನೋಡಿ!