
ಕನ್ನಡದ ನಟ ದರ್ಶನ್ ಮತ್ತು ಪ್ರಣಿತಾ ಸುಭಾಷ್ ನಟನೆಯ ಪೊರ್ಕಿ ಸಿನಿಮಾ ಬ್ಲಾಕ್ ಬಸ್ಟರ್ ಕಲೆಕ್ಷನ್ ಕಂಡಿತ್ತು. ಕಾಮಿಡಿ ವಿತ್ ಲವ್ ಎಲಿಮೆಂಟ್ ಇರುವ ಫ್ಯಾಮಿಲಿ ಸಿನಿಮಾದ ಕೆಲವೊಂದು ಭಾಗಗಳನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಿದ್ದರು. ಸಿನಿಮಾ ಶೂಟಿಂಗ್ ಅಂದ್ಮೇಲೆ ಫ್ಯಾಮಿಲಿಯವರು ಆಗಾಗ ಭೇಟಿ ನೀಡುತ್ತಾರೆ. ಸ್ವಿಜರ್ಲ್ಯಾಂಡ್‌ನಲ್ಲಿ ಚಿತ್ರೀಕರಣ ಮಾಡುವಾಗ ಪತ್ನಿ ವಿಜಯಲಕ್ಷ್ಮಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಬಳಿ ಇದ್ದ ದುಬಾರ ನೆಕ್ಲೆಸ್ ಕಳೆದುಕೊಂಡಿದ್ದಾರೆ. ಈ ಘಟನೆಯನ್ನು ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ವಿವರಸಿದ್ದಾರೆ.
'ಪೊರ್ಕಿ ಸಿನಿಮಾ ಮಾಡುವ ಸಮಯದಲ್ಲಿ ನಡೆದ ಘಟನೆ ಇದು. ಪೊರ್ಕಿ ಚಿತ್ರಕ್ಕೆ ಪ್ರೆಸೆಂಟ್ಸ್ ನಾನೇ ಆಗಿದ್ದೆ. ಪೊರ್ಕಿ ಚಿತ್ರದ ದೃಶ್ಯವೊಂದನ್ನು ಶೂಟ್ ಮಾಡಲು ಸ್ವಿಟ್ಜರ್ಲ್ಯಾಂಡ್‌ಗೆ ಹೋಗಿದ್ವಿ ಆಗ ದರ್ಶನ್ ತಮ್ಮ ಪತ್ನಿ ಮತ್ತು ಪುತ್ರನನ್ನು ಕರೆದುಕೊಂಡು ಬಂದಿದ್ದರು. ಆ ಸಮಯದಲ್ಲಿ ವಿಜಯಲಕ್ಷ್ಮಿ ಅವರ ಬ್ಯಾಗ್‌ನಲ್ಲಿ ಇದ್ದ ಒಂದು ಆಭರಣ ಕಾಣೆಯಾಗಿತ್ತು. ಆನಂತರ ತಿಳಿಯಿತ್ತು ಅಲ್ಲಿದ್ದ ಲೋಕಲ್ ಒಬ್ಬರು ಕಳ್ಳತನ ಮಾಡಿದ್ದಾರೆ ಎಂದು. ಆ ನೆಕ್ಲೆಸ್ ಸುಮಾರು 3 ಲಕ್ಷ ರೂ. ಬೆಲೆ ಬಾಳುತ್ತದೆ. ನನ್ನ ಸಿನಿಮಾ ಸಮಯದಲ್ಲಿ ಈ ರೀತಿ ಆಗಿರುವುದು ಹೀಗಾಗಿ ನಾನೇ ಹಣ ಕೊಡುತ್ತೀನಿ ಎಂದು ನಿರ್ಮಾಪಕರು ಹೇಳುತ್ತಾರೆ. ಆದರೆ ದರ್ಶನ ಇದಕ್ಕೆ ಒಪ್ಪಿಕೊಂಡಿಲ್ಲ. ಒಂದು ವೇಳೆ ನೆಕ್ಲೆಸ್ ಸಿಕ್ಕರೆ ಓಕೆ ಆದರೆ ಸಿಕ್ಕಿಲ್ಲ ಅಂದ್ರೆ ನಮ್ಮದಲ್ಲ ಅಂತ ಸುಮ್ಮನೆ ಆಗಿಬಿಡೋಣ ಆದರೆ ನೀವು ಕೊಡುವುದು ಬೇಡ ಅಂದುಬಿಟ್ಟರು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಗಣೇಶ್ ಕಾಸರಗೋಡು ಮಾತನಾಡಿದ್ದಾರೆ.
ದೇಹ ಸಣ್ಣಗಿದೆ ಮುಖ ದಪ್ಪಗಿದೆ ಅಂತ ಸುಮ್ಮನೆ ಕೂರಲ್ಲ ಗುರು...ಈ ಕೆಲಸ ಮಾಡ್ತೀನಿ: ತೇಜಸ್ವಿ ಪ್ರಕಾಶ್
'ಈ ರೀತಿ ಅದೆಷ್ಟೋ ಘಟನೆಗಳು ನಡೆದಿತ್ತು ಹಲವರು ಹಂಚಿಕೊಂಡಿದ್ದಾರೆ. ಯಾರೇ ಆದರೂ ಕಷ್ಟ ಅಂತ ಬಂದಾಗ ದರ್ಶನ್ ಸಹಾಯ ಮಾಡುತ್ತಾರೆ. ದರ್ಶನ್ ಹೊಗಳಿ ನನಗೆ ಏನೂ ಆಗಬೇಕಿಲ್ಲ ಆದರೆ ನಾನು ಕಂಡ ದರ್ಶನ್ ಬಗ್ಗೆ ಹೇಳುತ್ತಿದ್ದೀನಿ. ಈ ಕಾಲದಲ್ಲಿ ಯಾರು ಸಹಾಯ ಮಾಡಲ್ಲ ಯೋಚನೆ ಮಾಡುತ್ತಾರೆ ಆದರೆ ಒಂದು ನಿಮಿಷವೂ ಯೋಚನೆ ಮಾಡದೆ ಜೀವನ ಪೂರ್ತಿ ನಾನು ನೋಡಿಕೊಳ್ಳುತ್ತೀನಿ ಎನ್ನುವುದು ದೊಡ್ಡ ಗುಣ. ಆರ್ಥಿಕವಾಗಿ ಅಲ್ಲ ನಾನಾ ರೀತಿಯಲ್ಲಿ ದರ್ಶನ ಕಷ್ಟಗಳನ್ನು ಎದುರಿಸುತ್ತಿದ್ದಾರೆ ಆದರೆ ಈ ಸಮಯದಲ್ಲಿ ಸಹಾಯ ಮಾಡುವ ಗುಣ ಮತ್ತು ಮನಸ್ಸು ಬಂದಿರುವುದು ನಿಜಕ್ಕೂ ಮೆಚ್ಚಬೇಕು' ಎಂದು ಗಣೇಶ್ ಕಾಸರಗೋಡು ಹೇಳಿದ್ದಾರೆ.
ಹುಡುಗರ ರೀತಿ ಹೇರ್‌ಕಟ್ ಮಾಡಿಸಿಕೊಂಡ್ರಾ ಕೀರ್ತಿ ಸುರೇಶ್; ಅತ್ತೆ-ಮಾವ ಗಂಡುಬೀರಿ ಅಂದಿಲ್ವಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.