
ನಟ ದರ್ಶನ್ ತೂಗುದೀಪ ( Actor Darshan Thoogudeepa ) ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಈಗ ಅವರು ಜೈಲಿನಲ್ಲಿದ್ದು, ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿದ್ದಾರಾ? ಇಲ್ಲವಾ ಎಂದು ನೋಡುತ್ತಿದ್ದಾರೆ. ಇನ್ನೊಂದು ಕಡೆ ಅವರು, “ಜೈಲಿನಲ್ಲಿ ನಾನು ಬೆಳಕು ನೋಡಿಲ್ಲ. ದಯಮಾಡಿ ನನಗೆ ವಿಷ ಕೊಡಿ” ಎಂದು ಅವರು ಹೇಳಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲಿನಲ್ಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಆ ವೇಳೆ ಅವರು, “ಜೈಲಿನಲ್ಲಿ ಏನೂ ಕೇಳಿದರೂ ಸಿಗುತ್ತಿಲ್ಲ. ಹೀಗಾಗಿ ನನಗೆ ಸ್ವಲ್ಪ ವಿಷ ಕೊಡಿ” ಎಂದು ಅವರು ಹೇಳಿದ್ದಾರೆ.
ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವ ವಿಚಾರವು ಇಂದು ನಿರ್ಧಾರವಾಗಲಿದೆ. ಬಳ್ಳಾರಿ ಜೈಲಿಗೆ ದರ್ಶನ್ ಅವರನ್ನು ಶಿಫ್ಟ್ ಮಾಡುವಂತೆ ಜೈಲು ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ. 64ನೇ ಸೆಷನ್ಸ್ ಕೋರ್ಟ್‌ನಿಂದ ಆದೇಶ ಹೊರಬೀಳಲಿದೆ. ದರ್ಶನ್ ಸೇರಿ ಐವರು ಆರೋಪಿಗಳ ಶಿಫ್ಟ್‌ಗೆ ಅರ್ಜಿ ಮಾಡಲಾಗಿತ್ತು. ದರ್ಶನ್, ಲಕ್ಷ್ಮಣ್, ನಾಗರಾಜ್, ಜಗದೀಶ್ ಹಾಗೂ ಪ್ರದೋಷ್ ಶಿಫ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಜೈಲಿನಲ್ಲಿ ಹಾಸಿಗೆ, ದಿಂಬು ಸೇರಿ ಕನಿಷ್ಠ ಸೌಲಭ್ಯಕ್ಕೆ ದರ್ಶನ್ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ದರ್ಶನ್ ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದೆ. ದರ್ಶನ್ ಅವರನ್ನು ನಿಕೃಷ್ಟವಾಗಿ ನಡೆಸಿಕೊಳ್ತಿದ್ದಾರೆ. ಜೈಲು ಮ್ಯಾನ್ಯೂವಲ್‌ನಲ್ಲಿ ಇರುವ ಸೌಕರ್ಯ ಕೂಡ ಸಿಗ್ತಿಲ್ಲ ಎಂದು ಆರೋಪ ಮಾಡಲಾಗಿದೆ.
ಸ್ವಂತ ಖರ್ಚಿನಲ್ಲಿ ಅಗತ್ಯ ವಸ್ತುಗಳನ್ನು ಪಡೆಯಲು ಅವಕಾಶ ಕೋರಲಾಗಿತ್ತು. ದರ್ಶನ್ ಅರ್ಜಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಯಾವುದೇ ವಿಶೇಷ ಸವಲತ್ತು ನೀಡಲು ಆದೇಶಿಸದಂತೆ ಮನವಿ ಮಾಡಲಾಗಿತ್ತು. ಈ ಅರ್ಜಿ ಸಂಬಂಧ ಕೋರ್ಟ್ ಆದೇಶ ನೀಡಲಿದೆ. ಇದೇ ಇಂದು ಎಲ್ಲ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಬೇಕು. ಜೈಲಿನಲ್ಲಿ ಆರೋಪಿಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಾಗುವುದು. ಪವಿತ್ರಾಗೌಡ, ದರ್ಶನ್, ಸೇರಿ ಐವರು ಜೈಲಿನಲ್ಲಿ ಇದ್ದಾರೆ. ನಾಳೆ ಚಾರ್ಜ್ ಫ್ರೇಮ್‌ಗೆ ಕೋರ್ಟ್ ದಿನಾಂಕ ನಿಗದಿ ಮಾಡಲಿದೆ.
ಚಾರ್ಜ್ ಫ್ರೇಮ್ ಆದಲ್ಲಿ ಪ್ರಕರಣದ ಟ್ರಯಲ್ ಆರಂಭವಾಗಲಿದೆ. ಎರಡು ಅರ್ಜಿಗಳ ಆದೇಶ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ದರ್ಶನ್ ಸೇರಿ ಐವರು ಆರೋಪಿಗಳನ್ನ ಬೇರೆ ಜಿಲ್ಲಾ ಜೈಲುಗಳಿಗೆ ಸ್ಥಳಾಂತರ ಅರ್ಜಿ ಕೋರಲಾಗಿತ್ತು. ಪ್ರಕರದಿಂದ ಕೈಬಿಡುವಂತೆ ಅರ್ಜಿ ಸಲ್ಲಿಸುತ್ತೇವೆ. ಜೈಲು ಶಿಫ್ಟ್ ಕೋರಿದ್ದ ಅರ್ಜಿ ಹಾಗೂ ಹಾಸಿಗೆ ದಿಂಬು ಕೋರಿದ್ದ ಅರ್ಜಿ ಆದೇಶ ಇಂದು ಮಧ್ಯಾಹ್ನ 3ಗಂಟೆಗೆ ಹೊರಬೀಳಲಿದೆ.
“ಬೆಳಕು ನೋಡಿಲ್ಲ, ಪೊಂಗಸ್ ಆಗಿದೆ, ಇಲ್ಲಿ ಏನ್ ಕೇಳಿದ್ರೂ ಸಿಗ್ತಿಲ್ಲ. ದಯಮಾಡಿ ನ್ಯಾಯಾಲಯದಿಂದಲೇ ಆರ್ಡರ್ ಮಾಡಿ. ಏನೇ ಕೇಳಿದರೂ ಕೂಡ ಕೋರ್ಟ್‌ನಿಂದಲೇ ಆದೇಶ ತನ್ನಿ ಅಂತಾರೆ. ಹೀಗಾಗಿ ನನಗೆ ಮಾತ್ರ ವಿಷ ಕೊಡಿ, ಅದನ್ನು ಕೋರ್ಟ್‌ನಿಂದಲೇ ಆದೇಶ ಕೊಡಿ” ಎಂದು ನಟ ದರ್ಶನ್ ಅವರು ಜೈಲಿನಲ್ಲಿದ್ದುಕೊಂಡೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಮೂರ್ತಿಗಳ ಬಳಿ ಮನವಿ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.