'ನೀವು ಟೈಮ್‌ಬಾಂಮ್‌ ಮೇಲೆ ಕೂತಿದ್ರಿ ಎಂದ್ರು.. ಒಂದು ಮಗು ಹಾರ್ಟ್‌ ಬೀಟ್‌ ನಿಂತಾಗ..'; Bhavana Ramanna

Published : Sep 08, 2025, 05:42 PM IST
bhavana ramanna

ಸಾರಾಂಶ

ನಿನಗಾಗಿ, ಪ್ರೀತಿ ಪ್ರೇಮ ಪ್ರಣಯ, ಚಂದ್ರಮುಖಿ ಪ್ರಾಣಸಖಿ, ಪರ್ವ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಭಾವನಾ ರಾಮಣ್ಣ ಅವರು ಅವಳಿ ಮಕ್ಕಳಲ್ಲಿ ಓರ್ವ ಮಗುವನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. 

ನಟಿ ಭಾವನಾ ರಾಮಣ್ಣ ಅವರು ಐವಿಎಫ್‌ ಮೂಲಕ ಅವಳಿ ಮಗು ಹೊಂದುವ ನಿರೀಕ್ಷೆಯಲ್ಲಿದ್ದರು. ದುರದೃಷ್ಟವಶಾಕ್‌ ಒಂದು ಮಗು ತೀರಿಕೊಂಡಿದೆ. ಈಗ ಅವರು ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಹೆರಿಗೆ ಪ್ರಕ್ರಿಯೆ ಬಗ್ಗೆ ಅವರು Times Of India ವೆಬ್‌ಸೈಟ್‌ಗೆ ಸಂದರ್ಶನ ನೀಡಿದ್ದಾರೆ.

ಟೈಮ್‌ ಬಾಂಬ್‌ ಮೇಲೆ ಕೂತಿದ್ದೀರಿ ಅಂದ್ರು

“ಸೀಮಂತ ಮುಗಿದಬಳಿಕ ನನಗೆ ಹೆಚ್ಚು ಹೊತ್ತು ಕೂರಲು ಆಗುತ್ತಿರಲಿಲ್ಲ. ಆಮೇಲೆ ರಕ್ತಸ್ರಾವ ಶುರುವಾಗಿದೆ. ನಾನು ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆನೋ ಆ ಆಸ್ಪತ್ರೆ ದೂರ ಇತ್ತು. ಹೀಗಾಗಿ ಕುಟುಂಬದ ಸಲಹೆ ಮೇರೆಗೆ ಹತ್ತಿರದ್ದಲ್ಲೇ ಇದ್ದ ಆಸ್ಪತ್ರೆಗೆ ಹೋದೆವು. ಅಲ್ಲಿ ನನ್ನ ಸಂಬಂಧಿಕರ ಮಕ್ಕಳ ಹೆರಿಗೆಯೂ ಆಗಿತ್ತು. ಅಲ್ಲಿ ಹೋಗುತ್ತಿದ್ದಂತೆ ಡಾಕ್ಟರ್‌, ಭಾವನಾ ನೀವು ಟೈಮ್‌ ಬಾಂಬ್‌ ಮೇಲೆ ಕೂತಿದ್ದೀರಿ ಎಂದರು. ಮುಂದಿನ ಕೆಲವು ಗಂಟೆ ಚಿಂತಾಜನಕ ಆಗಿರುತ್ತದೆ ಎಂದರು” ಎಂದು ಭಾವನಾ ರಾಮಣ್ಣ ಹೇಳಿದ್ದಾರೆ.

ಮಗು ಹಾರ್ಟ್‌ ಬೀಟ್‌ ನಿಂತಾಗ…!

“ಡಾಕ್ಟರ್‌ ಟೆಸ್ಟ್‌ ಮಾಡಿದ ಬಳಿಕ ಮಗುವಿಗೆ ರಕ್ತ ನೀಡುವ ನಾಳ ರಿವರ್ಸ್‌ ಹೋಗುತ್ತಿದೆ ಎನ್ನೋದು ಗೊತ್ತಾಯಿತು. ಒಂದು ಮಗು ಆರೋಗ್ಯವಾಗಿತ್ತು. ಆದರೆ ಆ ಮಗುವಿನ ತೂಕ ಕಡಿಮೆ ಇದೆ ಅಂತ ಗೊತ್ತಾಗಿ ದೇವರ ಬಳಿ ಪ್ರಾರ್ಥನೆ ಮಾಡಿದೆವು. ಆದರೆ ಆರೋಗ್ಯ ಸುಧಾರಿಸದೆ ಆಪರೇಶನ್‌ ಮಾಡಬೇಕಾಯ್ತು. ಮಾನಿಟರ್‌ನಲ್ಲಿ ಒಂದು ಮಗುವಿನ ಹಾರ್ಟ್‌ಬೀಟ್‌ ಕುಸಿದಿರೋದನ್ನು ನೋಡಿದೆ, ಆಗ ಆದ ಆಘಾತವನ್ನು ಹೇಗೆ ಹೇಳಲಿ? ಒಂದು ಮಗು ಉಳಿಸೋಕಾಗಲಿಲ್ಲ ಅಂತ ಡಾಕ್ಟರ್‌ ಹೇಳಿದರು. ಇನ್ನೊಂದು ಮಗುಗೋಸ್ಕರ ಮತ್ತೆ ಕಾಯೋಕೆ ಆಗದೆ 32ನೇ ವಾರಕ್ಕೆ ಆಪರೇಶನ್‌ ಮಾಡಿದೆವು” ಎಂದು ಭಾವನಾ ರಾಮಣ್ಣ ಹೇಳಿದ್ದಾರೆ.

ಸಿಹಿ-ಕಹಿ ಅನುಭವ ಇದು!

“ಆಪರೇಶನ್‌ ಮಾಡಿದ ಬಳಿಕ ಡಾಕ್ಟರ್‌ ನನ್ನ ಬಳಿ ಬಂದು, ಎರಡು ಹೆಣ್ಣು ಮಕ್ಕಳು ಆಗಿತ್ತು ಎಂದರೆ. ಆ ಮಗು ಇಲ್ಲ ಅಂತ ಬೇಸರ ಕೂಡ ಇದೆ. ಮಗು ಕಳೆದುಕೊಂಡ ದುಃಖ ಏನು ಎನ್ನೋದು ತಾಯಿಗೆ ಮಾತ್ರ ಗೊತ್ತಿರುತ್ತದೆ. ಈಗ ನಾನು ಹೆಣ್ಣು ಮಗುವಿನ ತಾಯಿ ಅಂತ ಖುಷಿ ಇದೆ. ಮಗು ಹುಟ್ಟಿತು ಅಂತ ಖುಷಿಪಡಲಾ ಅಥವಾ ಆ ಮಗು ಇಲ್ಲ ಅಂತ ಬೇಸರಪಟ್ಟುಕೊಳ್ಳಲಾ? ಇದೊಂದು ಥರ ಸಿಹಿ-ಕಹಿ ಅನುಭವ. ನನ್ನ ಮಗಳಿಗೆ ರುಕ್ಮಿಣಿ ಎಂದು ಹೆಸರಿಟ್ಟಿದ್ದೇನೆ. ಇದು ಅಜ್ಜಿ ಹೆಸರು” ಎಂದಿದ್ದಾರೆ.

ಪ್ರೀತಿ ಪ್ರೇಮ ಪ್ರಣಯ, ನಿನಗಾಗಿ, ಪರ್ವ, ಚಂದ್ರಮುಖಿ ಪ್ರಾಣಸಖಿ, ಲಂಕೇಶ, ಎಲ್ಲರ ಮನೆ ದೋಸೆನೂ, ಕುರಿಗಳು ಸಾರ್‌ ಕುರಿಗಳು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದರ್ಶನ್ ಪತ್ನಿ ವಿಜಯಲಕ್ಷ್ಮೀ ನಿಂದನೆ ಪ್ರಕರಣ: ನಕಲಿ ಖಾತೆಗಳ ಮಾಹಿತಿ ಕೋರಿ ಮೆಟಾಗೆ ಸಿಸಿಬಿ ಪತ್ರ
ದೊಡ್ಮನೆ ಮೂಲ ನಿಯಮ ಉಲ್ಲಂಘಿಸಿದ ಕ್ಯಾಪ್ಟನ್‌ ಕಾವ್ಯಾ ಕುಟುಂಬ, ಎಚ್ಚರಿಕೆ ನೀಡಿ ಹೊರಕಳಿಸಿದ್ರಾ ಬಿಗ್‌ಬಾಸ್‌ ?