ರಾತ್ರಿ ದರ್ಶನ್ ಕಾರು ಫಾಲೋ ಮಾಡುತ್ತಿದ್ದ ಸ್ಪೆಷಲ್‌ ಅಭಿಮಾನಿಯನ್ನು ಭೇಟಿ ಮಾಡಿದ ದರ್ಶನ್!

Published : Feb 25, 2021, 12:42 PM ISTUpdated : Feb 25, 2021, 01:35 PM IST
ರಾತ್ರಿ ದರ್ಶನ್ ಕಾರು ಫಾಲೋ ಮಾಡುತ್ತಿದ್ದ ಸ್ಪೆಷಲ್‌ ಅಭಿಮಾನಿಯನ್ನು ಭೇಟಿ ಮಾಡಿದ ದರ್ಶನ್!

ಸಾರಾಂಶ

ರಾತ್ರಿ ದರ್ಶನ್ ಕಾರು ಫಾಲೋ ಮಾಡುತ್ತಿದ್ದ ಅಭಿಮಾನಿಯನ್ನು ಮಾತನಾಡಿಸಿದ ದರ್ಶನ್. ಬಾಸ್‌ ಒಳ್ಳೆ ಗುಣವನ್ನು ಮೆಚ್ಚಿಕೊಂಡ ಅಭಿಮಾನಿಗಳು...  

ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ ಸುಲ್ತಾನ್ ದರ್ಶನ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಬಾಸ್‌ನನ್ನು ನೋಡಲೇ ಬೇಕು ಎಂದು ದೂರದ ಊರುಗಳಿಂದ ಅಭಿಮಾನಿಗಳು ಬರುತ್ತಾರೆ. ಸದ್ಯಕ್ಕೆ ಗಾಂಧೀ ನಗರದಲ್ಲಿ ಆಗುತ್ತಿರುವ ದೊಡ್ಡ ಸುದ್ದಿಯಲ್ಲಿ ಬ್ಯುಸಿಯಾಗಿದ್ದ ದರ್ಶನ್‌ನನ್ನು ಫಾಲೋ ಮಾಡುತ್ತಿದ್ದ ಆಟೋ ಚಾಲಕ ಯಾರು ಗೊತ್ತಾ?

"

ರಾತ್ರಿ ಬೆಂಗಳೂರಿನಲ್ಲಿ ದರ್ಶನ್‌ ಕಾರು ಚಲಾಯಿಸುತ್ತಿರುವಾಗ ಹಿಂದಿನಿಂದ ಯಾವುದೋ ಆಟೋ ಫಾಲೋ ಮಾಡಿಕೊಂಡು ಬರುವುದನ್ನು ಗಮನಿಸಿದ್ದಾರೆ. ಈ ಹಿಂದೆಯೂ ಅಭಿಮಾನಿಗಳು ಈ ರೀತಿ ಫಾಲೋ ಮಾಡಲು ಹೋಗಿ ಪ್ರಾಣಾಪಾಯ ತಂದುಕೊಂಡಿರುವ ಉದಾಹರಣೆಯೂ ಇದೆ, ಈ ಕಾರಣಕ್ಕೆ ದರ್ಶನ್ ಕಾರು ನಿಲ್ಲಿಸಿ ಆಟೋ ಚಾಲಕನ ಜೊತೆ ಮಾತನಾಡಿದ್ದಾರೆ.

ಜಗಳಕ್ಕೆ ಶುಭಮಂಗಳ; ಜಗ್ಗೇಶ್ ಮತ್ತು ದರ್ಶನ್ ಅಣ್ತಮ್ಮ

ಕಾರಿನಿಂದ ಇಳಿದ ದರ್ಶನ್‌ ಆಟೋದಲ್ಲಿ ಫಾಲೋ ಮಾಡುತ್ತಿದ್ದ ಅಭಿಮಾನಿ ವಿಶೇಷ ಚೇತನ ಎಂದು ತಿಳಿದು ಬೇಸರ ಮಾಡಿಕೊಳ್ಳುತ್ತಾರೆ. ಅಭಿಮಾನಿಯ ಸಮಕ್ಕೆ ರಸ್ತೆಯ ಮೇಲೆ ಕುಳಿತು ಮಾತನಾಡಿಸುತ್ತಾರೆ ಹಾಗೂ  ಫೋಟೋ ಬೇಕೆಂದು ಕೇಳಿದಾಗ ಅವರದ್ದೇ ಫೋನ್‌ ಕೇಳಿ ಫೋಟೋ ಕ್ಲಿಕಿಸುತ್ತಾರೆ. 'ಆಟೋ ಹೇಗೆ ಓಡಿಸುತ್ತೀಯಾ? ಬ್ರೇಕ್‌ ಹೇಗೆ ಹಾಕ್ತಿಯಾ ನೀನು' ಎಂದೆಲ್ಲಾ ಅಭಿಮಾನಿಯನ್ನು ವಿಚಾರಿಸಿಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‘ಬನ’ ಸಿನಿಮಾ ನೋಡಿದ ಬಳಿಕ ಜಯಪ್ರಕಾಶ್ ಶೆಟ್ಟಿ ಜೊತೆ ಫೋಟೋಗೆ ಮುಗಿಬಿದ್ದ ವಿದ್ಯಾರ್ಥಿಗಳು: ಕಾರಣವೇನು?
KBC 18: ಭಾವಿ ಪತಿಯ ಗುಟ್ಟು ಮೊದಲ ಬಾರಿ ಅಮಿತಾಭ್​ ಎದುರು ರಿವೀಲ್​ ಮಾಡಿದ ನಟಿ Sai Pallavi