'ಸಲಗ' ಚಿತ್ರ ನೋಡುವ ಇಂಗಿತ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ; ದುನಿಯಾ ವಿಜಿ ಮನೆಗೆ ಭೇಟಿ ನೀಡಿದ ಸಂಸದ!

Kannadaprabha News   | Asianet News
Published : Feb 25, 2021, 09:15 AM IST
'ಸಲಗ' ಚಿತ್ರ ನೋಡುವ ಇಂಗಿತ ವ್ಯಕ್ತಪಡಿಸಿದ ತೇಜಸ್ವಿ ಸೂರ್ಯ; ದುನಿಯಾ ವಿಜಿ ಮನೆಗೆ ಭೇಟಿ ನೀಡಿದ ಸಂಸದ!

ಸಾರಾಂಶ

ದುನಿಯಾ ವಿಜಯ್‌ ನಿರ್ದೇಶನದ ‘ಸಲಗ’ ಸಿನಿಮಾವನ್ನು ವೀಕ್ಷಿಸಲು ಸಂಸದ ತೇಜಸ್ವಿ ಸೂರ್ಯ ಉತ್ಸುಕರಾಗಿದ್ದಾರೆ. 

ಚಿತ್ರದ ನಿರ್ಮಾಪಕ ಕೆ ಪಿ ಶ್ರೀಕಾಂತ್‌ ಅವರಿಗೆ ಆತ್ಮೀಯರಾಗಿರುವ ಸಂಸದ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಕ್ಷೇತ್ರದ ಪರ್ಯಟನೆ ಸಂದರ್ಭದಲ್ಲಿ ದುನಿಯಾ ವಿಜಯ್‌ ಮನೆಗೆ ಭೇಟಿ ನೀಡಿ ಔಪಚಾರಿಕವಾಗಿ ಮಾತುಕತೆ ಮಾಡುತ್ತಾ ಸಲಗ ಚಿತ್ರ ವೀಕ್ಷಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ಟೀಸರ್‌ ಹಾಗೂ ಟ್ರೇಲರ್‌ ತೋರಿಸಿದ್ದಾರೆ ದುನಿಯಾ ವಿಜಯ್‌.

"

‘ಚಿತ್ರದ ಟೀಸರ್‌, ಟ್ರೇಲರ್‌ ಹಾಗೂ ಹಾಡುಗಳನ್ನು ನೋಡಿದ ಮೇಲೆ ಚಿತ್ರದ ಬಗ್ಗೆ ತುಂಬಾ ಕುತೂಹಲ ಹುಟ್ಟಿಕೊಂಡಿದೆ. ಈ ಚಿತ್ರವನ್ನು ನಾನು ನೋಡೇ ನೋಡುತ್ತೇನೆ. ಅಲ್ಲದೆ ಇದು ವಿಜಯ್‌ ಅವರ ಮೊದಲ ನಿರ್ದೇಶನದ ಸಿನಿಮಾ ಬೇರೆ.

ಅಭಿಮಾನಿಗಳ ಕಣ್ಣೀರು ಕಂಡು ಭಾವುಕರಾದ ದುನಿಯಾ ವಿಜಯ್! 

ಅವರಿಗೆ ಈ ಚಿತ್ರದಿಂದ ಯಶಸ್ಸು ಸಿಗಬೇಕು. ಈ ಚಿತ್ರದಿಂದ ಒಳ್ಳೆಯ ಸಂದೇಶ ಸಮಾಜಕ್ಕೆ ತಲುಪಲಿ’ ಎನ್ನುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ತೇಜಸ್ವಿ ಸೂರ್ಯ. ಸಂಜನಾ ಆನಂದ್‌ ನಾಯಕಿಯಾಗಿ ನಟಿಸಿರುವ ಈ ಚಿತ್ರವಿದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?
ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ