ರಾಬರ್ಟ್ ವಿಜಯ್ ಯಾತ್ರೆಯಿಂದ ಹಿಂದಿರುಗುವಾಗ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಿದ ನಟ ದರ್ಶನ್. ಯಾರದು ನೋಡಿ.....
ರಾಬರ್ಟ್ ಸಕ್ಸಸ್‌ನಲ್ಲಿ ತೇಲುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಚಿತ್ರತಂಡ ಇದೇ ಖುಷಿಗೆ ಇತ್ತೀಚಿಗೆ ಮಂತ್ರಾಲಯ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ರಾಯರ ದರ್ಶನ ಪಡೆದು ಹಿಂದಿರುಗುವಾಗ ವಿಶೇಷವಾದ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ.
ಮಾರುವೇಷದಲ್ಲಿ ಜನರ ಜೊತೆ ಸಿನಿಮಾ ವೀಕ್ಷಿಸಿದ ದರ್ಶನ್; ಶಾಕ್ ಆದ ಫ್ಯಾನ್ಸ್
ದರ್ಶನ್ ಫೋಸ್ಟ್:
ದರ್ಶನ್ ಶಾಲೆಗೆ ಹೋಗುವಾಗ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ತಮಗೆ ಪರಿಚಯವಿರುವ ಪ್ರತಿಯೊಬ್ಬರನ್ನೂ ಈಗಲೂ ನೆನಪಿಸಿ ಕೊಳ್ಳುತ್ತಾರೆ, ಸಾಧ್ಯವಾದರೆ ಭೇಟಿಯೂ ಮಾಡುತ್ತಾರೆ. ಮಂತ್ರಾಲಯದಿಂದ ಹಿಂದಿರುಗುವ ಮಾರ್ಗದಲ್ಲಿ ರಿಯಲ್ ಸಾರಥಿಯೊಬ್ಬರನ್ನು ಭೇಟಿ ಮಾಡಿದ್ದಾರೆ.
'ರಿಯಲ್ ಸಾರಥಿಯನ್ನು ಭೇಟಿ ಮಾಡಿದ ರಿಯಲ್ ಸಾರಥಿ. ನಮ್ಮ ಶಾಲೆ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಲಾಯಿಸುತ್ತಿದ್ದ ರಿಯಲ್ ಸಾರಥಿಯನ್ನು ಇಂದು ಭೇಟಿ ಮಾಡಿದೆ. 80ನೇ ಹುಟ್ಟುಹಬ್ಬದ ಪ್ರಯುಕ್ತ ಶುಭ ಹಾರೈಸಿ, ಆಶೀರ್ವಾದ ಪಡೆದು ಬಂದೆ,' ಎಂದು ದರ್ಶನ್ ಬರೆದುಕೊಂಡಿದ್ದಾರೆ.
ರಾಬರ್ಟ್ ಪೈರಸಿ ಮಾಡುವವರಿಗೆ ದರ್ಶನ್ ಖಡಕ್ ಉತ್ತರ
ದರ್ಶನ್ ಈ ಸರಳತೆ ಗುಣಗಳೇ ಅಭಿಮಾನಿಗಳಿಗೆ ಇಷ್ಟವಾಗುವುದು.