2ನೇ ಅಲೆ ಆರ್ಭಟ; ಸ್ಯಾಂಡಲ್‌ವುಡ್ ನಟ ಸುನೀಲ್‌ ರಾವ್‌ಗೆ ಕೊರೋನಾ

Published : Mar 22, 2021, 06:55 PM IST
2ನೇ ಅಲೆ ಆರ್ಭಟ; ಸ್ಯಾಂಡಲ್‌ವುಡ್ ನಟ ಸುನೀಲ್‌ ರಾವ್‌ಗೆ ಕೊರೋನಾ

ಸಾರಾಂಶ

ನಟ ಸುನೀಲ್ ರಾವ್ ಗೆ ಕೋವಿಡ್ ಪಾಸಿಟಿವ್ / ತಮಗೆ ಕೊರೋನಾ ಪಾಸಿಟಿವ್ ಆಗಿರುವ ಬಗ್ಗೆ ಸೋಷಿಯಲ್ ಮಿಡಿಯಾ ದಲ್ಲಿ ಬರೆದುಕೊಂಡ‌ ಸುನೀಲ್/ ಎಕ್ಸ್ ಕ್ಯೂಸ್ ಮಿ ಸಿನಿಮಾ ಖ್ಯಾತಿಯ ನಟ ಸುನೀಲ್ ರಾವ್ / ಸದ್ಯ ಶ್ರೀನಿ ನಿರ್ದೇಶನದ ಓಲ್ಡ್ ಮಾಂಕ್ ಚಿತ್ರದಲ್ಲಿ ಅಭಿನಯ ಮಾಡ್ತಿರೋ ನಟ / ಮನೆಯಲ್ಲಿಯೇ ಫ್ಯಾಮಿಲಿ ಜೊತೆ ಕ್ವಾರಂಟೈನ್ ಆಗಿರೋ ನಟ

ಬೆಂಗಳೂರು(ಮಾ.  22) ಕೊರೋನಾ ಎರಡನೇ ಅಲೆ ಆತಂಕ  ಹೆಚ್ಚಾಗುತ್ತಲೇ ಇದೆ.  ಸ್ಯಾಂಡಲ್ ವುಡ್ ನಟ, ಗಾಯಕ  ಸುನೀಲ್ ರಾವ್ ಗೆ ಕೋವಿಡ್ ಪಾಸಿಟಿವ್  ಬಂದಿದ್ದು ಅವರೇ ಸೋಶಿಯಲ್ ಮೀಡಿಯಾ ಮುಖೇನ ವಿಚಾರ ತಿಳಿಸಿದ್ದಾರೆ.

ತಮಗೆ ಕೊರೋನಾ ಪಾಸಿಟಿವ್ ಆಗಿರುವ ಬಗ್ಗೆ ಸೋಷಿಯಲ್ ಮಿಡಿಯಾ ದಲ್ಲಿ ಬರೆದುಕೊಂಡ‌ ಸುನೀಲ್  ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಎಕ್ಸ್ ಕ್ಯೂಸ್ ಮಿ ಸಿನಿಮಾ ಖ್ಯಾತಿಯ ನಟ ಸುನೀಲ್ ರಾವ್  ಸದ್ಯ ಶ್ರೀನಿ ನಿರ್ದೇಶನದ ಓಲ್ಡ್ ಮಾಂಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಗಾಯಕರಾಗಿಯೂ ಹೆಸರು ಮಾಡಿರುವ ಸುನೀಲ್ ರಾವ್ ಸಂಗೀತದ ಕುಟುಂಬದಿಂದ ಬಂದವರು  ಸುನೀಲ್ ರಾವ್ ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. 

ನೀವು  ಹೇಳಿದ್ರೆ ಸಂಶೊಧನೆ,, ನಾವ್ ಹೇಳಿದ್ರೆ ಹುಸಿ ವಿಜ್ಞಾನ 

ಹಿರಿಯ ನಟ ಅನಂತ್‌  ನಾಗ್ ಕೊರೋನಾ ಲಸಿಕೆ ಪಡೆದುಕೊಂಡಿದ್ದು  ಉಳಿದವರಿಗೂ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಸಿನಿಮಾ ಮಂದಿರಗಳ ಭರ್ತಿಯನ್ನು ಮೊದಲಿನ ಹಾಗೆ ಅರ್ಧಕ್ಕೆ ಇಳಿಸಬೇಕು ಎಂದು ಬಿಬಿಎಂಪಿ ಪ್ರಸ್ತಾಪ ಇಟ್ಟಿದ್ದನ್ನು ಸರ್ಕಾರ ತಿರಸ್ಕರಿಸಿ  ಚಿತ್ರಮಂದಿರ ಪೂರ್ಣ ಭರ್ತಿಗೆ ಅವಕಾಸ ಮಾಡಿಕೊಟ್ಟಿತ್ತು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?
ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ