'ಜಾನಿ ವಾಕರ್' ಚಿತ್ರದ ತನಿಖಾಧಿಕಾರಿ ಪಾತ್ರದಲ್ಲಿ ರಾಗಿಣಿ ದ್ವಿವೇದಿ; ಇದು ಹೊಸ ಸಿನಿಮಾ?

By Suvarna News  |  First Published Mar 22, 2021, 2:37 PM IST

ನಟಿ ರಾಗಿಣಿ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ತನಿಖಾಧಿಕಾರಿ ಪಾತ್ರ ನಿರ್ವಹಿಸುತ್ತಿರುವ ವಿಚಾರ ಕೇಳಿ, ನೆಟ್ಟಿಗರು ಶಾಕ್ ಆಗಿದ್ದಾರೆ.


ಡ್ರಗ್ ಕೇಸಲ್ಲಿ ಸಿಕ್ಹಾಕಿಕೊಂಡು, ಪರಪ್ಪನ ಅಗ್ರಹಾರದಿಂದ ಹೊರ ಬಂದ ನಂತರ ರಾಗಿಣಿ ದೇವಸ್ಥಾನಗಳ ಭೇಟಿ, ಫ್ಯಾಮಿಲಿಗೆ ಟೈಂ ನೀಡುವ ಮೂಲಕ ತುಂಬಾನೇ ಬ್ಯುಸಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗುತ್ತಿದ್ದಂತೆ, ಒಂದೊಂದೇ ಕನ್ನಡ ಸಿನಿಮಾಗೆ ಸಹಿ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾ ಕತೆ ಕೇಳಿರುವ ಗಿಣಿ ಕೇವಳಲ ಎರಡು ಚಿತ್ರಗಳ ಬಗ್ಗೆ ಮಾತ್ರ ಮಾಹಿತಿ ನೀಡಿದ್ದಾರೆ.

Latest Videos

undefined

ಹೌದು! ಕೆಲವು ದಿನಗಳ ಹಿಂದೆ ಕರ್ವ 3 ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ರಾಗಿಣಿ, ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗೆ ದೊಡ್ಡ ಅನೌನ್ಸ್‌ಮೆಂಟ್ ಮಾಡುತ್ತೇವೆ ಎಂದು ಸಣ್ಣ ಸಣ್ಣ ಸುಳಿವು ನೀಡುತ್ತಿದ್ದಾರೆ. ಏನದು ಎಂದು ಪ್ರಶ್ನೆ ಮಾಡುತ್ತಿದ್ದ ವೀಕ್ಷಕರಿಗೆ ಇಲ್ಲಿದೆ ಉತ್ತರ....'ಜಾನಿ ವಾಕರ್' ಚಿತ್ರದಲ್ಲಿ ನಟಿ ರಾಗಿಣಿ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಈ ಚಿತ್ರಕ್ಕೆ ವೇದಿಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವೇದಿಕ್ ವೀರ್‌ ಈ ಹಿಂದೆ ಶಿವರಾಜ್‌ಕುಮಾರ್ ಅಭಿನಯದ ಮಫ್ತಿ ಚಿತ್ರದಲ್ಲಿ ಕೆಲಸ ಮಾಡಿದ್ದರು.

ಚಿತ್ರಕತೆಗೆ ಬೇಕಾದ ತಯಾರಿಯನ್ನು ರಾಗಿಣಿ ಮಾಡಿಕೊಳ್ಳುತ್ತಿರುವುದನ್ನು ನಾವು ನೋಡಬಹುದು. ಮನೆಯಲ್ಲಿಯೇ ವರ್ಕೌಟ್ ಹಾಗೂ ಯೋಗ ಮಾಡುತ್ತಿದ್ದಾರೆ. ಏನೇ ಜಂಕ್ ಫುಡ್‌ ಸೇವಿಸಿದರೂ ಮನೆಯಲ್ಲಿ ತಯಾರಿಸಿದ ಫ್ರೆಶ್ ಫುಡ್‌ಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಪ್ರಕರಣವೊಂದರ ತನಿಖೆ ನಡೆಸುವಾಗ ಬಹಿರಂಗವಾಗುವ ಅಂಶಗಳೇ ಚಿತ್ರದ ಕತೆಯಂತೆ.

click me!