
ಸ್ಯಾಂಡಲ್‌ವುಡ್ ನಟ ದರ್ಶನ್ ಕೊಲೆ ಪ್ರಕರಣದ ಮೇಲೆ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ ಮೇಲೆ 17 ಮಂದಿಯನ್ನು ಬಂಧಿಸಲಾಗಿದೆ. ನಾಲ್ಕು ಜನ ತುಮಕೂರಿನ ಜೈಲಿನಲ್ಲಿದ್ದರೆ, ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ 13 ಮಂದಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಕುಟುಂಬಸ್ಥರು ಸೇರಿದಂತೆ ಹಲವರು ದರ್ಶನ್‌ರನ್ನು ನೋಡಲು ಆಗಮಿಸುತ್ತಿದ್ದಾರೆ. ದರ್ಶನ್ ಹೇಗಿದ್ದಾರೆ, ಆರೋಗ್ಯ ಹೇಗಿದೆ, ಮನಸ್ಥಿತಿ ಹೇಗಿದೆ ಎಂದು ಮಾತನಾಡಿಸಿ ಬರುತ್ತಿರುವವರು ಹಂಚಿಕೊಳ್ಳುತ್ತಿದ್ದಾರೆ.
ದರ್ಶನ್‌ಗೆ ಬಿಗ್ ಶಾಕ್...
ಜುಲೈ 15ರಂದು ದರ್ಶನ್‌ರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ್ ರೂಗೂದೀಪ ಮತ್ತು ಅಳಿಯ ಚಂದನ್ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದರು. ದಿಢೀರ್ ಭೇಟಿಗೆ ಕಾರಣ ಏನು ಅನ್ನೋದು ಎಲ್ಲರ ಪ್ರಶ್ನೆ ಆಗಿದ್ದು.....ಹೌದು! ದರ್ಶನ್‌ಗೆ ಜಾಮೀನು ಕೊಡಿಸಬೇಕು ಎಂದು ಪತ್ನಿ ವಿಜಯಲಕ್ಷ್ಮಿ ತುಂಬಾ ಕಷ್ಟ ಪಡುತ್ತಿದ್ದಾರೆ ಈಗಾಗಲೆ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದಾರೆ ಆದರೂ ಸದ್ಯ ಜಾಮೀನು ಸಿಗುವುದು ಅಸಾಧ್ಯ, ಈ ಹಂತದಲ್ಲಿ ಜಾಮೀನು ಸಿಗುವುದಿಲ್ಲ ಎಂದು ವಿಜಯಲಕ್ಷ್ಮಿ ಹೇಳಿದ್ದನ್ನು ಕೇಳಿ ದರ್ಶನ್ ಶಾಕ್ ಆಗಿದ್ದಾರೆ.
ಮನೆ ಊಟಕ್ಕೆ ಮನವಿ:
ಜೈಲಿನಲ್ಲಿ ನೀಡುತ್ತಿರುವ ಆಹಾರದಿಂದ ದರ್ಶನ್‌ಗೆ ಫುಡ್ ಪಾಯಿಸನಿಂಗ್ ಆಗುತ್ತಿದೆ ಎಂದು ಜೂಲಿನ ವೈದ್ಯರೇ ಅಭಿಪ್ರಾಯ ನೀಡಿದ್ದಾರೆ. ಇದರಿಂದ ದರ್ಶನ್ ತುಂಬಾ ತೂಕ ಕಡಿಮೆಯಾಗಿದೆ ಎನ್ನಲಾಗಿದೆ. ಜೈಲು ಅಧಿಕಾರಿಗಳ ನಿರಾಕರಣೆ ಕಾಣೂನುಬಾಹಿರ. ಹೀಗೇ ಮುಂದುವರೆದರೆ ದರ್ಶನ್ ತೂಕ ಕಳೆದುಕೊಳ್ಳಬಹುದು ಇದರಿಂದ ಮತ್ತಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೈ ಕೋರ್ಟ್ ಮುಂದೆ ಮನವಿ ಮಾಡೋದು ಹೊರತು ಪಡಿಸಿ ಮತ್ತೊಂದು ದಾರಿ ಇಲ್ಲ. ಹೀಗಾಗಿ ದರ್ಶನ್ ಕುಟುಂಬದವರಿಂದ ಮನೆ ಊಟ ಪಡೆಯಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.