ಡಿಂಗ್ರಿ ಪುತ್ರ ರಾಜವರ್ಧನ್‌ಗೆ 'ಹಿರಣ್ಯ' ಮೂಲಕ ಒಳ್ಳೆಯ ಶುಕ್ರವಾರ ಸಿಗಲಿ: ಡಾಲಿ ಧನಂಜಯ್

By Govindaraj S  |  First Published Jul 15, 2024, 8:15 PM IST

ರಾಜ್‌ವರ್ಧನ್‌ ನಟನೆಯ ‘ಹಿರಣ್ಯ’ ಚಿತ್ರಕ್ಕೆ ಜುಲೈ 19ಕ್ಕೆ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್‌ ಅನ್ನು ಧನಂಜಯ್‌ ಹಾಗೂ ರಾಗಿಣಿ ಬಿಡುಗಡೆ ಮಾಡಿದರು. ಧನಂಜಯ್‌, ‘ನನಗೆ 10 ವರ್ಷಗಳಿಂದ ರಾಜ್‌ವರ್ಧನ್‌ ಪರಿಚಯ. 


ರಾಜ್‌ವರ್ಧನ್‌ ನಟನೆಯ ‘ಹಿರಣ್ಯ’ ಚಿತ್ರಕ್ಕೆ ಜುಲೈ 19ಕ್ಕೆ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್‌ ಅನ್ನು ಧನಂಜಯ್‌ ಹಾಗೂ ರಾಗಿಣಿ ಬಿಡುಗಡೆ ಮಾಡಿದರು. ಧನಂಜಯ್‌, ‘ನನಗೆ 10 ವರ್ಷಗಳಿಂದ ರಾಜ್‌ವರ್ಧನ್‌ ಪರಿಚಯ. ಅವತ್ತಿನಿಂದ ಇವತ್ತಿನವರೆಗೂ ನಟನಾಗಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದಾನೆ. ಒಳ್ಳೆ ಬರವಣಿಗೆ, ಸ್ಕ್ರಿಪ್ಟ್, ನಿರ್ದೇಶಕರು, ಅದನ್ನು ಅಷ್ಟೇ ಚೆನ್ನಾಗಿ ಪ್ರೀತಿಸುವ ನಿರ್ಮಾಪಕರು ಇದ್ದಾಗ ಮಾತ್ರ ಒಳ್ಳೆ ಸಿನಿಮಾವಾಗುತ್ತದೆ. ರಾಜವರ್ಧನ್‌ಗೆ ಹಿರಣ್ಯ ಸಿನಿಮಾ ಮೂಲಕ ಒಳ್ಳೆ ಶುಕ್ರವಾರ ಸಿಗಲಿ’ ಎಂದರು.

ರಾಜವರ್ಧನ್‌, ‘ಶಿವಣ್ಣ ಟ್ರೇಲರ್ ನೋಡಿ ಇಷ್ಟಪಟ್ಟು ಮನೆಗೆ ಕರೆಸಿ ಇಡೀ ತಂಡಕ್ಕೆ ಒಳ್ಳೆ ಉಪಚಾರ ಮಾಡಿದ್ದು ಖುಷಿ ಆಯಿತು. ಒಳ್ಳೆಯ ಕತೆ ಇರುವ ಸಿನಿಮಾ ಇದು. ‘ಹಿರಣ್ಯ’ ಹೆಸರು ಧನಂಜಯ್‌ ಕೊಟ್ಟ ಹೆಸರು’ ಎಂದು ಹೇಳಿದರು. ನಿರ್ದೆಶಕ ಪ್ರವೀಣ್‌, ‘ಕ್ರೂರ ಗುಣ ಹೊಂದಿದ ಪಾತ್ರವನ್ನಿಟ್ಟುಕೊಂಡು ಕತೆ ಮಾಡಿದ್ದೇನೆ’ ಎಂದರು. ರಿಹಾನಾ ನಾಯಕಿ. ಬಿಗ್‌ಬಾಸ್‌ ಸ್ಪರ್ಧಿ ದಿವ್ಯಾ ಸುರೇಶ್ ವಿಶೇಷ ಪಾತ್ರ ಮಾಡಿದ್ದಾರೆ. ವಿಘ್ನೇಶ್ವರ್‌ ಹಾಗೂ ವಿಜಯ್‌ ಕುಮಾರ್‌ ನಿರ್ಮಾಪಕರು. ಜಾಕ್‌ ಮಂಜು ಚಿತ್ರ ವಿತರಣೆ ಮಾಡಲಿದ್ದಾರೆ.

Latest Videos

undefined

ತಾಯಿ ಮಮತೆಯ ಹಾಡಿಗೆ ಮೆಚ್ಚುಗೆ: ರಾಜವರ್ಧನ್ ನಟಿಸಿರುವ ‘ಹಿರಣ್ಯ’ ಚಿತ್ರದ ತಾಯಿ ಮಮತೆ ಸಾರುವ ಹಾಡು ಬಿಡುಗಡೆಯಾಗಿದ್ದು, ಸಿನಿ ಪ್ರೇಮಿಗಳ ಮೆಚ್ಚುಗೆ ಪಡೆದಿದೆ. ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ನೀಡಿದ್ದು, ಸುಪ್ರಿಯಾ ರಾಮ್ ಹಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿದ್ದಾರೆ. ಟೀಸರ್ ಮೂಲಕ ಭರವಸೆ ಹುಟ್ಟಿಸಿರುವ ಈ ಚಿತ್ರವನ್ನು ಪ್ರವೀಣ್ ಅವ್ಯೂಕ್ ನಿರ್ದೇಶಿಸಿದ್ದಾರೆ. ವಿಘ್ನೇಶ್ವರ್ ಮತ್ತು ವಿಜಯ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಜುಲೈ 19ರಂದು ಸಿನಿಮಾ ರಿಲೀಸ್ ಆಗಲಿದೆ.

ರಾತ್ರೋ ರಾತ್ರಿ ರೊಚ್ಚಿಗೆದ್ದು ಪೋಟೋಶೂಟ್‌ ಮಾಡಿಸಿದ 'ಹೆಂಗೆ ನಾವು' ನಟಿ ರಚನಾ ಇಂದರ್‌: ಆದರೂ ಬೇಜಾರಂತೆ...

ನಿರ್ದಯ ವ್ಯಕ್ತಿತ್ವದ ರಾಣಾ ಎಂಬ ಪಾತ್ರದ ಸುತ್ತ ಸಿನಿಮಾ ಕಥೆ ಇದೆ. ಸಿಂಹದ ವೀಡಿಯೋ ನೋಡುತ್ತಿದ್ದಾಗ ಕಥೆಯ ಸಾಲು ಹೊಳೆಯಿತು. ಚಿತ್ರ ಕೇವಲ ಆ್ಯಕ್ಷನ್ ಮೇಲೆ ನಿಂತಿಲ್ಲ. ಎಲ್ಲ ಬಗೆಯ ಎಮೋಶನ್‌ಗಳಿವೆ’ ಎಂದು ನಿರ್ದೇಶಕ ಪ್ರವೀಣ್ ಅವ್ಯುಕ್ತ ತಿಳಿಸಿದರು. ನಾಯಕ ರಾಜವರ್ಧನ್‌, ‘ನಾನು ನಟಿಸಿರುವ ರಾಣಾ, ದೈಹಿಕವಾಗಿ ಸ್ಟ್ರಾಂಗ್ ಇದ್ದರೂ ಮಾನಸಿಕವಾಗಿ ದುರ್ಬಲವಾಗಿರುವ ಪಾತ್ರ. ಈ ಪಾತ್ರದ ಬಗ್ಗೆ ಅರಿತುಕೊಳ್ಳುವುದೆ ಚಾಲೆಂಜಿಂಗ್ ಆಗಿತ್ತು. ಉಳಿದಂತೆ ಈ ಸಿನಿಮಾದ ನಾಯಕಿಯಾಗಿ ದಿವ್ಯಾ ಸುರೇಶ್‌ ಉತ್ತಮ ನಟನೆ ತೋರಿದ್ದಾರೆ. ಆದರೆ ಅವರನ್ನು ನಾಯಕಿ ಎಂದು ಪರಿಗಣಿಸದೇ ವೇಶ್ಯೆಯ ಪಾತ್ರಧಾರಿಯಾಗಿ ಅಷ್ಟೇ ನೋಡಲಾಗುತ್ತದೆ, ರಿಹಾನಾ ಅವರನ್ನು ನಾಯಕಿಯಾಗಿ ಬಿಂಬಿಸಲಾಗಿದೆ ಎಂದು ದಿವ್ಯಾ ಸಿಟ್ಟಾಗಿದ್ದಾರೆ. ಆದರೆ ರಿಹಾನಾ ಕೆಲವು ದೃಶ್ಯಗಳಲ್ಲಷ್ಟೇ ಕಾಣಿಸಿಕೊಳ್ಳುತ್ತಾರೆ, ಅವರು ನಾಯಕಿಯಲ್ಲ’ ಎಂದು ಈ ಹಿಂದೆ ತಿಳಿಸಿದ್ದಾರೆ.

click me!