Latest Videos

ಗಲಾಟೆ ಮಾಡ್ಕೊಂಡು, ಹೊಡೆದಾಡ್ಕೊಂಡು ದೂರ ಆಗಲ್ಲ.. ಎಷ್ಟೋ ಕೇಸಲ್ಲಿ ಕೊಲೆ ಆಗೋಗುತ್ತೆ: ಚಂದನ್ ಶೆಟ್ಟಿ

By Vaishnavi ChandrashekarFirst Published Jun 17, 2024, 9:31 AM IST
Highlights

 ಡಿವೋರ್ಸ್ ಆಯ್ತು ಅಂತ ಮಾತು ಬಿಡಲು ಆಗಲ್ಲ...ಒಂದೇ ಕ್ಷೇತ್ರದಲ್ಲಿ ಇರುವ ಕಾರಣ ಹಾಯ್‌ ಬೈ ಹೇಳಬೇಕು ಎಂದು ಚಂದನ್ ಶೆಟ್ಟಿ.....

ವಿದ್ಯಾರ್ಥಿ ವಿದ್ಯಾರ್ಥಿನಿಯರೆ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಟನಾಗಿ ಕಾಲಿಡುತ್ತಿರುವ ಚಂದನ್ ಶೆಟ್ಟಿ ಸಿನಿಮಾ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಚಂದನ್ ಮತ್ತು ನಿವೇದಿತಾ ಗೌಡ ಡಿವೊರ್ಸ್‌ ವಿಚಾರ ಸುದ್ದಿಯಲ್ಲಿತ್ತು. ಪ್ರೆಸ್‌ಮೀಟ್ ಮೂಲಕ ಸ್ಪಷ್ಟನೆ ಕೊಟ್ಟರೂ ನಿವಿ ಕೈ ಹಿಡಿದು ನಡೆದುಕೊಂಡು ಹೋಗುತ್ತಿರುವ ವಿಡಿಯೋ ಗೊಂದಲ ಸೃಷ್ಟಿ ಮಾಡಿದೆ. 

'ನಿವೇದಿತಾ ಗೌಡ ಜೊತೆ ಖಂಡಿತಾ ಫ್ರೆಂಡ್ಸ್ ಆಗಿ ಇರ್ತೀನಿ ಆಗಿರಲೇ ಬೇಕು ಏಕೆಂದರೆ ಇಷ್ಟು ವರ್ಷ ಮದುವೆಯಾಗಿ ಗಂಡ ಹೆಂಡತಿ ರೀತಿ ಸಂಸಾರ ಮಾಡಿಕೊಂಡು ಈಗ ಸರಿಯಾಗಿ ನಡೆಯುತಿಲ್ಲ ಅಂತ ಗಲಾಟಿ ಮಾಡ್ಕೊಂಡು ಒಬ್ಬರನ್ನೊಬ್ಬರು ಹೊಡೆದಾಡಿಕೊಂಡು ...ಎಷ್ಟೋ ಕೇಸ್‌ಗಳಲ್ಲಿ ನೋಡಿದ್ದೀವಿ ಮಾರಣಾಂತಿಕವಾಗಿ ಹಲ್ಲೆ ಕೂಡ ನಡೆಯುತ್ತದೆ ಅಲ್ಲದೆ ಕೋರ್ಟ್‌ನಲ್ಲಿ ಎಷ್ಟೋ ಕೇಸ್‌ಗಳು ಈಗಲೂ ನಡೆಯುತ್ತಿರುತ್ತದೆ ಇದರಿಂದ ಕೊಲೆಗಳು ನಡೆದು ಹೋಗಿದೆ. ಇದೆಲ್ಲಾ ಬೇಕಾ? ಇದೆಲ್ಲಾ ನಮಗೆ ಅವಶ್ಯಕತೆ ಇಲ್ಲ. ನಾವು ತುಂಬಾ ಬೆಳೆದಿದ್ದೀವಿ ಈ ಸಮಾಜ ಕೂಡ ಬೆಳೆದಿದೆ ಅಲ್ಲದೆ ಮನುಷ್ಯನ ಯೋಚನೆಯ ಶಕ್ತಿ ತುಂಬಾ ಬೆಳೆದಿದೆ. ನಾವು ಇನ್ನು ಮುಂದೆ ಜೀವನದಲ್ಲಿ ಒಟ್ಟಿಗೆ ಇರಲು ಅಗುವುದಿಲ್ಲ ಎಂದು ಅರ್ಥವಾಗಿತ್ತು ತಕ್ಷಣವೇ ಕೂತು ಮಾತನಾಡಿ ಬಗೆಹರಿಸಿಕೊಂಡು ಸಿಂಪಲ್ ಆಗಿ ಮುಗಿಸಿದ್ದೀವಿ. ಒಂದೇ ಕ್ಷೇತ್ರದಲ್ಲಿ ಇರುವ ಕಾರಣ ಯಾವತ್ತಿದ್ದರೂ ಒಂದಲ್ಲ ಒಂದು ದಿನ ಎದುರು ಬರುತ್ತೀವಿ ಹೀಗಾಗಿ ಹಾಯ್‌ ಬಾಯ್ ಹೇಳಿಕೊಂಡು ಸುಮ್ಮನೆ ಇರುತ್ತೀವಿ' ಎಂದು ಚಂದನ್ ಶೆಟ್ಟಿ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

N ಮತ್ತು C ಅಕ್ಷರದವರು ಮದ್ವೆ ಆದ್ರೆ ಹೊಂದಾಣಿಕೆ ಇರಲ್ಲ ಡಿವೋರ್ಸ್ ಆಗುತ್ತೆ: ಮುನ್ಸೂಚನೆ ಕೊಟ್ಟಿದ್ರಾ ಪ್ರಶಾಂತ್

'ಕೈ ಹಿಡಿದುಕೊಂಡು ನಡೆದುಕೊಂಡು ಬರುತ್ತಿರುವ ವಿಡಿಯೋ ವೈರಲ್ ಆಗುತ್ತಿರುವುದುಕ್ಕೆ ಚಂದನ್ ರಿಯಾಕ್ಟ್ ಮಾಡಿದ್ದಾರೆ. 'ಒಂದು ಹುಡುಗಿಯನ್ನು ಪ್ರೊಟೆಕ್ಟ್‌ ಮಾಡುವುದು ನನ್ನ ಧರ್ಮ ಆಗಿರುತ್ತದೆ. ಇಷ್ಟು ದಿನ ಒಟ್ಟಿಗೆ ಇದ್ದು ಸಂಸಾರ ಮಾಡಿದ್ದೀವಿ ಡಿವೋರ್ಸ್ ಆದ ತಕ್ಷಣ ನೀನು ಬೇರೆ ನಾನು ಬೇರೆ ಅಂತ ಓಡಿ ಹೋದರೆ ಚೆನ್ನಾಗಿರುವುದಿಲ್ಲ...ನಾನು ಆ ತರದ ವ್ಯಕ್ತಿನೂ ಅಲ್ಲ. ತುಂಬಾ ಜನ ಅಲ್ಲಿ ವಿಡಿಯೋ ಮತ್ತು ಫೋಟೋ ತೆಗೆಯಲು ಬಂದಾಗ ನಮಗೂ ಆ ರೀತಿ ಪ್ರೆಶರ್‌ ಇತ್ತು ಮುಜುಗರ ಅನಿಸುತ್ತಿತ್ತು ಹಾಗಾಗಿ ನಿವೇದಿತಾ ಅವರನ್ನು ಪ್ರೊಟೆಕ್ಟ್‌ ಮಾಡುವುದು ನಮ್ಮ ಧರ್ಮ ಆಗಿತ್ತು ಮಾಡಿದ್ದೀನಿ' ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

click me!