
ಕನ್ನಡ ಚಿತ್ರರಂಗ ಬಹುನಿರೀಕ್ಷಿತ ಸಿನಿಮಾ ತಿಮ್ಮಯ್ಯ ಆಂಡ್ ತಿಮ್ಮಯ್ಯ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆಂಕರ್ ಅನುಶ್ರೀ ಯುಟ್ಯೂಬ್ ಚಾನೆಲ್‌ನಲ್ಲಿ ಹಿರಿಯ ನಟ ಅನಂತ್ ನಾಗ್ ಮಾತನಾಡಿದ್ದಾರೆ. ಸಿನಿ ಜರ್ನಿ ಹೇಗಿತ್ತು, ಬಾಳ ಸಂಗಾತಿ ಆಯ್ಕೆ ಮಾಡಿಕೊಂಡ ಕ್ಷಣ ಪ್ರತಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಪತ್ನಿ ಗಾಯಿತ್ರಿ ತಮ್ಮ ಲೈಫ್ ಬ್ಯಾಕ್‌ಬೋನ್ ಎಂದಿದ್ದಾರೆ.
ಅನಂತ್ ನಾಗ್ ಮಾತು:
'ನನ್ನ ಹೆಂಡತಿನ ಮದುವೆ ಅದಾಗ ಒಂದು ಕಂಡಿಷನ್ ಹಾಕಿದ್ದರು...ನನ್ನನ್ನು ಸಿನಿಮಾ ಕೆಲಸಕ್ಕೆ ಫೋರ್ಸ್ ಮಾಡಬಾರದು ಅನಿಸಿದ್ದರೆ ಮಾಡುತ್ತೀನಿ ಇಲ್ಲ ಅಂದ್ರೆ ಇಲ್ಲ ಹಾಗೆ ಹೇಳಿ ಸಿನಿಮಾ ಆಕ್ಟಿಂಗ್ ನಿಲ್ಲಿಸಿ ಬಿಟ್ಟರು. ಈಗ ಅವರು ಹೌಸ್‌ವೈಫ್ ಸಿನಿಮಾ ಕೆಲಸಗಳನ್ನು ನಿಲ್ಲಿಸಿಬಿಟ್ಟರು ಆದರೆ ನನ್ನ ಡೇಟ್ಸ್, ಫಿನಾನ್ಸ್ ಮತ್ತು ಟ್ಯಾಕ್ಸ್ ನೋಡಿಕೊಳ್ಳುತ್ತಾರೆ. ಆಕೆ 75% ಕೆಲಸ ಮಾಡುತ್ತಾರೆ ನಾನು ಕೇವಲ 25% ಕೆಲಸ ಮಾಡುವುದು. ನಾನು ನಟನೆ ಬಿಟ್ಟರೆ ಬೇರೆ ಏನೂ ಕೆಲಸ ಮಾಡುವುದಿಲ್ಲ' ಎಂದು ಅನಂತ್ ನಾಗ್ ಹೇಳಿದ್ದಾರೆ.
ತಿಮ್ಮಯ್ಯ ಆಂಡ್ ತಿಮ್ಮಯ್ಯ:
ತಿಮ್ಮಯ್ಯ ಆಂಡ್ ತಿಮ್ಮಯ್ಯ ಸಿನಿಮಾ ತಾತ ಮೊಮ್ಮಗನ ಕಥೆ ಇದರಲ್ಲಿ ಬದುಕಿಗೆ ಏನು ಬೇಕು ಎಂದು ಅರ್ಥ ಮಾಡಿಕೊಳ್ಳುವ ಕ್ಷಣಗಳನ್ನು ಅರವಿನ ಕಥೆ ಹೇಳುತ್ತದೆ. ಜೀವನದಲ್ಲಿ ಯಾರು ಹಿತರು ಯಾರು ಒಗ್ಗದವರು ಯಾರಿಗೆ ಏನನ್ನು ಕೊಡಬೇಕು ಯಾರಿಂದ ಏನನ್ನು ದಕ್ಕಿಸಿಕೊಳ್ಳಬೇಕು ಎಂದು ಜನರಿಗೆ ತಿಳಿಸುತ್ತದೆ. ಸಂಬಂಧಗಳು ಎಷ್ಟು ಮುಖ್ಯ ಎಂದು ಹೇಳುತ್ತದೆ.
Thimayya & Thimayya Review ಅನಂತ್‌ನಾಗ್ ಉಪಸ್ಥಿತಿಯೇ ಉಡುಗೊರೆ
'85 ವರ್ಷದ ಘಾಟಿ ಮುದುಕ ತಿಮ್ಮಯ್ಯ. ಮಗನ ಹೆಂಡತಿ ತೀರಿಕೊಂಡ ದಿನ ಮಗ, ಮೊಮ್ಮಗನ ಜವಾಬ್ದಾರಿ ಎಲ್ಲಿ ತನ್ನ ಮೇಲೆ ಬರುತ್ತದೋ ಎಂದು ಹೆದರಿ ವಿದೇಶಕ್ಕೆ ಹೊರಟ ಸ್ವಾರ್ಥಿ ಮುದುಕ. ಜೀವನವನ್ನು ಪೂರ್ತಿಯಾಗಿ ಅನುಭವಿಸಬೇಕು ಅನ್ನುವುದು ಅವನ ಆಸೆ. ನನಗೂ ಅವನ ಥರಾನೇ ಬದುಕಬೇಕಿತ್ತು ಅಂತ ಅನ್ನಿಸಿದ ಪಾತ್ರ ಅದು. ಹಾಗಾಗಿ ತುಂಬಾ ಇಷ್ಟಪಟ್ಟು ಆ ಪಾತ್ರವೇ ಆಗಿದ್ದೆ.ಈ ಸಿನಿಮಾದ ನಿರ್ದೇಶಕ ಸಂಜಯ್ ಶರ್ಮ ಆ್ಯಡ್ ಫಿಲಂ ಮಾಡುತ್ತಿದ್ದವರು. ಮುಂಬೈಯಲ್ಲಿದ್ದಾಗ ಅನೇಕ ಹಳೆಯ ಕೆಫೆಗಳ ಡಾಕ್ಯುಮೆಂಟರಿ ಮಾಡಿದ್ದರು. ಆ ಕೆಫೆಗಳ ಕತೆಗಳನ್ನೆಲ್ಲಾ ಕೇಳಿ ಕೇಳಿ ಮೊದಲ ಬಾರಿಗೆ ಆಪ್ತ ಅನ್ನಿಸುವ ಸಿನಿಮಾ ಕತೆ ಬರೆದಿದ್ದಾರೆ. ಅವರು ಮೊದಲು ಬಂದು ನಿಮ್ಮನ್ನೇ ಗಮನದಲ್ಲಿಟ್ಟುಕೊಂಡು ಪಾತ್ರ ಬರೆದಿದ್ದೇನೆ, ನೀವೇ ಮಾಡಬೇಕು ಎಂದು ಕೇಳಿಕೊಂಡಿದ್ದರು. ನಾನು ಸ್ಕಿ್ರಪ್‌್ಟಕೇಳಿ ತರಿಸಿಕೊಂಡು ಓದಿದೆ. ಕತೆ ತುಂಬಾ ಚೆನ್ನಾಗಿ ಮಾಡಿದ್ದಾರೆ. ಒಂದು ಕೆಫೆಯ ಕತೆ. ತಾತ ಮೊಮ್ಮಗನ ಮಧ್ಯದ ಘರ್ಷಣೆ, ಬಾಂಧವ್ಯದ ಕತೆ. ಸಿನಿಮಾದಲ್ಲಿ ಆತ ಟ್ರಂಪೆಟ್ ನುಡಿಸುತ್ತಾನೆ. ರಾತ್ರೋರಾತ್ರಿ ಎದ್ದು ಕೂತು ಟ್ರಂಪೆಟ್ ನುಡಿಸಿ ಕಾಟ ಕೊಡುತ್ತಾನೆ. ಅಂಥಾ ದುಷ್ಟತಿಮ್ಮಯ್ಯ. ನಾನು ಎರಡು ದಿನ ಟ್ರಂಪೆಟ್ ಕಲಿತು ಟ್ರಂಪೆಟ್ ನುಡಿಸುವ ನಟನೆ ಮಾಡಿದೆ. ಇಡೀ ಸಿನಿಮಾವನ್ನು ತುಂಬಾ ವಿಶಿಷ್ಟವಾಗಿ ಚಿತ್ರಿಸಿದ್ದಾರೆ’ ಎನ್ನುತ್ತಾರೆ ಅನಂತ್‌ನಾಗ್.
Exclusive Interview ಈವರೆಗೆ ಇಂಥಾ ಪಾತ್ರ ಮಾಡಿಲ್ಲ: ಅನಂತ್‌ನಾಗ್
ಅನುಶ್ರೀ:
ಕನ್ನಡ ಜನಪ್ರಿಯ ನಿರೂಪಕಿ ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್‌ಗಳನ್ನು ಮಾಡಿರುವ ಪ್ರತಿಯೊಂದು ಸಂದರ್ಶನವೂ ವಿಭಿನ್ನವಾಗಿರುತ್ತದೆ. ಚಿತ್ರವನ್ನು ಮತ್ತೊಂದು ರೀತಿಯಲ್ಲಿ ಕಾಣಬಹುದು ಎನ್ನುವ ದೃಷ್ಠಿಯಲ್ಲಿ ಯಾರಿಗೂ ಗೊತ್ತಿರದ ಮಾಹಿತಿಯನ್ನು ರಿವೀಲ್ ಮಾಡಿಸುತ್ತಾರೆ. ಅನಂತ್ ನಾಗ್ ಸಂದರ್ಶನ್ ಸಖತ್ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.