ನೆಚ್ಚಿನ ನಟಿಯರ ಲಿಸ್ಟಲ್ಲಿ ಪತ್ನಿಯನ್ನೇ ಮಿಸ್ ಮಾಡಿದ ಸೈಫ್‌; ಕರೀನಾ ಕಪೂರ್ ಕೊಟ್ಟ ರಿಯಾಕ್ಷನ್ ವೈರಲ್!

By Vaishnavi ChandrashekarFirst Published Dec 5, 2022, 9:24 AM IST
Highlights

ರೆಡ್ ಸೀ ಫಿಲ್ಮ್ ಫೆಸ್ಟಿವಲ್‌ನಲ್ಲಿ ವುಮೆನ್ ಇನ್ ಸಿನಿಮಾ ಕಾರ್ಯಕ್ರಮದಲ್ಲಿ ಸೈಫ್‌ ಮತ್ತು ಕರೀನಾ ಕಪೂರ್ ಭಾಗವಹಿಸಿದ್ದರು....ಈ ವೇಳೆ ನಡೆಯಿತ್ತು ಫನ್ನಿ ಘಟನೆ...
 

ಬಾಲಿವುಡ್ ಸೆಲೆಬ್ರಿಟಿ ಕಪಲ್ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಜೆಡ್ಡಾದಲ್ಲಿ ನಡೆದ ರೆಡ್‌ ಸೀ ಫಿಲ್ಮ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವುಮೆನ್‌ ಇನ್ ಸಿನಿಮಾ ಈವೇಂಟ್ ಆರಂಭವಾಗುವ ಮುನ್ನ ಮಾಧ್ಯಮ ಸ್ನೇಹಿತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಸೈಫ್‌ ಆಂಡ್ ಕರೀನಾ ನಡುವೆ ನಡೆದ ಫನ್ನಿ ಕ್ಷಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಪತ್ನಿ ಹೆಸರು ಮರೆತಿದ್ದು ಸರಿಯೇ? 

ವುಮೆನ್ ಇನ್ ಸಿನಿಮಾ ಈವೆಂಟ್ ಆಗಿರುವ ಕಾರಣ ಚಿತ್ರರಂಗದಲ್ಲಿ ಮಹಿಳೆಯರ ಕೊಡುಗೆ ಎಷ್ಟಿದೆ ಎಂದು ಪತ್ರಕರ್ತರು ಪ್ರಶ್ನೆ ಮಾಡಿದ್ದರು. 'ಸಿನಿಮಾ ಆರಂಭವಾದ ಕ್ಷಣದಿಂದಲ್ಲೂ ಮಹಿಳೆಯುರ ಇದ್ದರು ಅವರಿಲ್ಲದೆ ಸಿನಿಮಾ ರಂಗ ಖಾಲಿ ಖಾಲಿ. ಸಿನಿಮಾ ಅಂತ ಒಂದು ಕ್ಷಣ ಯೋಚನೆ ಮಾಡಲು ಶುರು ಮಾಡಿದ್ದರೆ ಸಾವಿರಾರೂ ನಾಯಕಿಯರ ಹೆಸರು ನೆನಪಾಗುತ್ತದೆ. ಆಗಿನ ಕಾಲದಿಂದ ಹೇಳಬೇಕು ಅಂದ್ರೆ ಡೈಟ್ರಿಚ್ ರಿಂದ ಆಡ್ರೆ.... ಹೆಪ್ಬರ್ನ್ ರಿಂದ ಚಾರ್ಲಿಜ್ ಥರಾನ್' ಎಂದು ಹೇಳುತ್ತಿದ್ದ ಸೈಫ್‌ ಮಾತುಗಳನ್ನು ಅರ್ಧಕ್ಕೆ ನಿಲ್ಲಿಸಿದ ಕರೀನಾ 'ನಿಮ್ಮ ಪತ್ನಿ ಕೂಡ' ಎನ್ನುತ್ತಾರೆ. ತಕ್ಷಣವೇ ಸೈಫ್ 'ಹೌದು ನನ್ನ ಬ್ಯೂಟಿಫುಲ್ ಪತ್ನಿ ಕೂಡ ಸೇರಿಕೊಳ್ಳುತ್ತಾರೆ' ಎಂದು ಉತ್ತರಿಸಿದ್ದಾರೆ. ಈ ಫನ್ನಿ ಕ್ಷಣ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಈ ವೇಳೆ ತಾಯಿ ಶರ್ಮಿಳಾ ಟ್ಯಾಗೋರ್‌ ಬಗ್ಗೆನೂ ಸೈಫ್ ಮಾತನಾಡಿದ್ದಾರೆ.'ನನ್ನ ತಾಯಿ ಮೊದಲ ಸಿನಿಮಾ ಅಪುರ್ ಸಂಸಾರ್ ಮಾಡಿದಾಗ 16 ವರ್ಷ. ಸತ್ಯಜಿತ್ ರೇ ಅವರಿಗೆ ಜೋಡಿಯಾಗಿದ್ದರು. ಹೀಗಾಗಿ ಸ್ತ್ರೀ ಸಂವೇದನೆ ಮತ್ತು ಆಕ್ರಮಣಶೀಲತೆ ಪ್ರಕೃತಿಯ ಸಂಪೂರ್ಣ ಅಂಶವು  ನನಗೆ ಮಹಿಳೆಯರಿಂದ ಅರ್ಥವಾಗಿದೆ ಎಂದು ಭಾವಿಸುತ್ತೇನೆ' ಎಂದರು.

ಕರೀನಾ ಕಪೂರ್ ಮಾತು:

'ವಿಶ್ವಾದ್ಯಂತ ನಾಯಕಿರು ಈ ಕಾರ್ಯಕ್ರಮಕ್ಕೆ ಆಗಮಿಸಿ ದೊಡ್ಡ ಆಚರಣೆ ಮಾಡಲಿದ್ದಾರೆ. ಇಂಡಿಯಾದಲ್ಲಿ ಮಾತ್ರವಲ್ಲದೆ ಬೇರೆ ಭಾಷೆ ಸಿನಿಮಾಗಳಲ್ಲೂ ಮಹಿಳೆಯರು ಸಿನಿಮಾರಂಗವನ್ನು ರೂಲ್ ಮಾಡುತ್ತಿದ್ದಾರೆ. ಆ ಕ್ಷಣವನ್ನು ಇಲ್ಲಿ ಆಚರಿಸುತ್ತೇವೆ. ಪ್ರತಿಯೊಬ್ಬರು ಚಲದಿಂದ ಧೈರ್ಯದಿಂದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಅವರಿಗೆ ಈ ಸ್ಪೆಷಲ್ ದಿನ ಸಮರ್ಪಣೆ' ಎಂದು ಕರೀನಾ ಕಪೂರ್ ಹೇಳಿದ್ದಾರೆ.

ಅವಕಾಶ ಸುಲಭವಾಗಿ ಸಿಕ್ಕಿತು, ನಂತರದ ಹಾದಿ ಭಯಾನಕ; ಸ್ಟಾರ್ ಕಿಡ್ಸ್ ಕಷ್ಟ ಬಿಚ್ಚಿಟ್ಟ ತುಷಾರ್ ಕಪೂರ್

ಈ ವರ್ಷ ನಡೆಯುತ್ತಿರುವ ರೆಡ್‌ ಸೀ ಫಿಲ್ಮ ಫೆಸ್ಟಿವಲ್‌ನಲ್ಲಿ ಸೈಫ್‌ ಮತ್ತು ಕರೀನಾ ಕಪೂರ್ ಭಾಗವಹಿಸುತ್ತಿರುವುದು ಎರಡನೇ ಸಲ. ಶಾರುಖ್‌ ಖಾನ್, ಪ್ರಿಯಾಂಕಾ ಚೋಪ್ರಾ, ಕಾಜೋಲ್, ಅಕ್ಷಯ್ ಕುಮಾರ್, ಸೋನಂ ಕಪೂರ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ರಣಬೀರ್ ಕಪೂರ್ ಮತ್ತು ಹೃತಿಕ್‌ ರೋಷನ್‌ ಆಗಮಿಸಲಿದ್ದಾರೆ.

Boycott Trend ವಿರುದ್ಧ ಸೈಫ್‌ ಗರಂ:

 ಸೈಫ್ ಅಲಿ ಖಾನ್ ಬಾಲಿವುಡ್‌ನ ಬಹಿಷ್ಕಾರ ಸಂಸ್ಕೃತಿಗೆ ಬಗ್ಗೆ ಹೆಚ್ಚು  ಒತ್ತು ನೀಡಿ ಮಾತನಾಡಿದರು. ಚಿತ್ರಗಳನ್ನು ಟಾರ್ಗೆಟ್ ಮಾಡಿ, ಇದೊಂದು ಕೆಟ್ಟ ಸಿನಿಮಾ, ಬ್ಯಾನ್ ಮಾಡಬೇಕು ಅಥವಾ ರದ್ದು ಮಾಡಬೇಕು ಎಂದು ಬೈಕಾಟ್‌ ಮಾಡುತ್ತಿರುವ ಈ ವಿಭಾಗದ ಜನರು, ಇದು ನಿಜವಾದ ಪ್ರೇಕ್ಷಕರಲ್ಲ ಎಂದು ನನಗೆ ಖಾತ್ರಿಯಿದೆ. ಇದು ಸರಿಯಲ್ಲ, ಇದರ ವಿರುದ್ಧ ಬಾಲಿವುಡ್‌ನಲ್ಲಿಯೂ ಒಗ್ಗಟ್ಟು ಇಲ್ಲ ಎಂದು ಬೇಸರವಿದೆ.ಆ ಕ್ರಮಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ನಾವು ಹೊಂದುವವರೆಗೆ, ಈ ಬಾಯ್‌ಕಟ್‌ ಸಂಸ್ಕೃತಿಯು (Boycott Cutlrure) ಎಷ್ಟು ಪರಿಣಾಮಕಾರಿ ಎಂದು ನಮಗೆ ನಿಜವಾಗಿಯೂ ತಿಳಿದಿರುವುದಿಲ್ಲ. ಬ್ಯಾನ್‌ ಅಥವಾ ಬಾಯ್‌ಕಾಟ್‌ ಸಂಸ್ಕೃತಿ ಭಯಾನಕವಾಗಿದೆ ಮತ್ತು ಇದು ವಿಶ್ವಾದ್ಯಂತ ವಿದ್ಯಮಾನವಾಗಿದೆ.ಬಾಯ್‌ಕಾಟ್‌ ಅಥವಾ ಬಹಿಷ್ಕಾರ ಎಂದು ಹೇಳುವವರು ನಿಜವಾಗಿಯೂ ಸಿನಿ ಜಗತ್ತನ್ನು ಪ್ರೀತಿಸುವ, ಗೌರವಿಸುವ ಪ್ರೇಕ್ಷಕರಲ್ಲ. ಜನರು ಮನರಂಜನೆಯನ್ನು ಇಷ್ಟಪಡುತ್ತಾರೆ, ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ, ಆದರೆ ಈ ಬಹಿಷ್ಕಾರದಿಂದಾಗಿ ಅವರು ಚಲನಚಿತ್ರಗಳನ್ನು ನೋಡಲು ಹೋಗುವುದಿಲ್ಲ. ನಮ್ಮ ದೇಶದಲ್ಲಿ ನಿಜವಾಗಿಯೂ ಹೆಚ್ಚಿನ ಆಯ್ಕೆಗಳಿಲ್ಲ. ಪಾರ್ಕ್‌ನಲ್ಲಿ ನಡೆಯಲು ಅಥವಾ ನಿಮ್ಮ ಮಕ್ಕಳೊಂದಿಗೆ ದೋಣಿ ವಿಹಾರಕ್ಕೆ ಹೋಗಲು ಸಾಧ್ಯವಿಲ್ಲ. ನಮ್ಮ ನಗರಗಳಲ್ಲಿ ಮನರಂಜನೆ ಸೀಮಿತವಾಗಿದೆ, ಆದ್ದರಿಂದ ಚಲನಚಿತ್ರಗಳನ್ನು ನೋಡುವುದು ಮನರಂಜನೆಗೆ ಸರಿಯಾದ ಆಯ್ಕೆಯಾಗಿದೆ ಎಂದು ಸೈಫ್‌ ಹೇಳಿದ್ದಾರೆ.
 

click me!