ಹನ್ನೊಂದು ದಿನ ಮೊದಲೇ ಅರಮನೆ ಮೈದಾನದಲ್ಲಿ ರೆಬೆಲ್ ಸ್ಟಾರ್ ಪುಣ್ಯತಿಥಿ!

Published : Nov 14, 2019, 09:38 AM IST
ಹನ್ನೊಂದು ದಿನ ಮೊದಲೇ ಅರಮನೆ ಮೈದಾನದಲ್ಲಿ ರೆಬೆಲ್ ಸ್ಟಾರ್ ಪುಣ್ಯತಿಥಿ!

ಸಾರಾಂಶ

ಕನ್ನಡ ಚಿತ್ರರಂಗದ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಅಗಲಿ ನ.24ಕ್ಕೆ ಒಂದು ವರ್ಷ. ಮೊದಲ ವರ್ಷದ ಪುಣ್ಯತಿಥಿ ಕಾರ್ಯವನ್ನು ಚಿತ್ರರಂಗದ ಗಣ್ಯರು, ಆಪ್ತರು, ನೆಂಟರು ಹಾಗೂ ಸ್ನೇಹಿತರ ಸಮುಖದಲ್ಲಿ ಆಚರಿಸಲು ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ನಿರ್ಧರಿಸಿದ್ದಾರೆ. 

ನ.14ರಂದು ಬೆಂಗಳೂರಿನ ಅರಮನೆ ಮೈದಾನದರಲ್ಲಿರುವ ಗಾಯಿತ್ರಿ ವಿಹಾರದ ವೃಕ್ಷ ಹಾಲ್‌ನಲ್ಲಿ ಅಂಬರೀಶ್ ಅವರ ಮೊದಲ ವರ್ಷದ ಪುಣ್ಯತಿಥಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ನವೆಂಬರ್ 14 ಗುರುವಾರ ವರ್ಷದ ಪುಣ್ಯತಿಥಿಗೆ ಒಳ್ಳೆಯದಿನವಾದ ಕಾರಣ ಹನ್ನೊಂದು ದಿನಗಳ ಮುಂಚಿತವಾಗಿಯೆ ಪುಣ್ಯಕಾರ್ಯ ಮಾಡಲಾಗುತ್ತಿದೆ. 

ಅಯ್ಯೋ! ಇಷ್ಟೋಂದ ಅಂಬಿ ಪುತ್ರನ ಸಂಭಾವನೆ ?

ಈ ಕಾರ್ಯದಲ್ಲಿ ಕುಟುಂಬದ ಜೊತೆಗೆ ಚಿತ್ರರಂಗದ ಗಣ್ಯರು, ಸ್ನೇಹಿತರು ಭಾಗಿಯಾಗಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ದ ವೃಕ್ಷಹಾಲ್‌ನಲ್ಲಿ ಮಧ್ಯಾಹ್ನ 12 ಗಂಟೆಗೆ ಪುಣ್ಯತಿಥಿ ನಡೆಯಲಿದೆ. ಇದಕ್ಕೂ ಮೊದಲು ಕಂಠೀರವ ಸ್ಟುಡಿಯೋದಲ್ಲಿರುವ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಮಾಧಿಗೆ ಅವರ ಕುಟುಂಬದ ಸದಸ್ಯರಿಂದ ವಿಶೇಷ ಪೂಜೆ ನಡೆಯಲಿದೆ. ನಂತರ ನವೆಂಬರ್ 24ರಂದು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರ ನಡುವೆ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಅಂದು ಅಭಿಮಾನಿಗಳು ಹಲವು ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದ್ದಾರೆ. 

ಲಯನ್ಸ್ ಕ್ಲಬ್ ನಿಂದ ಬ್ಲೆಡ್ ಕಾಂಪ್ ಕೂಡ ಆಯೋಜಿಲಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!