ಪ್ರಿಯಾ ವಾರಿಯರ್ ವಿವಾದ: ನಾನು ಯಾವ ನಟಿಯನ್ನು ವಿರೋಧಿಸಿಲ್ಲ ಎಂದ ಜಗ್ಗೇಶ್

Published : Nov 14, 2019, 09:31 AM IST
ಪ್ರಿಯಾ ವಾರಿಯರ್ ವಿವಾದ:  ನಾನು ಯಾವ ನಟಿಯನ್ನು ವಿರೋಧಿಸಿಲ್ಲ ಎಂದ ಜಗ್ಗೇಶ್

ಸಾರಾಂಶ

ಒಕ್ಕಲಿಗ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಮೇಲೆ ಜಗ್ಗೇಶ್ ಗರಂ ಆಗಿದ್ದರು. ಈ ಬಗ್ಗೆ ಸಮಜಾಯಿಷಿ ಕೊಟ್ಟಿದ್ದಾರೆ. 

ಒಕ್ಕಲಿಗ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಗಣ್ಯರೊಂದಿಗೆ ಪ್ರಿಯಾ ವಾರಿಯರ್ ವೇದಿಕೆ ಹಂಚಿಕೊಂಡಿರುವ ಬಗ್ಗೆ ನಟ ಜಗ್ಗೇಶ್ ಹೇಳಿಕೆ ಎಲ್ಲೆಡೆ ಸದ್ದು ಮಾಡಿತ್ತು. 

ಗಣ್ಯರು ಜೊತೆ ವೇದಿಕೆ ಹಂಚಿಕೊಂಡ ಪ್ರಿಯಾ ವಾರಿಯರ್‌ಗೆ ಕ್ಲಾಸ್ ತೆಗೆದುಕೊಂಡ ಜಗ್ಗೇಶ್!

ವೇದಿಕೆ ಮೇಲೆ ನಿರ್ಮಲಾನಂದ ಶ್ರೀಗಳು, ನಿರ್ದೇಶಕ ಸಾಯಿ ಪ್ರಕಾಶ್ ಜೊತೆ ಪ್ರಿಯಾ ವಾರಿಯರ್ ಕುಳಿತಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ನಿರ್ಮಾಪಕ ಕೆ ಮಂಜು ಪ್ರತಿಕ್ರಿಯಿಸಿ, 'ಜಗ್ಗೇಶ್ ಅವರಿಗೆ ಯಾಕೆ ಬೇಸರ ಎಂದು ಅರ್ಥವಾಗಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಹೊಸಬರು ಅಂದ್ರೆ ಅಸೂಯೆಪಡಬಾರದು. ಎಲ್ಲರನ್ನು ಬೆಳೆಸಬೇಕು' ಎಂದು ಹೇಳಿದ್ದರು. ಇದಕ್ಕೆ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.

ನನ್ನ ಪದಬಳಕೆ ಅರ್ಥವಾಗದೆ ಅಸೂಯೆ ಎಂದು ಭಾವಿಸಿದರೆ ದೌರ್ಭಾಗ್ಯ! ನಾನು ಯಾವ ನಟಿಯನ್ನು ವಿರೋಧಿಸಿಲ್ಲಾ! ಯಾರಿಂದ ನನಗೇನು ಆಗಬೇಕಿಲ್ಲ! ನಿರ್ಮಲಾನಂದ ಶ್ರೀಗಳ ಮಾರ್ಗದರ್ಶನ ಹಿತವಚನಕ್ಕಿಂತ ಅಲ್ಲಿದ್ದ ಯುವ ಸಮುದಾಯಕ್ಕೆ glamour ಮುಖ್ಯವಾಯಿತೆ ವಿನಹ ಬದುಕಿಗೆ ಮಾರ್ಗ ತೋರಿಸುವ ಮಾತು ನಗಣ್ಯವಾಯಿತೆ ಎಂದು ಕೊರಗಿದೆ! ಬರವಣಿಗೆ ಅರ್ಥವಾಗದ ಮಹನೀಯರು! ಎಂದು ಖಾಸಗಿ ವಾಹಿನಿಯೊಂದಕ್ಕೆ ಹೇಳಿದ್ದಾರೆ. 

 ಕೆ ಮಂಜು ಪುತ್ರ ಅಭಿನಯದ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡಲಿದ್ದಾರೆ. ಅಂದಹಾಗೆ ಬಿಜಿಎಸ್ ವಿದ್ಯಾ ಸಂಸ್ಥೆಯ ಕಾರ್ಯಕ್ರಮಕ್ಕೆ ಪ್ರಿಯಾರನ್ನು ಕೆ ಮಂಜು ಕರೆದುಕೊಂಡು ಹೋಗಿದ್ದರು. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!