
ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿದ್ದಂತೆ, ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೆ, ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೇ ಜನರು ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ನಾವು ಮಾಧ್ಯಮಗಳಲ್ಲಿ ನೋಡಬಹುದು. ಸದ್ಯದ ಪರಿಸ್ಥಿತಿ ಗಮನಿಸಿದರೆ, ಸರ್ಕಾರವನ್ನು ದೂರಬೇಕಾ ಅಥವಾ ನಿರ್ಲಕ್ಷ್ಯದಿಂದ ಜೀವನ ನಡೆಸುತ್ತಿರುವ ಸಾರ್ವಜನಿಕರನ್ನು ದೂರಬೇಕೋ ಗೊತ್ತಿಲ್ಲ. ಆದರೆ ಸೆಲೆಬ್ರಿಟಿಗಳು ಮಾತ್ರ ತಮ್ಮ ಶ್ರಮ ಮೀರಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.
'ಕೃಷ್ಣ ಟಾಕೀಸ್' ಇವತ್ತೇ ರಿಲೀಸ್; ನಟ ಅಜಯ್‌ರಾವ್ ಭಾವುಕ
ಸ್ಯಾಂಡಲ್‌ವುಡ್ ಕೃಷ್ಣ ಅಜಯ್ ರಾವ್ ಕೊರೋನಾ ಅಲೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕೆ ವಿಡಿಯೋ ಮಾಡಿದ್ದಾರೆ. 'ಕೊರೋನಾ ಅಲೆ ಭೀಕರವಾಗಿದೆ. ಜನರು ಪರದಾಡುತ್ತಿದ್ದಾರೆ. ಸಾಕಷ್ಟು ಮಂದಿ ತೊಂದರೆಗಳಲ್ಲಿ ಇರುತ್ತಾರೆ. ಸಂಖ್ಯೆಯೂ ಹೆಚ್ಚಾಗುತ್ತಿದೆ. ಸಾಮಾನ್ಯ ವ್ಯಕ್ತಿಗಳು ಕುಟುಂಬಗಳು ಭಯದಲ್ಲಿವೆ. ನಾವು ಎಲ್ಲರಲ್ಲೂ ಬೇಡಿಕೊಳ್ಳುವೆ ಪದೆ ಪದೇ ಅದನ್ನೇ ತೋರಿಸಿ ಭಯಪಡಿಸುವುದಕ್ಕಿಂತ ಎದುರಿಸುವುದು ಹೇಗೆ, ಎಂದು ತೋರಿಸಬೇಕು,' ಎಂದು ಅಜಯ್ ಮಾತನಾಡಿದ್ದಾರೆ.
"
'ಮಾಸ್ಕ್ ಬಳಸಿ ಅಂತ ಪದೆ ಪದೇ ಹೇಳುತ್ತಾರೆ. ಆದರೆ ಕೆಲವರಿಗೆ ಮಾಸ್ಕ್ ಹೇಗೆ ಬಳಸಬೇಕು ಎನ್ನುವುದೂ ಗೊತ್ತಿಲ್ಲ. ಕೊರೋನಾದಿಂದ ಅಗುವ ತೊಂದರೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. ಹೊರಗಡೆ ಹೋಗಿ ಮನೆಗೆ ಬಂದಾಗ ಬಿಸಿ ನೀರಿನಿಂದ ವಾಶ್ ಮಾಡಿ ಸ್ವಚ್ಛತೆ ಕಾಪಾಡಿಕೊಳ್ಳಿ. ನಾನು ಮಾಧ್ಯಮಗಳಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಜನರಲ್ಲಿ ಜಾಗೃತಿ ಮೂಡಿಸುವ ವಿಚಾರಗಳನ್ನು ಹೇಳಿ. ನಮ್ಮ ಕಡೆಯಿಂದ ಏನೇ ಸಹಾಯ ಬೇಕಿದ್ದರೂ ಮಾಡುತ್ತೇವೆ. ಎಲ್ಲರೂ ಒಟ್ಟಿಗೆ ಪರಿಸ್ಥಿತಿಯನ್ನು ಎದುರಿಬೇಕಿದೆ,' ಎಂದಿದ್ದಾರೆ
ಕೋವಿಡ್ ವಿರುದ್ಧ ಹೋರಾಡೋಣ; ಪ್ಲಾಸ್ಮಾ ದಾನ ಮಾಡಿ ಜೀವ ಉಳಿಸೋಣ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.