'ನಿನ್ನ ಕಂಗಳ ಬಿಸಿಯ ಹನಿಗಳು'.. ಅಪ್ಪನಿಗಾಗಿ ಅಪ್ಪು ಹಾಡಿದ್ರು ಸುಂದರ ಹಾಡು

Suvarna News   | Asianet News
Published : Apr 24, 2021, 09:44 AM ISTUpdated : Apr 24, 2021, 10:00 AM IST
'ನಿನ್ನ ಕಂಗಳ ಬಿಸಿಯ ಹನಿಗಳು'.. ಅಪ್ಪನಿಗಾಗಿ ಅಪ್ಪು ಹಾಡಿದ್ರು ಸುಂದರ ಹಾಡು

ಸಾರಾಂಶ

ಡಾ.ರಾಜ್ 92ನೇ ಜನ್ಮದಿನದ ನೆನಪು | ಅಪ್ಪನಿಗಾಗಿ ಅಪ್ಪು ಹಾಡಿದ ಭಾವುಕ ಹಾಡು | ಪೋಸ್ಟ್ ಆದ 2 ಗಂಟೆಯಲ್ಲೇ ಲಕ್ಷಕ್ಕೂ ಹೆಚ್ಚು ವ್ಯೂಸ್

ಡಾ.ಡಾಜ್‌ ಕುಮಾರ್ ಅವರ 92ನೇ ಹುಟ್ಟಿದ ಹಬ್ಬ ಇಂದು. ರಾಜ್ ಅಭಿಮಾನಿಗಳು ಹಿರಿಯ ನಟನನ್ನು ನೆನಪಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ ಕುಮಾರ್ ಸುಂದರವಾದ ಹಾಡೊಂದನ್ನು ತಂದೆಗಾಗಿ ಡೆಡಿಕೇಟ್ ಮಾಡಿದ್ದಾರೆ.

ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ ಎಂದು ಆರಂಭವಾಗುವ ಹಾಡು ಅರ್ಥಪೂರ್ಣವಾಗಿ ಭಾವನಾತ್ಮಕವಾಗಿ ಮೂಡಿ ಬಂದಿದೆ. ತಂದೆ ಕುರಿತ ಅಪ್ಪು ಪ್ರೀತಿ, ಮಮತೆ, ತಂದೆ-ಮಗನ ಗಾಢ ಸಂಬಂಧವನ್ನು ಸರಳ ಹಾಡಿನಲ್ಲಿ ಸುಂದರವಾಗಿ ಹಾಡಿನಲ್ಲಿ ಮೂಡಿ ಬಂದಿದೆ.

ಅಪ್ಪು, ಶಿವಣ್ಣ, ಕಿಚ್ಚ ಸೇರಿ ಸ್ಯಾಂಡಲ್‌ವುಡ್ ದಿಗ್ಗಜರ ಸಿನಿಮಾ ಶೂಟಿಂಗ್‌ಗೆ ಬ್ರೇಕ್

ಹಾಡಿನ ವಿಡಿಯೋವನ್ನು ಅಪ್ಪು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಶೇರ್ ಆಗಿ 2 ಗಂಟೆಯಲ್ಲಿ  1 ಲಕ್ಷಕ್ಕೂ ಹೆಚ್ಚು ವ್ಯೂಸ್ ಪಡೆದಿದೆ. ಅಪ್ಪಾಜಿ ಅವರ ೯೨ನೆ ಜನ್ಮದಿನದ ಪ್ರಯುಕ್ತ ನಮ್ಮ ಒಂದು ಪುಟ್ಟ ಕಾಣಿಕೆ ಎಂದು ಕ್ಯಾಪ್ಶನ್ ಕೊಟ್ಟು ಪುನೀತ್ ವಿಡಿಯೋ ಶೇರ್ ಮಾಡಿದ್ದಾರೆ.

ಹಾಡನ್ನು ವೀಕ್ಷಿಸಿ ಬಹಳಷ್ಟು ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ನಿಮ್ಮ ಧ್ವನಿಯಲ್ಲಿ ಹಾಡು ಕೇಳಿ ರಾಜ್ ನೆನಪಾದರು ಎಂದು ಕಮೆಂಟಿಸಿದ್ದಾರೆ ಅಭಿಮಾನಿಗಳು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ
ಯಶ್- ರಾಧಿಕಾ ಪುತ್ರಿಗೆ 7 ವರ್ಷಗಳ ಸಂಭ್ರಮ: ಹುಟ್ಟುಹಬ್ಬದ ಕ್ಯೂಟ್​ ಫೋಟೋಗಳು ಇಲ್ಲಿವೆ