ಡಿಸೆಂಬರ್ 2ನೇ ವಾರದಲ್ಲಿ ಅಭಿಷೇಕ್ ನಿಶ್ಚಿತಾರ್ಥ. ತಂದೆ -ತಾಯಿ ವಿವಾಹ ವಾರ್ಷಿಕೋತ್ಸವದ ದಿನ ಗುಡ್ ನ್ಯೂಸ್ ರಿವೀಲ್ ಮಾಡುವ ಸಾಧ್ಯತೆ...
ಕನ್ನಡ ಚಿತ್ರರಂಗದ ಓನ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಮುದ್ದಿನ ಪುತ್ರ ಅಭಿಷೇಕ್ ಅಂಬರೀಶ್ ಡಿಸೆಂಬರ್ 2ನೇ ವಾರದಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹುಡುಗಿ ಯಾರೆಂದು ಪದೇ ಪದೇ ಪ್ರಶ್ನೆ ಮಾಡುತ್ತಿರುವ ಅಭಿಮಾನಿಗಳಿಗೆ ಇಲ್ಲಿದೆ ಸಣ್ಣ ಕ್ಲಾರಿಟಿ...
ಹೌದು! ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಅವಿವಾ ಬಿದ್ದಪ್ಪ ಮತ್ತು ಅಭಿಷೇಕ್ ಮದುವೆಯಾಗುತ್ತಿದ್ದಾರೆ. ಅಂಬಿ- ಸುಮಲತಾ ವಿವಾಹ ವಾರ್ಷಿಕೋತ್ಸವದ ದಿನ ಅಂದ್ರೆ ಡಿಸೆಂಬರ್ 8ರಂದು ಅನೌನ್ಸ್ ಮಾಡಲಿದ್ದು ಡಿಸೆಂಬರ್ 11ರಂದು ಮದುವೆ ನಿಶ್ಚಿತಾರ್ಥ ಮಾಡಲು ಗುರು ಹಿರಿಯರು ನಿಶ್ಚಯಿಸಿದ್ದಾರೆ ಎನ್ನಲಾಗಿದೆ. ನಿಶ್ಚಿತಾರ್ಥಕ್ಕೆ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್‌ರನ್ನು ಕೂಡ ಆಹ್ವಾನಿಸಲಾಗಿದೆ.
ಖ್ಯಾತ ಫ್ಯಾಷನ್ ಡಿಸೈನರ್ ಗುರು ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಮತ್ತು ಅಭಿಷೇಕ್ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಬ್ಬರ ಪ್ರೀತಿಯನ್ನು ಮನೆಯಲ್ಲಿ ಗುರು-ಹಿರಿಯರು ಒಪ್ಪಿಕೊಂಡು ಮದುವೆ ಮಾಡಿಸಲು ಮುಂದಾಗಿದ್ದಾರೆ. ಅವಿವಾ ವೃತ್ತಿ ಜೀವನದ ಬಗ್ಗೆ ಯಾವುದೇ ಮಾಹಿತಿ ಇಲ್ಲ....
ಸುಮಲತಾ ರಿಯಾಕ್ಷನ್:
ಮದ್ದೂರು ತಾಲೂಕು ದೊಡ್ಡರಸಿನಕೆರೆ ಗ್ರಾಮದಲ್ಲಿ ಮಾತನಾಡಿದ ಸುಮಲತಾ ಕಳೆದ ಮೂರು ವರ್ಷಗಳಿಂದ ಅಭಿಷೇಕ್ ವಿವಾಹದ ವಿಷಯ ಆಗಾಗ ಕೇಳಿಬರುತ್ತಲೇ ಇದೆ. ಹುಡುಗಿ ಇದ್ರೆ ನನಗೂ ಹೇಳಿ, ನಾನೂ ನೋಡುತ್ತೇನೆ ಎಂದು ನಗುತ್ತಲೇ ಸುಮಲತಾ ಉತ್ತರಿಸಿದರು. ಮದುವೆ ಕುರಿತಾದ ಪ್ರಶ್ನೆ ಅಭಿಷೇಕ್ ಕಡೆ ತೂರಿಬಂದಾಗ, ನಾನು ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ ಎಂದಷ್ಟೇ ಹೇಳಿ ಜಾರಿಕೊಂಡರು.
Abishek Ambareesh; ಅಂಬಿ ಪುತ್ರನ ಮೊದಲ ಮೆಟ್ರೋ ಪಯಣ ಹೇಗಿತ್ತು ನೋಡಿ
ಅಭಿಷೇಕ್ ಫುಲ್ ಬ್ಯೂಸಿ:
ಬ್ಯಾಡ್‌ಮ್ಯಾನರ್ಸ್ ಸಿನಿಮಾ ಚಿತ್ರೀಕರಣ ಮುಗಿಯುತ್ತಿದ್ದಂತೆ ಅಭಿಷೇಕ್ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ. ಕಾಂತಾರ ಬೆಡಗಿ ಸಪ್ತಮಿ ಗೌಡ ಜೊತೆ ಕಾಳಿ ಸಿನಿಮಾ ಒಪ್ಪಿಕೊಂಡಿದ್ದಾರೆ. ಕಾಳಿ ಸಿನಿಮಾದ ಮುಹೂರ್ತ ಸೋಮವಾರ ಬೆಳಿಗ್ಗೆ ನಗರದ ಶ್ರೀ ಬಂಡು ಮಹಾಕಾಳಿ ದೇವಸ್ಥಾನದಲ್ಲಿ ಯಶಸ್ವಿಯಾಗಿ ನೆರವೇರಿದೆ. ವಿಶೇಷ ಎಂದರೆ ಚಿತ್ರಕ್ಕೆ ಎಸ್. ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಕಾಳಿ ಸಿನಿಮಾ 1990ರ ದಶಕದ ಕಾವೇರಿ ಗಲಭೆಯ ಹಿನ್ನೆಲೆಯಲ್ಲಿ ನಡೆಯುವ ಚಿತ್ರವಾಗಿದೆ. ನಿರ್ದೇಶಕ ಕೃಷ್ಣ ಅವರ ಪತ್ನಿ ಸ್ವಪ್ನಾ ಕೃಷ್ಣ ತಮ್ಮ RRR ಮೋಷನ್ ಪಿಕ್ಚರ್ಸ್ ಸಂಸ್ಥೆಯಡಿ ನಿರ್ಮಾಣ ಮಾಡುತ್ತಿದ್ದಾರೆ. ಕಾಳಿ ಚಿತ್ರಕ್ಕೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಟಗರು' 'ಸಲಗ' ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಚರಣ್ ರಾಜ್ ಈ ಚಿತ್ರದ ಸಂಗೀತ ನೀಡುತ್ತಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ ಮತ್ತು 'ಕೆಜಿಎಫ್' ಖ್ಯಾತಿಯ ಚಂದ್ರಮೌಳಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುುತ್ತಿದ್ದಾರೆ. 2023ರ ಜನವರಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
ಶಾಸಕರ ಸ್ಥಾನಕ್ಕೆ ಅಭಿ?
ಅಂಬರೀಶ್ ಸಿನಿಮಾ ಮತ್ತು ರಾಜಕೀಯ (Politics ) ಎರಡು ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಅದರಂತೆ ಪುತ್ರ ಅಭಿಷೇಕ್ ವರ್ಷಕ್ಕೆ ಎರಡು ಅಥವಾ ಮೂರು ಚಲನಚಿತ್ರದಲ್ಲಿ ಅಭಿನಯಿಸಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ. ಜೊತೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆಲ್ಲಲಿ ಹಾರೈಸಿದರು.ಈ ವೇಳೆ ಅಂಬರೀಶ್ ಅಭಿಮಾನಿಗಳಾದ ಕೆನ್ನಾಳು ಲಿಂಗರಾಜು, ಮೆಸ್ ಪ್ರಕಾಶ್, ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಸುಬ್ಬಣ್ಣ, ಎಲೆಕೆರೆ ಈರೇಗೌಡ, ಹರೀಶ್, ಕೆರೆತೊಣ್ಣೂರು ಪ್ರಕಾಶ, ಸಯ್ಯಾದ್ ಆಸ್ಕರ್, ಗ್ಯಾಸ್ ತಮ್ಮಣ್ಣ, ಆಟೋ ಜಲೇಂದ್ರ, ಕೆನ್ನಾಳು ಅಣ್ಣಯ್ಯ ಸೇರಿದಂತೆ ಅಭಿಮಾನಿಗಳಿದ್ದರು.