40ನೇ ವಯಸ್ಸಿಗೆ 40ನೇ ಸಿನಿಮಾ ಸಹಿ ಮಾಡಿದ ರಮ್ಯಾ; ಮಿಸ್ ಮಾಡ್ದೆ ನೋಡಲೇ ಬೇಕಾದ ಚಿತ್ರಗಳಿವು

By Vaishnavi ChandrashekarFirst Published Nov 29, 2022, 2:24 PM IST
Highlights

ಉತ್ತರಕಾಂಡ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿರುವ ಮೋಹಕ ತಾರೆ. 39 ಸಿನಿಮಾಗಳ ಗೋಲ್ಡನ್ ಕ್ವೀನ್....

ಮೋಹಕ ತಾರೆ ರಮ್ಯಾ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದಿವ್ಯಾ ಸ್ಪಂದನ ಹುಟ್ಟಿದ್ದು ನವೆಂಬರ್ 29, 1982ರಲ್ಲಿ. ಸಿನಿಮಾ ಮತ್ತು ರಾಜಕೀಯದಲ್ಲಿ ತೊಡಗಿಸಿಕೊಂಡ ನಟಿ ನೂರಾರು ಪ್ರಶಸ್ತಿಗಳನ್ನು ಗಟ್ಟಿಸಿಕೊಂಡಿದ್ದಾರೆ. ವಜ್ರೇಶ್ವರಿ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಕಾರಣ ಡಾ. ಪಾರ್ವತಮ್ಮ ರಾಜ್‌ಕುಮಾರ್‌ ಕುಟುಂಬಕ್ಕೆ ಋಣಿ ಎಂದು ಪದೇ ಪದೇ ಹೇಳುತ್ತಾರೆ. ಮಿಸ್ ಮಾಡದೆ ನೋಡಬೇಕು ರಮ್ಯಾ ಈ ಸಿನಿಮಾಗಳು...

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ 2003ರಲ್ಲಿ ಅಭಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಮ್ಯಾ ಬ್ಯಾಕ್ ಟು ಬ್ಯಾಕ್ ಬಾಕ್ಸ್‌ ಹಿಟ್‌ ಕೊಟ್ಟಿದ್ದು ಆಕಾಶ್, ಗೌರಮ್ಮ ಮತ್ತು ಅಮೃತಧಾರೆ ಸಿನಿಮಾ. ಅಲ್ಲಿಂದ ರಮ್ಯಾ ಜರ್ನಿ ಶುರುವಾಗಿದ್ದು ಹಿಂತಿರುಗಿ ನೋಡಿದರೆ ಪ್ರಶಸ್ತಿಗಳಷ್ಟೇ ಕಾಣಿಸುತ್ತದೆ.  2006ರಲ್ಲಿ ಜೂಲಿ ಸಿನಿಮಾ ದೊಡ್ಡ ಎಡವಟ್ಟು ಕ್ರಿಯೇಟ್ ಮಾಡಿತ್ತು. 1957 ಹಿಂದಿ ರಿಮೇಕ್‌ ಸಿನಿಮಾ ಇದಾಗಿದ್ದು ವೀಕ್ಷಕರ ಮನವೊಲಿಸುವುದರಲ್ಲಿ ವಿಫಲರಾದ್ದರು. ಇದಾದ ಮತ್ತೊಮ್ಮೆ ಬ್ರೇಕ್ ಕೊಟ್ಟಿದ್ದು ಜೊತೆ ಜೊತೆಯಲಿ ಸಿನಿಮಾ. ಮತ್ತೆ 2006ರಲ್ಲಿ ತನನಂ ತನನಂ ಬಾಕ್ಸ್‌ ಆಫೀಸ್‌ನಲ್ಲಿ ಫೇಲ್‌ ಆದ್ದರೂ ಬೆಸ್ಟ್‌ ನಟಿ ಫಿಲ್ಮಂ ಫೇರ್‌ ಅವಾರ್ಡ್‌ ತಂದು ಕೊಟ್ಟಿತ್ತು. ಇದಾದ ಮೇಲೆ ಅರಸು ಮತ್ತು ಪೊಲ್ಲಾಧವನ್ ಬಿಗ್ ಹಿಟ್ ತಂದುಕೊಟ್ಟಿತ್ತು. 

ಹೀಗೆ ಒಂದು ಹಿಟ್ ಮತ್ತೊಂದು ಫ್ಲಾಪ್‌ ....ಜರ್ನಿಯಲ್ಲಿ ರಮ್ಯಾ ಕನ್ನಡ ಸಿನಿ ರಸಿಕರ ಮನಸ್ಸಿಗೆ ತುಂಬಾನೇ ಹತ್ತಿರವಾದ್ದರು. ಮುಸ್ಸಂಜೆ ಮಾತು, ಕಿಚ್ಚ ಹುಚ್ಚ, ಸಂಜು ವೆಡ್ಸ್‌ ಗೀತಾ, ಜಾನಿ ಮೇರ ನಾಮ್ ಪ್ರೀತಿ ಮೇರಾ ಕಾಮ್,ಸಿದ್ಲಿಂಗು, ಲಕ್ಕಿ ಹೀಗೆ ಕಂಡಿದ್ದು ಹಿಟ್‌ಗಳೇ...39 ಸಿನಿಮಾಗಳಲ್ಲಿ ಅಭಿನಯಿಸಿದ ನಂತರ ರಾಜಕೀಯದಲ್ಲಿ ತೊಡಗಿಸಿಕೊಂಡರು. 

Ramya: ಇದು ಮೋಹಕ ತಾರೆಯ ಸಂತೋಷ ಗುಟ್ಟು: ನಾನು ಮದುವೆಯಾಗಲ್ಲ ಅಂದ್ರು ರಮ್ಯಾ

2012ರಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್‌ ಸೇರಿಕೊಂಡ ರಮ್ಯಾ  2013 ರಲ್ಲಿ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಕರ್ನಾಟಕದ ಮಂಡ್ಯ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಸಂಸದರಾದರು.2014ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಮಂಡ್ಯದಿಂದ ಸ್ಪರ್ಧಿಸಿದರು 5,500 ಮತಗಳ ಅಂತರದಿಂದ C. S. ಪುಟ್ಟರಾಜು ಅವರನ್ನು ಸೋಲಿಸಿದ್ದರು. ರಾಜಕೀಯ ಜರ್ನಿಗೆ 2018ರಲ್ಲಿ ಬ್ರೇಕ್ ಹಾಕಿದ್ದರು. 

ಎಲ್ಲರಿಂದ ಮದ್ವೆ ಪ್ರಶ್ನೆ:

ರಮ್ಯಾ ಸಿಂಗಲ್ ಆಗಿರುವುದಕ್ಕೆ ಪ್ರತಿಯೊಬ್ಬರು ಮದುವೆ ಬಗ್ಗೆ ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಮದ್ವೆ ಯಾವಾಗ ಎಂದವರಿಗೆ ಉತ್ತರ ಕೊಟ್ಟರು... 'ಮದ್ವೆ ಏನಕ್ಕೆ ಆಗಬೇಕು ಅಂತ ನನಗೆ ಅರ್ಥ ಆಗಲ್ಲ. ಮದ್ವೆ ಆಗ್ಬೇಡಿ ಅಂತ ಹೇಳಿದ್ದೀರಾ ಅಲ್ವಾ? ಅದೇ ಬೆಸ್ಟ್‌ ಅಗಲ್ಲ. ನಾನು ಮದುವೆ ಆಗೋಲ್ಲ' ಎಂದು ರಮ್ಯಾ ಹೇಳಿದ್ದಾರೆ. 'ಮದ್ವೆ ಯಾಕೆ ಆಗಬೇಕು? ಒಂದು ಖುಷಿಯಾಗಿರಬೇಕು ಇಲ್ಲದಿದ್ದರೆ ಮದ್ವೆ ಆಗಬೇಕು. ಯಾವುದಾದ್ದರೂ ಒಂದು ಆಯ್ಕೆ ಮಾಡಬೇಕು ನಾನು ಖುಷಿಯಾಗಿರುವುದನ್ನು ಆಯ್ಕೆ ಮಾಡಿಕೊಳ್ಳುತ್ತೀನಿ.100% ಮದ್ವೆ ವಿಚಾರ ಕೇಳುತ್ತೀರಾ ಅಂತ ನನಗೆ ಗೊತ್ತಿತ್ತು. ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಇರಬೇಕು ವಿದ್ಯಾಭ್ಯಾಸ ತುಂಬಾ ಮುಖ್ಯ. ನಿಮಗೆ ಒಳ್ಳೆಯ ಸೋಲ್‌ಮೇಟ್‌ ಸಿಕ್ಕರೆ ಮದ್ವೆ ಆಗಿ ಖುಷಿಯಾಗಿರಿ.ಲವ್ ಹೊರತು ಪಡಿಸಿ ಮದುವೆ ವಿಚಾರಕ್ಕೆ ಒತ್ತಾಯ ಮಾಡಿದ್ದರೆ ಒಪ್ಪಿಕೊಳ್ಳಬೇಡಿ. ನನಗೆ ಇನ್ನೂ ಯಾರೂ ಸಿಕ್ಕಿಲ್ಲ ಸಿಕ್ಕರೆ ಮದ್ವೆ ಆಗ್ತೀನಿ' ಎಂದು ಮೋಹಕ ತಾರೆ ಹೇಳಿದ್ದಾರೆ.

click me!