
2020ರಲ್ಲಿ ತೆರೆಕಂಡ ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿ, ನಿರ್ದೇಶಿಸಿರುವ 'ಲವ್ ಮಾಕ್ಟೇಲ್' (Love Mocktail) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಯುವ ನಟ ಅಭಿಲಾಷ್ (Abhilash), ಇದೀಗ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ (Om Prakash Rao) ಅವರೊಂದಿಗೆ ತಮ್ಮ ಮುಂದಿನ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. 'ಎಕೆ 47', 'ಲಾಕಪ್ ಡೆತ್' ಮತ್ತು 'ಹುಚ್ಚ' ದಂತಹ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ ಓಂ ಪ್ರಕಾಶ್ ರಾವ್ ಈ ಬಾರಿ ರೊಮ್ಯಾಂಟಿಕ್ ಡ್ರಾಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ನಿರ್ಮಾಣದ ಕೊನೆಯ ಹಂತದಲ್ಲಿದೆ.
ಅಭಿಲಾಷ್ ರಂಗಭೂಮಿ ಕಲಾವಿದನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿ, ಮೈಸೂರು ಮೈಮ್ ತಂಡದಲ್ಲಿ (Mysore Mime team) ಗುರುತಿಸಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರ 'ಲವ್ ಮಾಕ್ಟೇಲ್' ಚಿತ್ರದಲ್ಲಿ ವಿಜಯ್ ಪಾತ್ರದಲ್ಲಿ ನಟಿಸಿದ್ದಾರೆ. ಇಲ್ಲಿಯವರೆಗೆ ಆರಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟನಾಗಿ ಅಭಿನಯಿಸಿರುವ ಅಭಿಲಾಷ್ ಮೊದಲ ಬಾರಿಗೆ ಓಂ ಪ್ರಕಾಶ್ ರಾವ್ ಅವರಂತಹ ಹಿರಿಯ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಹಾಗೂ ಸುಮಾರು 50 ಚಿತ್ರಗಳನ್ನು ನಿರ್ಮಿಸಿರುವ ಓಂ ಪ್ರಕಾಶ್ ರಾವ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಕನ್ನಡದ ದೊಡ್ಡ ಸೂಪರ್‌ಸ್ಟಾರ್‌ಗಳೊಂದಿಗೆ ಕೆಲಸ ಮಾಡುತ್ತಿರುವುದು ನನ್ನ ಸೌಭಾಗ್ಯ ಎಂದು ಖಾಸಗಿ ಪತ್ರಿಕೆಯೊಂದಕ್ಕೆ ಅಭಿಲಾಷ್ ಸಂದರ್ಶನ ನೀಡಿದ್ದಾರೆ.
ವೈಕುಂಠದಲ್ಲಿ ಅಪ್ಪಾಜಿಗೆ ಪುನೀತ್ ರಾಜ್‌ಕುಮಾರ್ ಸರ್‌ಪ್ರೈಸ್!
ಇತ್ತಿಚೆಗಷ್ಟೇ ಚಂದನ್ ನಿರ್ದೇಶನದ 'ಲವ್ ಬಾಬಾ' (Love Baba) ಚಿತ್ರದ ಮೂಲಕ ಅಭಿಲಾಷ್ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕಾಗಿತ್ತು, ಆದರೆ ಚಿತ್ರದ ಶೂಟಿಂಗ್ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಸಿನಿಮಾ ಮುಂದೂಡಲ್ಪಟ್ಟಿದೆ. ಇನ್ನು ಹೆಸರಿಡದ ರೋಮ್ಯಾಂಟಿಕ್ ಡ್ರಾಮಾ ಚಿತ್ರವನ್ನು ಸಂಪೂರ್ಣವಾಗಿ ಮೈಸೂರಿನಲ್ಲಿ ಚಿತ್ರೀಕರಿಸಲಾಗುತ್ತಿದೆ. ಚಿತ್ರದ ಹಾಡುಗಳ ಶೂಟಿಂಗ್ ಬಾಕಿಯಿದ್ದು, ಅಭಿಲಾಷ್ ಜೊತೆಗೆ ಐಶ್ವರ್ಯ ರಾವ್, ರಂಗಾಯಣ ರಘು , ಸುಧಾ ಬೆಳವಾಡಿ , ಅಚ್ಯುತ್ ರಾವ್, ರಿಷಿ ಗೌಡ ಮುಂತಾದವರು ತಾರಾಗಣದಲ್ಲಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರ 'ಶ್ರೀಕೃಷ್ಣ@ಜಿಮೇಲ್.ಕಾಮ್' ಮತ್ತು 'ಶುಗರ್ ಫ್ಯಾಕ್ಟರಿ'ಯಲ್ಲಿ ಅಭಿಲಾಷ್ ನಟಿಸಿದ್ದರು. ಇನ್ನು ಈ ಹಿಂದೆ 'ಲವ್ ಬಾಬಾ' ಚಿತ್ರದಲ್ಲಿ ಅಭಿಲಾಷ್ ನಟಿಸುತ್ತಿದ್ದು, ಮೈಸೂರಿನ ಪ್ರಿಯಾ ಬಾಲಾಜಿ ಪ್ರೊಡಕ್ಷನ್ಸ್ ಮತ್ತು ನವರತ್ನಪ್ರಸಾದ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಚಂದನ್‌ಗೌಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಭಿಲಾಷ್‌ಗೆ ನಾಯಕಿಯಾಗಿ ಮಾಡೆಲ್ ಮಹಿಮಾ ಅಭಿನಯಿಸುತ್ತಿದ್ದಾರೆ.
ಆರ್ಯ ಜೊತೆಗೆ ಕಾಲಿವುಡ್ ಚಿತ್ರದಲ್ಲಿ ಕಾವ್ಯಾ ಶೆಟ್ಟಿ
ಲವ್ವರ್‌ಗಳು ದಾರಿ ತಪ್ಪಿದಾಗ ತಿದ್ದಿ ಬುದ್ಧಿ ಹೇಳುವ ಬಾಬಾನ ಪಾತ್ರದಲ್ಲಿ ಖ್ಯಾತ ನಟ, ನಿರ್ದೇಶಕ ಓಂಪ್ರಕಾಶ್‌ರಾವ್ ನಟಿಸುತ್ತಿರುವುದು ವಿಶೇಷ. ಮೈಸೂರಿನ ಲವರ್‌ಗಳು ಹೇಗಿದ್ದಾರೆ, ಎಲ್ಲೆಲ್ಲಿ ಟ್ರಾವೆಲ್ ಮಾಡ್ತಾರೆ, ಯಾವ ರೀತಿ ಜಗಳ ಆಡ್ತಾರೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗುತ್ತದೆ. ಮತ್ತು ಕಥೆ, ಚಿತ್ರಕಥೆ, ಸಂಭಾಷಣೆಯ ಹೊಣೆಯನ್ನೂ ನಿರ್ದೇಶಕ ಚಂದನ್‌ಗೌಡ ಅವರೇ ಹೊತ್ತಿದ್ದಾರೆ. ಮೈಸೂರಿನ ರಂಗಾಯಣ ಅಭಿನಯ ತರಬೇತಿ ಪಡೆದಿರುವ ಸಂತೋಷ್, ಮನೋಜ್, ನಟನದಲ್ಲಿ ಅಭಿನಯ ತರಬೇತಿ ಪಡೆದಿರುವ ರಾಕೇಶ್ ನಾಯಕನ ಸ್ನೇಹಿತರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.